ಹಾಕಿ ವಿಶ್ವಕಪ್‌ಗಿಲ್ಲ ಕನ್ನಡಿಗ ಸುನಿಲ್‌!

By Web DeskFirst Published Nov 9, 2018, 11:19 AM IST
Highlights

ಸುನಿಲ್‌ ಪಾಲ್ಗೊಳ್ಳುವಿಕೆ ಈ ಹಿಂದೆಯೇ ಅನುಮಾನವಿತ್ತು. ರಾಷ್ಟ್ರೀಯ ಶಿಬಿರದ ವೇಳೆ ಅವರು ಮಂಡಿ ಗಾಯಕ್ಕೆ ತುತ್ತಾಗಿದ್ದರು. ಆದರೂ ತಂಡದ ಆಯ್ಕೆ ವೇಳೆಗೆ ಅವರು ಗುಣಮುಖರಾಗುವ ನಿರೀಕ್ಷೆ ಇದ್ದ ಕಾರಣ, ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಸುನಿಲ್‌ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಯ್ಕೆಗೆ ಪರಿಗಣಿಸಿಲ್ಲ. ಇದರಿಂದಾಗಿ ಟೂರ್ನಿ ಆರಂಭಕ್ಕೂ ಮೊದಲೇ ಭಾರತ ತಂಡಕ್ಕೆ ಹಿನ್ನಡೆ ಉಂಟಾಗಿದೆ.

ನವದೆಹಲಿ(ನ.09]: ನ.28ರಿಂದ ಭುವನೇಶ್ವರದಲ್ಲಿ ಆರಂಭಗೊಳ್ಳಲಿರುವ ಪುರುಷರ ಹಾಕಿ ವಿಶ್ವಕಪ್‌ಗೆ 18 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಎಸ್‌.ವಿ.ಸುನಿಲ್‌ ಗಾಯದ ಸಮಸ್ಯೆ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ತಂಡವನ್ನು ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದು, ಅನುಭವಿ ಡಿಫೆಂಡರ್‌ ರೂಪಿಂದರ್‌ ಪಾಲ್‌ ಸಿಂಗ್‌ರನ್ನು ಸಹ ಕೈಬಿಡಲಾಗಿದೆ.

ಸುನಿಲ್‌ ಪಾಲ್ಗೊಳ್ಳುವಿಕೆ ಈ ಹಿಂದೆಯೇ ಅನುಮಾನವಿತ್ತು. ರಾಷ್ಟ್ರೀಯ ಶಿಬಿರದ ವೇಳೆ ಅವರು ಮಂಡಿ ಗಾಯಕ್ಕೆ ತುತ್ತಾಗಿದ್ದರು. ಆದರೂ ತಂಡದ ಆಯ್ಕೆ ವೇಳೆಗೆ ಅವರು ಗುಣಮುಖರಾಗುವ ನಿರೀಕ್ಷೆ ಇದ್ದ ಕಾರಣ, ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಸುನಿಲ್‌ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಯ್ಕೆಗೆ ಪರಿಗಣಿಸಿಲ್ಲ. ಇದರಿಂದಾಗಿ ಟೂರ್ನಿ ಆರಂಭಕ್ಕೂ ಮೊದಲೇ ಭಾರತ ತಂಡಕ್ಕೆ ಹಿನ್ನಡೆ ಉಂಟಾಗಿದೆ.

16 ತಂಡಗಳು ಸ್ಪರ್ಧಿಸುವ ಟೂರ್ನಿಯಲ್ಲಿ ಭಾರತ ತಂಡ ‘ಸಿ’ ಗುಂಪಿನಲ್ಲಿದ್ದು ವಿಶ್ವ ನಂ.3 ಬೆಲ್ಜಿಯಂ, ಕೆನಡಾ, ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಲಿದೆ. ಉದ್ಘಾಟನಾ ದಿನದಂದು ಭಾರತ, ದ.ಆಫ್ರಿಕಾವನ್ನು ಎದುರಿಸಲಿದೆ.

ತಂಡ: ಗೋಲ್‌ಕೀಪ​ರ್ಸ್: ಪಿ.ಆರ್‌.ಶ್ರೀಜೇಶ್‌, ಕೃಷನ್‌ ಬಹುದ್ದೂರ್‌. 
ಡಿಫೆಂಡ​ರ್ಸ್: ಹರ್ಮನ್‌ಪ್ರೀತ್‌ ಸಿಂಗ್‌, ಬೀರೇಂದ್ರ ಲಾಕ್ರಾ, ವರುಣ್‌ ಕುಮಾರ್‌, ಕೊತಾಜಿತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಅಮಿತ್‌ ರೋಹಿದಾಸ್‌. 
ಮಿಡ್‌ಫೀಲ್ಡ​ರ್ಸ್: ಮನ್‌ಪ್ರೀತ್‌ ಸಿಂಗ್‌ (ನಾಯಕ), ಚಿಂಗ್ಲೆನ್ಸಾನ ಸಿಂಗ್‌, ನೀಲಕಂಠ ಶರ್ಮಾ, ಹಾರ್ದಿಕ್‌ ಸಿಂಗ್‌, ಸುಮಿತ್‌. 
ಫಾರ್ವರ್ಡ್ಸ್: ಆಕಾಶ್‌ದೀಪ್‌ ಸಿಂಗ್‌, ಮನ್‌ದೀಪ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಲಲಿತ್‌ ಉಪಾಧ್ಯಾಯ, ಸಿಮ್ರನ್‌ಜೀತ್‌ ಸಿಂಗ್‌.
 
click me!