ಗುರುವಾರ ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ, ವಿಶ್ವ ನಂ.8 ಸ್ಪೇನ್ ತಂಡವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿತು. ವಿಶ್ವ ನಂ.2 ಅರ್ಜೆಂಟೀನಾ ಪರ ಅಗಸ್ಟಿನ್ ಮಜ್ಜಿಲ್ಲಿ(4ನೇ, 15ನೇ ನಿಮಿಷ) ಮತ್ತು ಗೋಂಜಾಲೋ ಪಿಲ್ಲಟ್(15+, 49ನೇ ನಿಮಿಷ) ತಲಾ 2 ಗೋಲು ಬಾರಿಸಿ ಗಮನ ಸೆಳೆದರು.
ಭುವನೇಶ್ವರ್(ನ.30): ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಹಾಗೂ ನ್ಯೂಜಿಲೆಂಡ್ ತಂಡಗಳು ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿವೆ.
ಗುರುವಾರ ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ, ವಿಶ್ವ ನಂ.8 ಸ್ಪೇನ್ ತಂಡವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿತು. ವಿಶ್ವ ನಂ.2 ಅರ್ಜೆಂಟೀನಾ ಪರ ಅಗಸ್ಟಿನ್ ಮಜ್ಜಿಲ್ಲಿ(4ನೇ, 15ನೇ ನಿಮಿಷ) ಮತ್ತು ಗೋಂಜಾಲೋ ಪಿಲ್ಲಟ್(15+, 49ನೇ ನಿಮಿಷ) ತಲಾ 2 ಗೋಲು ಬಾರಿಸಿ ಗಮನ ಸೆಳೆದರು. ಸ್ಪೇನ್ ಪರ ಎನಿಕ್ ಗೊಂಜಾಲೆಜ್(3ನೇ ನಿಮಿಷ), ಪೆಪೆ ರೋಮೆಯು(14ನೇ ನಿಮಿಷ) ಮತ್ತು ವಿಸೆಂಕ್ ರುಯ್ಜ್(35ನೇ ನಿಮಿಷ) ಗೋಲು ಬಾರಿಸಿದರು.
ಗುರುವಾರ ನಡೆದ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್, ಫ್ರಾನ್ಸ್ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ಪರ ಕೇನ್ ರಸೆಲ್(17ನೇ ನಿಮಿಷ) ಮತ್ತು ಸ್ಟೀಫನ್ ಜೆನ್ನೆಸ್(56ನೇ ನಿಮಿಷ) ಗೋಲು ಗಳಿಸಿದರು. ಫ್ರಾನ್ಸ್ ಪರ ವಿಕ್ಟರ್ ಚಾರ್ಲೆಟ್(59ನೇ ನಿಮಿಷ) ಗೋಲು ಗಳಿಸಿ, ಸೋಲಿನ ಅಂತರವನ್ನು ಕಡಿತಗೊಳಿಸಿದರು.
ಇಂದಿನ ಪಂದ್ಯಗಳು
ಆಸ್ಪ್ರೇಲಿಯಾ-ಐರ್ಲೆಂಡ್, ಸಂಜೆ 5ಕ್ಕೆ
ಇಂಗ್ಲೆಂಡ್-ಚೀನಾ, ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್