ಹಾಲಿ-ಮಾಜಿ ಕ್ರೀಡಾಪಟುಗಳಿಗೆ ಮೆಡಿಕಲ್ ಇನ್ಶುರೆನ್ಸ್‌; IOA ಮಹತ್ವದ ಘೋಷಣೆ

By Naveen Kodase  |  First Published Feb 23, 2023, 12:13 PM IST

ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ ದೇಶದ ಕ್ರೀಡಾಪಟುಗಳಿಗೆ ಸಿಹಿ ಸುದ್ದಿ
ಹಾಲಿ-ಮಾಜಿ ಕ್ರೀಡಾಪಟುಗಳಿಗೆ ವೈದ್ಯಕೀಯ ವಿಮೆ ಘೋಷಿಸಿದ ಐಒಎ
ಐಒಎ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ತೀರ್ಮಾನ


ನವದೆಹಲಿ(ಫೆ.23): ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ವೈದ್ಯಕೀಯ ವಿಮೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ)ಯು ದೇಶದ ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳಿಗೆ ಮೆಡಿಕಲ್ ಇನ್ಶುರೆನ್ಸ್‌ ಮಾಡಲು ಮುಂದಾಗಿದೆ.

ಹೌದು, ಮಂಗಳವಾರ ಇಲ್ಲಿನ ಒಲಿಂಪಿಕ್‌ ಭವನದಲ್ಲಿ ನಡೆದ ಭಾರತೀಯ ಒಲಿಂಪಿಕ್ ಸಂಸ್ಥೆಯ ಕಾರ್ಯಕಾರಿಣಿ ಸಭೆಯಲ್ಲಿ, ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳಿಗೆ ಮಾತ್ರವಲ್ಲದೇ, ಭವಿಷ್ಯದಲ್ಲಿ ಪದಕ ಗೆಲ್ಲಬಲ್ಲ ಸಂಭಾವ್ಯ ಕ್ರೀಡಾಪಟುಗಳಿಗೂ ವೈದ್ಯಕೀಯ ವಿಮೆ ನೀಡಲು ತೀರ್ಮಾನಿಸಲಾಗಿದೆ.

Tap to resize

Latest Videos

"ವಿವಿಧ ಕ್ರೀಡೆಗಳಲ್ಲಿ ಹಲವಾರು ಮಾಜಿ ಕ್ರೀಡಾಪಟುಗಳು ಸಾಕಷ್ಟು ಪರಿಶ್ರಮಪಟ್ಟು ದೇಶಕ್ಕೆ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ ಅವರು ಒಳ್ಳೆಯ ಜೀವನ ನಡೆಸುತ್ತಿಲ್ಲ, ಹಲವರು ತಮ್ಮ ಮೂಲಭೂತ ಅಗತ್ಯವಾದ ಆರೋಗ್ಯ ಯೋಗಕ್ಷೇಮ ನಿರ್ವಹಿಸಲು ಸದೃಢವಾಗಿಲ್ಲ."

ಹೀಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆಯು ತನ್ನ ಕಾರ್ಯಕಾರಿಣಿ ಸಭೆಯಲ್ಲಿ ದೇಶಕ್ಕಾಗಿ ಪದಕ ಗೆದ್ದ ಎಲ್ಲಾ ಮಾಜಿ ಕ್ರೀಡಾಪಟುಗಳಿಗೆ ಉಚಿತ ವೈದ್ಯಕೀಯ ವಿಮೆ ಒದಗಿಸಲು ತೀರ್ಮಾನಿಸಲಾಗಿದೆ. ಇದಷ್ಟೇ ಅಲ್ಲದೇ ಕೇವಲ ಮಾಜಿ ಆಟಗಾರರು ಮಾತ್ರವಲ್ಲದೇ, ದೇಶಕ್ಕಾಗಿ ಪದಕ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಹಾಲಿ ಕ್ರೀಡಾಪಟುಗಳಿಗೂ ಈ ಪ್ರಯೋಜನ ದೊರೆಯಲಿದೆ ಎಂದು ಐಒಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Bengaluru Open: ತಡವಾಗಿ ಬಂದ ಸಿಎಂ ಬೊಮ್ಮಾಯಿ, ಸನ್ಮಾನವನ್ನೇ ತಿರಸ್ಕರಿಸಿದ ಟೆನಿಸ್ ದಿಗ್ಗಜ ಬ್ಯೋನ್‌ ಬೋರ್ಗ್‌..!

ಯಾವೆಲ್ಲಾ ಕ್ರೀಡಾಪಟುಗಳಿಗೆ ಈ ವೈದ್ಯಕೀಯ ವಿಮೆ ಒದಗಿಸಬೇಕು ಎನ್ನುವ ವಿಚಾರದಲ್ಲಿ ನ್ಯಾಷನಲ್ ಸ್ಪೋರ್ಟ್ಸ್‌ ಫೆಡರೇಷನ್‌ ಸಹಕಾರ ಪಡೆದು ವಿಮೆ ಮಾಡಿಸಲಿದ್ದೇವೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ.

ಇನ್ನು ಇದೇ ವೇಳೆ ಐಒಎ ಕಾರ್ಯಕಾರಿಣಿ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ವಿವಿಧ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರ ತಜ್ಞರನ್ನು ನೇಮಕಾತಿ ಮಾಡಲು ತೀರ್ಮಾನಿಸಲಾಗಿದೆ.

click me!