ಹೈಜಂಪ್ ಹಾಗೂ ಡೆಕಥ್ಲಾನ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್, 'ಈ ರಾಷ್ಟ್ರೀಯ ಪ್ರಸ್ತಾಪಗಳು ಸೂಕ್ತವಲ್ಲ. ಕೇವಲ ಒಮ್ಮೆ ಪದಕ ಗೆದ್ದು ಕೆಲಸ ಗಿಟ್ಟಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ. ಸತತವಾಗಿ ಮೂರು ವರ್ಷ ರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದವರಿಗೆ ಅಥವಾ ಸತತ 5 ವರ್ಷ ರಾಷ್ಟ್ರೀಯ ಶ್ರೇಯಾಂಕದಲ್ಲಿ ಅಗ್ರ 8ರಲ್ಲಿ ಸ್ಥಾನ ಉಳಿಸಿಕೊಂಡವರಿಗೆ ಮನ್ನಣೆ ನೀಡುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಖೇಲೋ ಇಂಡಿಯಾ ಅದ್ಭುತ ಕ್ರೀಡಾಕೂಟ. ಅದು ಕೇವಲ ಹುದ್ದೆ ಪಡೆಯಲು ಸೀಮಿತವಾಗಬಹುದು' ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಪದಕ ವಿಜೇತರು ಸರ್ಕಾರಿ ಹುದ್ದೆಗಳಿಗೆ ಅರ್ಹರಾಗುತ್ತಾರೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಘೋಷಿಸಿದ ಬೆನ್ನಲ್ಲೇ, ಭಾರತದ ಅಗ್ರ ಅಥ್ಲೀಟ್‌ಗಳಲ್ಲಿ ಒಬ್ಬರಾದ ತೇಜಸ್ವಿನ್ ಶಂಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈಜಂಪ್ ಹಾಗೂ ಡೆಕಥ್ಲಾನ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್, 'ಈ ರಾಷ್ಟ್ರೀಯ ಪ್ರಸ್ತಾಪಗಳು ಸೂಕ್ತವಲ್ಲ. ಕೇವಲ ಒಮ್ಮೆ ಪದಕ ಗೆದ್ದು ಕೆಲಸ ಗಿಟ್ಟಿಸಿಕೊಂಡರೆ ಅದಕ್ಕೆ ಅರ್ಥವಿರುವುದಿಲ್ಲ. ಸತತವಾಗಿ ಮೂರು ವರ್ಷ ರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದವರಿಗೆ ಅಥವಾ ಸತತ 5 ವರ್ಷ ರಾಷ್ಟ್ರೀಯ ಶ್ರೇಯಾಂಕದಲ್ಲಿ ಅಗ್ರ 8ರಲ್ಲಿ ಸ್ಥಾನ ಉಳಿಸಿಕೊಂಡವರಿಗೆ ಮನ್ನಣೆ ನೀಡುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಖೇಲೋ ಇಂಡಿಯಾ ಅದ್ಭುತ ಕ್ರೀಡಾಕೂಟ. ಅದು ಕೇವಲ ಹುದ್ದೆ ಪಡೆಯಲು ಸೀಮಿತವಾಗಬಹುದು' ಎಂದು ಟ್ವೀಟ್ ಮಾಡಿದ್ದಾರೆ.
(1/2) Unpopular opinion: if we want to be a sporting superpower we can’t normalize giving out sports quota jobs to youth/ junior athletes. Needs to be a criteria eg: 3 years of consistent medals at nationals or 5 years of being in top 8 nationally etc. https://t.co/4XMNhJOPsY
— Tejaswin Shankar (TJ) (@TejaswinShankar)undefined
ಖೇಲೋ ಇಂಡಿಯಾ ಪದಕ ಗೆದ್ದವ್ರಿಗೂ ಸರ್ಕಾರಿ ನೌಕರಿ
ನವದೆಹಲಿ: ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಅಥ್ಲೀಟ್‌ಗಳೂ ಇನ್ನು ಮುಂದೆ ಸರ್ಕಾರಿ ಹುದ್ದೆ ಪಡೆಯಲು ಅರ್ಹರು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದರು.
ಈ ಬಗ್ಗೆ ಕಳೆದ ಬುಧವಾರ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅನುರಾಗ್. ‘ಅತ್ಯುತ್ತಮ ಕ್ರೀಡಾ ವ್ಯವಸ್ಥೆ, ತಳಮಟ್ಟದಲ್ಲೇ ಪ್ರತಿಭೆಗಳನ್ನು ಪೋಷಿಸುವುದು, ಕ್ರೀಡಾಪಟುಗಳಿಗೆ ಭವಿಷ್ಯದ ವೃತ್ತಿ ಆಯ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಇದಕ್ಕೆ ಅನುಗುಣವಾಗಿ ಖೇಲೋ ಇಂಡಿಯಾದ ಯೂತ್, ಯುನಿವರ್ಸಿಟಿ, ಪ್ಯಾರಾ ಹಾಗೂ ಚಳಿಗಾಲದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರು ಇನ್ನು ಮುಂದೆ ಸರ್ಕಾರಿ ಹುದ್ದೆಗೆ ಅರ್ಹತೆ ಪಡೆಯಲಿದ್ದಾರೆ. ಇದು ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಸೂಪರ್ ಪವರ್ ಮಾಡುವಲ್ಲಿ ಮಹತ್ವದ ಹೆಜ್ಜೆ’ ಎಂದು ಅವರು ತಿಳಿಸಿದ್ದಾರೆ. ಖೇಲೋ ಇಂಡಿಯಾ ಕ್ರೀಡಾಕೂಟವನ್ನು 2018ರಲ್ಲಿ ಆರಂಭಿಸಲಾಗಿತ್ತು.
Dharamsala Test ಯಶಸ್ವಿ ಜೈಸ್ವಾಲ್ ದಾಖಲೆ ಓಟಕ್ಕಿಲ್ಲ ಬ್ರೇಕ್!
ಬ್ಯಾಡ್ಮಿಂಟನ್ ಸಾಧಕರಿಗೆ ನಗದು ಬಹುಮಾನ ಪ್ರಕಟ
ನವದೆಹಲಿ: ಇತ್ತೀಚೆಗಷ್ಟೇ ಏಷ್ಯನ್ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡಕ್ಕೆ ಭಾರತ ಬ್ಯಾಡ್ಮಿಂಟನ್ ಫೆಡರೇಶನ್(ಬಿಎಐ) 35 ಲಕ್ಷ ರು. ನಗದು ಬಹುಮಾನ ಘೋಷಿಸಿದೆ. ಒಟ್ಟಾರೆ ₹1.2 ಕೋಟಿ ಬಹುಮಾನ ಪ್ರಕಟಿಸಿರುವ ಬಿಎಐ, ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್, ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದವರಿಗೆ ನಗದು ಹಸ್ತಾಂತರಿಸುವುದಾಗಿ ತಿಳಿಸಿದೆ.