* Khelo India ನಕ್ಸಲರಿಂದ ಹತ್ಯೆಯಾದ ವ್ಯಕ್ತಿಯ ಪುತ್ರಿಗೆ ಚಿನ್ನದ ಗರಿ
* 19 ವರ್ಷದ ಸುಪ್ರಿತಿ 3,000 ಮೀಟರ್ ರೇಸ್‌ನಲ್ಲಿ ದಾಖಲೆ ಬರೆದಿದ್ದಾರೆ
* ನಕ್ಸಲರ ದಾಳಿಯಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಸುಪ್ರಿತಿ ಕಚ್ಚಪ್
ಪಂಚಕುಲ(ಜೂ.11): ನಕ್ಸಲರ ದಾಳಿಯಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದ ಜಾರ್ಖಂಡ್‌ನ ಸುಪ್ರಿತಿ ಕಚ್ಚಪ್ (Supriti Kachhap) ಎಂಬವರು ಇದೀಗ 4ನೇ ಆವೃತ್ತಿಯ ಖೇಲೋ ಇಂಡಿಯಾ (Khelo India) ಕಿರಿಯರ ಕ್ರೀಡಾಕೂಟದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಗಮನ ಸೆಳೆದಿದ್ದಾರೆ. ಗುರುವಾರ 19 ವರ್ಷದ ಸುಪ್ರಿತಿ 3,000 ಮೀಟರ್ ರೇಸ್‌ನಲ್ಲಿ 9 ನಿಮಿಷ 46.14 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಮೂಲಕ 9 ನಿಮಿಷ 50.54 ಸೆಕೆಂಡ್‌ಗಳ ಕೂಟ ದಾಖಲೆಯನ್ನು ಅವರು ಮುರಿದರು. ಈ ಕ್ಷಣಕ್ಕೆ ಸಾಕ್ಷಿಯಾಗಿದ್ದ ಸುಪ್ರಿಯಿ ಅವರ ತಾಯಿ ಬಾಲ್ಮತಿ ದೇವಿ ಕಣ್ಣೀರು ಸುರಿಸುತ್ತಲೇ ಮಗಳ ಸಾಧನೆಯನ್ನು ಕೊಂಡಾಡಿದರು.
2003ರಲ್ಲಿ ಗುಮ್ಲಾ ಜಿಲ್ಲೆಯಲ್ಲಿ ಸುಪ್ರಿತಿ ಅವರ ತಂದೆ ನಕ್ಸಲರ ದಾಳಿ ಕೊಲ್ಲಲ್ಪಟ್ಟಿದ್ದರು. ಅವರ ದೇಹವನ್ನು ಮರಕ್ಕೆ ಕಟ್ಟಿಹಾಕಿದ್ದ ನಕ್ಸಲರು ಗುಂಡಿಕ್ಕಿ ಕೊಂದಿದ್ದರು. ಇದರಿಂದ ಸಂಪೂರ್ಣ ಕುಗ್ಗಿ ಹೋಗಿದ್ದರೂ ಬಾಲ್ಮತಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದರು. ಶಾಲೆಯಲ್ಲಿ ನಡೆಯುತ್ತಿದ್ದ ಓಟದ ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದ ಸುಪ್ರಿತಿ ಅವರನ್ನು 2015ರಲ್ಲಿ ಕೋಚ್ ಪ್ರಭಾತ್ ಎಂಬವರು ಗುರುತಿಸಿ ತಮ್ಮ ತರಬೇತಿ ಕೇಂದ್ರಕ್ಕೆ ಸೇರಿದ್ದರು. ಬಳಿಕ ಹಿಂದಿರುಗಿ ನೋಡದ ಸುಪ್ರಿತಿ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ, 2021ರಲ್ಲಿ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಕೂಟದಲ್ಲೂ ಬೆಳ್ಳಿ ಗೆದ್ದಿದ್ದಾರೆ.
ಖೇಲೋ ಇಂಡಿಯಾ ಗೇಮ್ಸ್: ಮತ್ತೆ ರಾಜ್ಯದ ಈಜುಪಟುಗಳ ಪ್ರಾಬಲ್ಯ
ಪಂಚಕುಲ: 4ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಮತ್ತಷ್ಟು ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಒಟ್ಟು 45 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಶುಕ್ರವಾರ ನಡೆದ ಸೈಕ್ಲಿಂಗ್ ಬಾಲಕಿಯರ ವಿಭಾಗದ ವೈಯಕ್ತಿಯ ಇಂಡಿಯನ್ ಟೈಮ್ ಸ್ಪರ್ಧೆಯಲ್ಲಿ ರಾಜ್ಯದ ಚೈತ್ರಾ ಬಂಗಾರ ಗೆದ್ದರು.
Indonesia Masters : ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಸೆನ್‌ಗೆ ಆಘಾತ, ಭಾರತದ ಹೋರಾಟ ಅಂತ್ಯ
ಈಜಿನಲ್ಲಿ ರಾಜ್ಯದ ಕ್ರೀಡಾಳುಗಳು ಮತ್ತೆ ಪ್ರಾಬಲ್ಯ ಮುಂದುವರಿಸಿದ್ದು, 400 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಅನೀಶ್ ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ. ಅವರು 1500 ಮೀ. ಫ್ರೀಸ್ಟೈಲ್‌ನಲ್ಲೂ ಬಂಗಾರದ ಸಾಧನೆ ಮಾಡಿದ್ದರು. ಬಾಲಕರು 4*100 ಮೀ. ಮೆಡ್ಲೆ ರಿಲೇಯಲ್ಲಿ ರಾಜ್ಯ ಚಿನ್ನ ಗೆದ್ದಿದೆ. ಬಾಲಕಿಯರ 400 ಮೀ. ಫ್ರೀಸ್ಟೈಲ್‌ನಲ್ಲಿ ಹಷಿಕಾ ಬೆಳ್ಳಿ ಗೆದ್ದಿದ್ದಾರೆ. ಬಾಲಕರ 100 ಮೀ. ಬ್ಯಾಕ್‌ಸ್ಟೊ್ರೕಕ್‌ನಲ್ಲಿ ಉತ್ಕಷ್‌ರ್ ಚಿನ್ನ ಗೆದ್ದರು. ಕರ್ನಾಟಕ ಕೂಟದಲ್ಲಿ 17 ಚಿನ್ನ, 12 ಬೆಳ್ಳಿ, 16 ಕಂಚಿನ ಪದಕ ಬಾಚಿಕೊಂಡಿದೆ.
ಪ್ಯಾರಾ ಶೂಟಿಂಗ್: 8ನೇ ಪದಕಕ್ಕೆ ಮುತ್ತಿಕ್ಕಿದ ಭಾರತ
ನವದೆಹಲಿ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 8ನೇ ಪದಕಕ್ಕೆ ಮುತ್ತಿಕ್ಕಿದೆ. ಶುಕ್ರವಾರ ಪಿ5 ಮಿಶ್ರ 10 ಮೀ. ಏರ್ ಪಿಸ್ತೂಲ್‌ನಲ್ಲಿ ರಾಹುಲ್ ಜಾಖರ್ ಚಿನ್ನ ಗೆದ್ದರೆ, ರುಬಿನಾ ಫ್ರಾನ್ಸಿಸ್ ಅವರು ಬೆಳ್ಳಿ ಪಡೆದರು. ಬಳಿಕ ರಾಹುಲ್ ಅವರು ದೀಪೇಂದ್ರ ಸಿಂಗ್ ಹಾಗೂ ಆಕಾಶ್ ಅವರೊಂದಿಗೆ ಮತ್ತೊಂದು ಬಂಗಾರ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಗುರುವಾರ ಮನೀಶ್ ನರ್ವಾಲ್, ಸಿಂಗರಾಜ್ ಅಧಾನ ಹಾಗೂ ಆಕಾಶ್ ಅವರನ್ನೊಳಗೊಂಡ ಜೋಡಿ 1581 ಅಂಕ ಪಡೆದು ಚೀನಾ(1628 ಅಂಕ) ತಂಡದ ಎದುರು ಸೋತು ಬೆಳ್ಳಿ ಪಡೆದಿತ್ತು. ಕೂಟದಲ್ಲಿ ಭಾರತ 5 ಚಿನ್ನ, 3 ಬೆಳ್ಳಿ ಗೆದ್ದಿದೆ.