ಮತ್ತೆ ಪ್ರೀತಿಯ ಬಲೆಯಲ್ಲಿ ಹಾರ್ದಿಕ್ ಪಾಂಡ್ಯ; ಮಗನಿಗೆ ಹೊಸ ಅಮ್ಮಾ ಬರ್ತಾರಾ?

By Mahmad Rafik  |  First Published Aug 14, 2024, 6:27 PM IST

ಪತ್ನಿಯಿಂದ ದೂರವಾಗಿರುವ ಹಾರ್ದಿಕ್ ಪಾಂಡ್ಯ ಹೃದಯದಂಗಳದಲ್ಲಿ ಮತ್ತೆ ಪ್ರೇಮದ ಹೂ ಅರಳಿದಂತಿದೆ. ಸುಂದರಿ ಮತ್ತು ಹಾರ್ದಿಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.


ಮುಂಬೈ: 2024ರ ಐಪಿಎಲ್‌ನಲ್ಲಿ ಹೆಚ್ಚು ಟ್ರೋಲ್ ಆದ ಕ್ರಿಕೆಟಿಗ ಅಂದ್ರೆ ಅದು ಹಾರ್ದಿಕ್ ಪಾಂಡ್ಯ. ತಮ್ಮ ಅಗ್ರೆಸಿವ್ ಡಿಸೈನ್‌ಗಳಿಂದ ರೋಹಿತ್ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಹಾರ್ದಿಕ್ ಪಾಂಡ್ಯ ಗುರಿಯಾಗಿದ್ದರು. ಐಪಿಎಲ್ ಬಳಿಕ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಬೇರೆಯಾಗುತ್ತಿರುವ ಸುದ್ದಿ ಮುನ್ನಲೆಗೆ ಬಂದಿತ್ತು. ಹಲವು ದಿನಗಳ ಬಳಿಕ ಹಾರ್ದಿಕ್ ಪಾಂಡ್ಯ ಬೇರೆಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಪತ್ನಿ ನತಾಶಾ ಜೊತೆಯಲ್ಲಿ ಮಗ ಆಗಸ್ತ್ಯ ಇದ್ದಾನೆಂದು ಎಂದು ಹೇಳಲಾಗುತ್ತದೆ.  ನತಾಶಾ ಸೋಶಿಯಲ್ ಮೀಡಿಯಾದಲ್ಲಿ ಮಗನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಫೋಟೋಗಳಿಗೆ ಹಾರ್ದಿಕ್ ಪಾಂಡ್ಯ ಲೈಕ್ ನೀಡುತ್ತಿರುತ್ತಾರೆ. 

ಇದೀಗ ಹಾರ್ದಿಕ್ ಪಾಂಡ್ಯ ಮತ್ತೆ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಕೆಲ ಫೋಟೋಗಳು ರಿವೀಲ್ ಆಗಿವೆ. ಸದ್ಯ ರಜಾದಿನಗಳನ್ನು ಎಂಜಾಯ್ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಪ್ರವಾಸದಲ್ಲಿದ್ದಾರೆ. ಈಜುಕೊಳದ ಬಳಿಕ ವಾಕ್ ಮಾಡ್ತಿರೋ ವಿಡಿಯೋವನ್ನು ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಮಂಗಳವಾರ ಶೇರ್ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯಯವರ ಈ ಪ್ರವಾಸದಲ್ಲಿ ಜೊತೆಯಲ್ಲಿ ಒಬ್ಬಳು ಸುಂದರಿ ಇದ್ದಳು ಎಂಬುವುದು ನೆಟ್ಟಿಗರ ವಾದವಾಗಿದೆ. ಇದೇ ಸ್ಥಳದಲ್ಲಿ ಆ ಸುಂದರಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ತೋರಿಸುತ್ತಿದ್ದಾರೆ. 

Tap to resize

Latest Videos

undefined

ಬ್ರಿಟಿಷ್ ಖ್ಯಾತ ಗಾಯಕಿ ಜಾಸ್ಮೀನ್ ವಾಲಿಯಾ ಜೊತೆಯಲ್ಲಿ ಹಾರ್ದಿಕ್ ಪಾಂಡ್ಯ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹಾರ್ದಿಕ್ ಪಾಂಡ್ಯ ಭೇಟಿ ನೀಡಿದ ಸ್ಥಳದಲ್ಲಿಯೇ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಜಾಸ್ಮೀನ್ ವಾಲಿಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಂದೇ ಸ್ಥಳದಲ್ಲಿ ಇಬ್ಬರು ಇರಬಹುದು. ಜೊತೆಯಾಗಿ ರಜಾದಿನಗಳನ್ನು ಕಳೆಯಲು ಬಂದಂತಿದೆ. ಆದ್ರೆ ಸಿಂಗಲ್ ಫೋಟೋಗಳನ್ನು ಮಾತ್ರ ಹಂಚಿಕೊಂಡಿದ್ದಾರೆ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಡಬಲ್ ಶಾಕ್; ಪಾಂಡ್ಯಗಿಂತ ಮೊದಲು ಈ 6 ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಗಿದೆ ಡಿವೋರ್ಸ್..!

ಜಾಸ್ಮೀನಾ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಡೇಟ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದ್ದಂತೆ ಚರ್ಚೆಗಳು ಶುರುವಾಗಿವೆ. ಪತ್ನಿ ನತಾಶಾಗೆ ಹಾರ್ದಿಕ್ ಮೋಸ ಮಾಡಿದ್ದಾರೆ. ನತಾಶಾಗೆ ನ್ಯಾಯ ಸಿಗಬೇಕು. ಹಾರ್ದಿಕ್ ಪಾಂಡ್ಯ ಸಂಬಂಧದ  ವಿಷಯ ಗೊತ್ತಾದ ನಂತರವೇ ನತಾಶಾ ಬೇರೆಯಾಗಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಪರಸ್ಪರ ಸಮ್ಮತಿ ಮೇರೆಗೆ ಬೇರೆಯಾಗುತ್ತಿರುವ ವಿಷಯವನ್ನು ಜುಲೈ 18ರಂದು ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ರಷ್ಯಾ ಮೂಲದ ನತಾಶಾ ಸ್ಟ್ಯಾಂಕೋವಿಚ್ ಅವರೊಂದಿಗೆ 2020ರ ಜನವರಿ 1ರಂದು ಹಾರ್ದಿಕ್ ಪಾಂಡ್ಯ ಸಿನಿಮೀಯ ಶೈಲಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಪ್ರಪೋಸ್ ಮಾಡಿದ ನಾಲ್ಕು ತಿಂಗಳಿಗೆ ಅಪ್ಪನಾಗುತ್ತಿರುವ ಗುಡ್‌ನ್ಯೂಸ್ ತಿಳಿಸಿದ್ದರು. ನಂತರ ಮಗನ ಸಮ್ಮುಖದಲ್ಲಿಯೇ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಯಂತೆ ಮದುವೆಯಾಗಿದ್ದರು.  

ಡಿವೋರ್ಸ್ ಖಚಿತಪಡಿಸಿದ ಹಾರ್ದಿಕ್ ಪಾಂಡ್ಯ ನತಾಶ ಜೋಡಿ, ಫ್ಯಾನ್ಸ್‌ಗೆ ವಿಶೇಷ ಮನವಿ!

 
 
 
 
 
 
 
 
 
 
 
 
 
 
 

A post shared by Jasmin Walia (@jasminwalia)

click me!