SPORTS
ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ಕ್ರೀಡಾಪಟುಗಳ ಭರ್ಜರಿ ಪದಕ ಬೇಟೆ. 51 ಪದಕ ಗೆದ್ದ ಕರ್ನಾಟಕದ ಈಜು ಪಟುಗಳು. ಶ್ರೀಹರಿ ನಟರಾಜ್‌ಗೆ 5 ಚಿನ್ನದ ಪದಕ. ಇಲ್ಲಿದೆ ಪದಕದ ವಿವರ.
ಪುಣೆ(ಜ.16): ಕಳೆದ ಆವೃತ್ತಿಯಲ್ಲಿ ಸಮಗ್ರ ಚಾಂಪಿಯನ್ ಆಗಿದ್ದ ಕರ್ನಾಟಕ ಈಜು ತಂಡ, 2ನೇ ಆವೃತ್ತಿಯ ಖೇಲೋ ಇಂಡಿಯಾ ಕೂಟದ ಈಜು ಸ್ಪರ್ಧೆಯಲ್ಲಿ 51 ಪದಕ ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಆದರೂ ಅಂಕಗಳ ಆಧಾರದ ಮೇಲೆ ಸಮಗ್ರ ಚಾಂಪಿಯನ್‌ಶಿಪ್ ಜಯಿಸುವಲ್ಲಿ ಕರ್ನಾಟಕ ತಂಡ ವಿಫಲವಾಗಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಅಂಡರ್-17 ವಿಭಾಗದಲ್ಲಿ ದೆಹಲಿ, ಅಂಡರ್-21 ವಿಭಾಗದಲ್ಲಿ ಮಹಾರಾಷ್ಟ್ರ ಸಮಗ್ರ ಚಾಂಪಿಯನ್ ಆಗಿವೆ.
ಇದನ್ನೂ ಓದಿ: AFC ಕಪ್ ಸೋಲು- ಭಾರತ ಕೋಚ್ ರಾಜೀನಾಮೆ
ಕೊನೆಯ ದಿನದ ಸ್ಪರ್ಧೆಯಲ್ಲಿಯೂ ಕರ್ನಾಟಕ ಈಜು ತಂಡ 10 ಪದಕ ಜಯಿಸಿತು. ಇದರಲ್ಲಿ 3 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಪದಕ ಸೇರಿವೆ. ಬಾಲಕರ ವಿಭಾಗದಲ್ಲಿ ಕರ್ನಾಟಕ 15 ಚಿನ್ನ, 7 ಬೆಳ್ಳಿ, 8 ಕಂಚು ಹಾಗೂ ಬಾಲಕಿಯರ ವಿಭಾಗದಲ್ಲಿ 6 ಚಿನ್ನ, 10 ಬೆಳ್ಳಿ, 5 ಕಂಚು ಮೂಡಿತು. ಒಟ್ಟಾರೆ 21 ಚಿನ್ನ, 17 ಬೆಳ್ಳಿ, 13 ಕಂಚಿನೊಂದಿಗೆ 51 ಪದಕಗಳನ್ನು ರಾಜ್ಯ ಈಜು ಪಟುಗಳು ಕೊಳ್ಳೆ ಹೊಡೆದರು. ದೆಹಲಿ (48), ಮಹಾರಾಷ್ಟ್ರ (42) ನಂತರದ ಸ್ಥಾನ ಪಡೆದವು.
ಇದನ್ನೂ ಓದಿ:ಐಸಿಸಿಗೆ ನೂತನ ಸಿಇಒ ಆಯ್ಕೆ- ಭಾರತಕ್ಕೆ ಒಲಿಯಿತು ಪಟ್ಟ!
ಈಜಿನಲ್ಲಿ ಅರ್ಧಶತಕ: ಅಂತಿಮ ದಿನದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಈಜು ಪಟುಗಳು ತಲಾ 3 ಚಿನ್ನ, ಬೆಳ್ಳಿ ಹಾಗೂ 4 ಕಂಚು ಗೆದ್ದರು. ಅಂಡರ್-17 ಬಾಲಕಿಯರ 1500 ಮೀ. ಫ್ರೀಸ್ಟೆ್ರೖಲ್‌ನಲ್ಲಿ ಖುಷಿ ದಿನೇಶ್ 18:29.37 ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. 200 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ಸಾನ್ವಿ ರಾವ್ ಬೆಳ್ಳಿ, ರಚನಾ ರಾವ್ ಕಂಚು ಜಯಿಸಿದರು. 50 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಸುವನಾ ಭಾಸ್ಕರ್ 31.27 ಸೆ.ಗಳಲ್ಲಿ ಗುರಿ ಮುಟ್ಟಿಚಿನ್ನ ಗೆದ್ದರು. ಅಂಡರ್ 21 ಬಾಲಕಿಯರ 200 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ಹರ್ಷಿತಾ ಕಂಚು ಗೆದ್ದರು. ಅಂಡರ್-17 ಬಾಲಕರ 200 ಮೀ. ಬ್ರೆಸ್ಟ್‌ಸ್ಟೊ್ರೕಕ್‌ನಲ್ಲಿ ಲಿತೇಶ್ 2:32.17 ಸೆ.ಗಳಲ್ಲಿ ಗುರಿ ಮುಟ್ಟಿಕಂಚು ಗೆದ್ದರು. 100 ಮೀ. ಫ್ರೈಸ್ಟೈಲ್‌ನಲ್ಲಿ ಸಂಜಯ್ ಬೆಳ್ಳಿ ಜಯಿಸಿದರು. ಅಂಡರ್-21 ಬಾಲಕರ 200 ಮೀ. ಬ್ರೆಸ್ಟ್ ಸ್ಟೊ್ರೕಕ್‌ನಲ್ಲಿ ಲಿಖಿತ್ ಕಂಚು ಜಯಿಸಿದರು. 50 ಮೀ. ಬ್ಯಾಕ್‌ಸ್ಟೊ್ರೕಕ್ ಹಾಗೂ 100 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್ ಚಿನ್ನ ಜಯಿಸಿದರು. ಇದು ಸೇರಿದಂತೆ ಶ್ರೀಹರಿ ಕೂಟದಲ್ಲಿ ಒಟ್ಟು 5 ಚಿನ್ನದ ಪದಕ ಗೆದ್ದರು.
ಇದೇ ವೇಳೆ ಮಂಗಳವಾರ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕ 1 ಬೆಳ್ಳಿ, 1 ಕಂಚಿನ ಪದಕ ಜಯಿಸಿತು. ಅಂಡರ್-21 ಬಾಲಕಿಯರ 87 ಕೆ.ಜಿ ವಿಭಾಗದಲ್ಲಿ ಭವಿಷ್ಯ ಬೆಳ್ಳಿ ಪದಕ ಗೆದ್ದರೆ, ಪುರುಷರ 109 ಕೆ.ಜಿ ವಿಭಾಗದಲ್ಲಿ ನಿಶಾಂತ್ ಕಂಚಿಗೆ ಕೊರೊಳೊಡ್ಡಿದರು.