ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರಿಗೆ ರಾಜ್ಯದ ಪ್ಯಾರ ಅಥ್ಲೀಟ್ ಹೆಚ್.ಎನ್.ಗಿರೀಶ್ ಗೌರವ ಸಮರ್ಪಿಸಿದ್ದಾರೆ. ಶಾರ್ಜಾದಲ್ಲಿ ನಡೆಯುತ್ತಿರುವ ಐವಾಸ್ ಹೈಜಂಪ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ್ದಾರೆ.
ಶಾರ್ಜಾ(ಫೆ.19): ಇಲ್ಲಿ ನಡೆಯುತ್ತಿರುವ ಐವಾಸ್ ಅಂತಾರಾಷ್ಟ್ರೀಯ ಕ್ರೀಡಾಕೂಟದ ಹೈಜಂಪ್‌ನಲ್ಲಿ ಕರ್ನಾಟಕದ ಪ್ಯಾರಾ ಅಥ್ಲೀಟ್ ಗಿರೀಶ್ ಚಿನ್ನದ ಪದಕ ಜಯಿಸಿದ್ದಾರೆ. ಈ ಚಿನ್ನದ ಪದಕವನ್ನು ಪುಲ್ವಾಮ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಅರ್ಪಿಸಿದ್ದಾರೆ. ಈ ವರ್ಷದಲ್ಲಿ ಗಿರೀಶ್ ಗೆದ್ದ ಮೊದಲ ಪದಕವಿದು.
ಇದನ್ನೂ ಓದಿ: ಶೂಟಿಂಗ್ ವಿಶ್ವಕಪ್: ಪಾಕ್ ಶೂಟರ್‌ಗಳಿಗೆ ಭಾರತ ವೀಸಾ
2012ರ ಲಂಡನ್ ಪ್ಯಾರಾ ಒಲಿಂಪಿಕ್ ನ ಹೈ ಜಂಪ್ ವಿಭಾಗದಲ್ಲಿ74 ಮೀ ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ವಿಜೇತರಾಗಿದ್ದ ಗಿರೀಶ್ ಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ 2014ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಜತೆ ಕ್ರಿಕೆಟ್ ಸಾಧ್ಯವಿಲ್ಲ: ಐಪಿಎಲ್ ಚೇರ್ಮೆನ್
ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಈ ದಾಳಿ ನಡೆಸಿದ್ದು, ಇದೀಗ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.