ಬಾಕ್ಸರ್ ಅಮಿತ್ ಪಂಘಲ್, ಜಾಸ್ಮಿನ್‌ಗೆ ಒಲಿಂಪಿಕ್ ಟಿಕೆಟ್ ಕನ್ಫರ್ಮ್..!

By Kannadaprabha News  |  First Published Jun 3, 2024, 10:54 AM IST

ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಅಮಿತ್ ಭಾನುವಾರ ನಡೆದ ಪುರುಷರ ವಿಭಾಗದ 51 ಕೆ.ಜಿ. ಸ್ಪರ್ಧೆಯಲ್ಲಿ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿ, ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.


ಬ್ಯಾಂಕಾಕ್: ಭಾರತದ ತಾರಾ ಬಾಕ್ಸರ್‌ ಅಮಿತ್ ಪಂಘಲ್ ಹಾಗೂ ಜಾಸ್ಮಿನ್ ಲಂಬೋರಿಯಾ ವಿಶ್ವ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ 2024ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಭಾರತ ದಿಂದ ಈ ಬಾರಿ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡ ಬಾಕ್ಸರ್‌ಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಅಮಿತ್ ಭಾನುವಾರ ನಡೆದ ಪುರುಷರ ವಿಭಾಗದ 51 ಕೆ.ಜಿ. ಸ್ಪರ್ಧೆಯಲ್ಲಿ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿ, ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಇದೇ ಟೂರ್ನಿಯಲ್ಲಿ ಇತ್ತೀಚೆಗಷ್ಟೇ ನಿಶಾಂತ್ (71 ಕೆ.ಜಿ.) ಒಲಿಂಪಿಕ್ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಅಮಿತ್‌ ಒಲಿಂಪಿಕ್ಸ್ ಗೇರಿದ ಭಾರತದ 2ನೇ ಪುರುಷ ಬಾಕ್ಸರ್.

Latest Videos

undefined

ಇನ್ನು, ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಜಾಸ್ಮಿನ್, ಮಾಲಿ ದೇಶದ ಮರೈನ್ ಕ್ಯಾಮರಾ ವಿರುದ್ಧ ಗೆಲುವು ಸಾಧಿಸಿದರು. ಭಾರತದ ಪರ್ವೀನ್ ಹೂಡಾ ಈ ಮೊದಲೇ 57 ಕೆ.ಜಿ. ವಿಭಾಗದಲ್ಲಿ ಕೋಟಾ ಗೆದ್ದಿದ್ದರು. ಆದರೆ ಡೋಪಿಂಗ್ ಪ್ರಕರಣದಲ್ಲಿ ಅಮಾನತುಗೊಂಡ ಕಾರಣ ಕೋಟಾ ಕಳೆದುಕೊಂಡಿದ್ದರು. ಹೀಗಾಗಿ ಜಾಸ್ಮಿನ್ ಅದೇ ವಿಭಾಗದಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್ ಕೋಟಾ ಗೆದ್ದಿದ್ದಾರೆ. ಅಂತಿಮ್, ಜಾಸ್ಮಿನ್‌ಗೂ ಮುನ್ನ ಮಹಿಳಾ ವಿಭಾಗದಲ್ಲಿ ನಿಖಾತ್ ಜರೀನ್ (50 ಕೆ.ಜಿ.), ಪ್ರೀತಿ ಪವಾರ್ (54 ಕೆ.ಜಿ.) ಹಾಗೂ ಲವಿನಾ ಬೊರ್ಗೋಹೈನ್ (75 ಕೆ.ಜಿ.) ಪ್ಯಾರಿಸ್ ಒಲಿಂಪಿಕ್ ಟಿಕೆಟ್ ಖಚಿತಪಡಿಸಿಕೊಂಡಿದ್ದರು.

ಫ್ರೆಂಚ್ ಓಪನ್: ಇಗಾ ಕ್ವಾರ್ಟರ್‌ಗೆ, ಜೋಕೋವಿಚ್ ನಾಲ್ಕನೇ ಸುತ್ತಿಗೆ ಲಗ್ಗೆ

ಪ್ಯಾರಿಸ್: ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಗ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಇಗಾ, ಅನಸ್ತಾಸಿಯಾ ಪೊಟ ಪೋವಾ ವಿರುದ್ದ6-0, 6-0 ನೇರ ಸೆಟ್‌ಗಳಲ್ಲಿ ಜಯಿಸಿದರು. 5ನೇ ಬಾರಿ ಗ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿರುವ ಇಗಾ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿ ಸುಲಭ ಗೆಲುವು
ಪಡೆದರು. 

ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಯುವ ತಾರೆ ಕೊಕೊ ಗಾಫ್ 4ನೇ ಸುತ್ತಿನಲ್ಲಿ ಇಟಲಿಯ ಎಲಿಸಬೆಟ್ಟಾ ಕೊಕಿಯಾರೆಟ್ರೊ ವಿರುದ್ಧ 6-1, 6-2ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದರು. 5ನೇ ಶ್ರೇಯಾಂಕಿತ ಮಾರ್ಕೆಟಾ ವೊಂಪ್ರೊಸೊವಾ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.

ಜೋಕೋ ಮಿಂಚು

ಫ್ರೆಂಚ್ ಓಪನ್‌ನಲ್ಲಿ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ ಪುರುಷರ ಸಿಂಗಲ್ಸ್‌ 3ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ವಿರುದ್ಧ 7-5, 6-7(6/8), 2-6, 6-3, 6-0 ಸೆಟ್‌ಗಳಲ್ಲಿ ಗೆದ್ದರು. ಸ್ಪೇನ್‌ನ ಕಾರ್ಲೊಸ್ ಆಲ್ಬರಜ್ ಕೆನಡಾದ ಫೆಲಿಕ್ಸ್ ಆಗ‌ ವಿರುದ್ಧ 6-3, 6-3, 6-1 ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್ ಗೇರಿದರು. 

7ನೇ ಶ್ರೇಯಾಂಕಿತ ಕ್ಯಾಸ್ಟೆರ್‌ರುಡ್, 4ನೇ ಶ್ರೇಯಾಂಕಿತ ಅಲೆಕಾಂಡ‌ ಜೆರೆವ್, 5ನೇ ಶ್ರೇಯಾಂಕಿತ ಡ್ಯಾನಿಲ್ ಮೆಡೈಡೆವ್, 13ನೇ ಶ್ರೇಯಾಂಕಿತ ಹೋಲ್ಡರ್ ರುನೆ ಕೂಡಾ ಪುರುಷರ ಸಿಂಗಲ್ಸ್ ನಲ್ಲಿ ಅಂತಿಮ 16ರ ಘಟ್ಟ ಪ್ರವೇಶಿಸಿದರು.

ಡಬಲ್ಸ್‌ನಲ್ಲಿ ಕನ್ನಡಿಗ ಬೋಪಣ್ಣ ಶುಭಾರಂಭ

ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿ ಯನ್ ರೋಹನ್ ಬೋಪಣ್ಣ - ಆಸ್ಟ್ರೇಲಿ ಯಾದ ಮ್ಯಾಥ್ಯ ಎಬೆನ್ ಪುರುಷರ Em ಡಬಲ್ಸ್‌ನಲ್ಲಿ ಶುಭಾರಂಭ ಮಾಡಿ ದ್ದಾರೆ. ಭಾನುವಾರ ಮೊದಲ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್‌ನ ಮಾರ್ಸೆಲೊ ಜೊರ್ಮನ್ - ಒರ್ಲಾಂಡೊ ವಿರುದ್ಧ 7-5, 4-6, 6-4ರಲ್ಲಿ ಗೆಲುವು ಸಾಧಿಸಿದರು. 2ನೇ ಸುತ್ತಿನಲ್ಲಿ ಅರ್ಜೆಂಟೀನಾದ ಸೆಬಾಸ್ಟಿಯನ್ ಬೀಜ್ -ಬ್ರೆಜಿಲ್‌ನ ಥಿಯಾಗೊ ವೈಲ್ಡ್ ಸವಾಲು ಎದುರಾಗಲಿದೆ.
 

click me!