ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ. ಉಷಾ ವಿರುದ್ಧ ಅವಿಶ್ವಾಸ ನಿರ್ಣಯ!

By Kannadaprabha News  |  First Published Oct 11, 2024, 12:14 PM IST

ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ವಿರುದ್ಧ ಕಾರ್ಯಕಾರಿ ಸಮಿತಿ ಸದಸ್ಯರ ಮನಸ್ತಾಪ ಮತ್ತೊಂದು ಹಂತ ತಲುಪಿದ್ದು ಅವಿಶ್ವಾಸ ಮಂಡನೆಗೆ ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ)ಯ ಅಧ್ಯಕ್ಷೆ ಪಿ.ಟಿ. ಉಷಾ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ನಡುವಿನ ಹಗ್ಗಜಗ್ಗಾಟ ಮತ್ತೊಂದು ಹಂತ ತಲುಪಿದೆ. ಐಒಎ ಮೊದಲ ಮಹಿಳಾ ಅಧ್ಯಕ್ಷೆ ಎನಿಸಿಕೊಂಡಿರುವ ಉಷಾ ವಿರುದ್ಧ ಅ.25ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. 

ಈಗಾಗಲೇ ಕಾರ್ಯಕಾರಿ ಸಮಿತಿಯು ಸಭೆಯ 26 ಅಜೆಂಡಾಗಳಲ್ಲಿ ಅವಿಶ್ವಾಸ ನಿರ್ಣಯವನ್ನೂ ಸೇರಿಸಿದೆ. ಉಷಾ ಸಾಂವಿಧಾನಿಕ ನಿಮಯಗಳ ಉಲ್ಲಂಘಿಸುತ್ತಿದ್ದಾರೆ ಮತ್ತು ಭಾರತೀಯ ಕ್ರೀಡೆಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ಅಜೆಂಡಾವನ್ನು ಸೇರಿಸಲಾಗಿದೆ. ಹಲವು ದಿನಗಳಿಂದಲೂ ಸಮಿತಿ ಸದಸ್ಯರು ಹಾಗೂ ಉಷಾ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. 

Latest Videos

undefined

ಇನ್ನು, ಅವಿಶ್ವಾಸ ನಿರ್ಣಯ ಮಂಡಿಸುವ ಸಮಿತಿ ನಿರ್ಧಾರ ವನ್ನು ಉಷಾ ವಿರೋಧಿಸಿದ್ದು, ಇದು ಕಾನೂನುಬಾಹಿರ ಹಾಗೂ ಅನಧಿಕೃತ ಎಂದಿದ್ದಾರೆ. ಸಂಸ್ಥೆಗೆ ರಘುರಾಮ್ ಅಯ್ಯರ್ ಸಿಎಒ ಆಗಿದ್ದಾರೆ. ಆ ಹುದ್ದೆಗೆ ಬೇರೆ ಯಾರನ್ನೂ ನೇಮಿಸಿಲ್ಲ. ಈಗ ಕಲ್ಯಾಣ್ ಚೌಬೆ ಸಿಎಒ ಎಂದು ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದ್ದ ಕಾನೂನುಬಾಹಿರ' ಎಂದಿದ್ದಾರೆ.

ಇಂದಿನಿಂದ ರಣಜಿ ಟ್ರೋಫಿ ಟೂರ್ನಿ ಆರಂಭ: ಕರ್ನಾಟಕದ ಎದುರು ಮಧ್ಯ ಪ್ರದೇಶಕ್ಕೆ ಆರಂಭಿಕ ಆಘಾತ

ಏಷ್ಯನ್ ಟಿಟಿ ಚಾಂಪಿಯನ್‌ಶಿಪ್: ಭಾರತ ಪುರುಷರ ತಂಡಕ್ಕೆ ಕಂಚು

ಆಸ್ತಾನ (ಕಜಕಸ್ತಾನ): ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ ಭಾರತ ತಂಡ 0-3 ಅಂತರದಲ್ಲಿ ಸೋಲನುಭವಿಸಿತು. ಮಹಿಳಾ ತಂಡ ಕೂಡ ಕಂಚು ಗೆದ್ದಿತ್ತು.

ಮೊದಲ ಪಂದ್ಯದಲ್ಲಿ ದಿಗ್ಗಜ ಆಟಗಾರ ಅಚಂತಾ ಶರತ್ ಕಮಲ್ ವಿಶ್ವ ನಂ.7 ಲಿನ್ ಯುವ್ ಜು ವಿರುದ್ಧ ಸೋತರೆ, 2ನೇ ಪಂದ್ಯದಲ್ಲಿ ವಿಶ್ವ ನಂ.60 ಮಾನವ್ ಥಾಕ್ಕರ್ ವಿಶ್ವ ನಂ.22 ಕವೊ ಚೆಂಗ್ ವಿರುದ್ಧ ಪರಾಭವಗೊಂಡರು. ನಿರ್ಣಾಯಕ ಪಂದ್ಯದಲ್ಲಿ ಹರ್ಮೀತ್ ದೇಸಾಯಿಗೆ ಹುವಾಂಗ್ ಯಾನ್ ಚೆಂಗ್ ವಿರುದ್ಧ ಸೋಲು ಎದುರಾಯಿತು.

22 ಗ್ರ್ಯಾನ್‌ ಸ್ಲಾಂ ಒಡೆಯ, ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ಟೆನಿಸ್‌ಗೆ ಗುಡ್‌ ಬೈ

ರತನ್‌ ಟಾಟಾ ನಿಧನಕ್ಕೆ ಕ್ರೀಡಾಲೋಕದ ಕಂಬನಿ

ನವದೆಹಲಿ: ಭಾರತದ ಖ್ಯಾತ ಉದ್ಯಮಿ ರತನ್‌ ಟಾಟಾ ಅವರ ನಿಧನಕ್ಕೆ ಕ್ರೀಡಾಪಟುಗಳು ಕಂಬನಿ ಮಿಡಿದಿದ್ದಾರೆ. ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಚೆಸ್‌ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌, ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ ರವಿ ಶಾಸ್ತ್ರಿ, ಮಾಜಿ ನಾಯಕ ಕಪಿಲ್‌ ದೇವ್‌, ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಸೇರಿದಂತೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ

click me!