ಕೋಚ್ ಅಮಾನತು ಬೆನ್ನಲ್ಲೇ ವಿಂಡೀಸ್ ತಂಡಕ್ಕೆ ಮತ್ತೊಂದು ಶಾಕ್!

By Web DeskFirst Published Oct 18, 2018, 12:02 PM IST
Highlights

ಭಾರತ ವಿರುದ್ಧ ಟೆಸ್ಟ್ ಸರಣಿ ಸೋತು ಇದೀಗ ಏಕದಿನ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಮುಂದಾಗಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ಪ್ರಮುಖ ಆಟಗಾರ ದಿಢೀರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಗುವಾಹಟಿ(ಅ.18): ವಿಂಡೀಸ್‌ ತಂಡಕ್ಕೆ ಸಂಕಷ್ಟಹೆಚ್ಚುತ್ತಿದೆ. ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕೋಚ್ ಸ್ಟುವರ್ಟ್ ಲಾ ಆರಂಭಿಕ 2 ಏಕದಿನ ಪಂದ್ಯಿಂದ ಅಮಾನತ್ತಾಗಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ತಂಡದ ಕೀ ಪ್ಲೇಯರ್ ಎವಿನ್ ಲಿವೀಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಭಾರತ ವಿರುದ್ಧ ಏಕದಿನ, ಟಿ20 ಸರಣಿಯಿಂದ ತಂಡದ ಸ್ಫೋಟಕ ಆರಂಭಿಕ ಎವಿನ್‌ ಲೆವೀಸ್‌ ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದೆ ಸರಿದಿದ್ದಾರೆ. ಇತ್ತೀಚೆಗಷ್ಟೇ ವಿಂಡೀಸ್‌ ಮಂಡಳಿಯ ಕೇಂದ್ರ ಗುತ್ತಿಗೆಯನ್ನು ನಿರಾಕರಿಸಿ, ವಿಶ್ವಾದ್ಯಂತ ಟಿ20 ಲೀಗ್‌ಗಳಲ್ಲಿ ಆಡಲು ಇಚ್ಛಿಸಿದ್ದ ಲೆವೀಸ್‌ ತಂಡದ ಹಿರಿಯ ಆಟಗಾರ ಕ್ರಿಸ್‌ ಗೇಲ್‌ ಹಾದಿ ತುಳಿದಿದ್ದಾರೆ. 

ಆಫ್ಘನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡುತ್ತಿರುವ ಗೇಲ್‌ ಸಹ ಭಾರತ ವಿರುದ್ಧದ ಸರಣಿಗೆ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದರು. ಏಕದಿನ ತಂಡದಲ್ಲಿ ಲೆವೀಸ್‌ ಬದಲಿಗೆ ಕೀರನ್‌ ಪೋವೆಲ್‌ ಸ್ಥಾನ ಪಡೆದರೆ, ಟಿ20 ತಂಡದಲ್ಲಿ ನಿಕೋಲಸ್‌ ಪೂರನ್‌ ಆಡಲಿದ್ದಾರೆ.

click me!