ಗೌರಿ ಗಣೇಶ ಹಬ್ಬದಂದು ಯುವಿ ಮನೆಗೆ ಬಂದ ಆ ಗೆಸ್ಟ್ ಯಾರು..?

By Web DeskFirst Published 12, Sep 2018, 1:25 PM IST
Highlights

ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಯುವರಾಜ್​ ಸಿಂಗ್​ ಜರ್ಮನಿ ಮೂಲದ ದುಬಾರಿ ಮೌಲ್ಯದ ಹೊಸ ಬೈಕ್ ಅನ್ನ ಖರೀದಿಸಿದ್ದಾರೆ. ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಬಿಎಂಡಬ್ಲ್ಯೂ ಜಿ 310 ಆರ್​ ಬೈಕ್​ ಬೆಲೆ 2.99 ಲಕ್ಷ ರೂಪಾಯಿ.

ಚಂಡೀಗಢ (ಸೆ 12): ಗೌರಿ ಗಣೇಶ ಹಬ್ಬದಿನದಂದು ಟೀಂ ಇಂಡಿಯಾದ ಬ್ಯಾಟ್ಸ್ಮನ್ ಯುವರಾಜ್​ ಸಿಂಗ್​ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಯುವಿ ಮನೆಗೆ ಬಂದಿರುವ ಆ ಗೆಸ್ಟ್ ಬೇರೆ ಯಾರು ಅಲ್ಲ, ಅದುವೇ ಹೊಸ ಬಿಎಂಡಬ್ಲ್ಯೂ ಜಿ 310 ಆರ್​ ಬೈಕ್​.

ಹೌದು ಸಿಕ್ಕಾಪಟೆ ಬೈಕ್ ಕ್ರೇಜ್ ಹೊಂದಿರುವ ಯುವಿ, ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜರ್ಮನಿ ಮೂಲದ ಬಿಎಂಡಬ್ಲ್ಯೂ ಜಿ 310 ಆರ್​ ಎನ್ನುವ 313 ಸಿಸಿಯ ದುಬಾರಿ ಬೈಕ್ ಅನ್ನು ಖರೀದಿಸಿದ್ದಾರೆ. ಲೂಧಿಯಾನದ ಬಿಎಂಡಬ್ಲ್ಯೂ ಕೃಷ್ಣ ಆಟೋಮೊಬೈಲ್ಸ್ ಕಂಪೆನಿಯಿಂದ ಯುವಿ, ಈ ನೂತನ ಬೈಕ್​ ಅನ್ನು ಖರೀದಿಸಿದ್ದು, ಇದರ ಬೆಲೆ ಬರೋಬ್ಬರಿ  2.99 ಲಕ್ಷ ರೂ. ಆಗಿದೆ.

ಈ ಬೈಕ್ ಖರೀದಿಸುವ ಮೂಲಕ ಇಂತಹ ದುಬಾರಿ ಮೌಲ್ಯದ ಬೈಕ್​  ಖರೀದಿಸಿದ ಮೊದಲ ಭಾರತೀಯ ಕ್ರಿಕೆಟರ್ ಎಂಬ  ಹೆಗ್ಗಳಿಕೆಗೂ ಯುವಿ ಪಾತ್ರರಾಗಿದ್ದಾರೆ. 

Last Updated 19, Sep 2018, 9:24 AM IST