ಭಾನುವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್‌ನ ಆಲ್ಕರಜ್ ಅಮೆರಿಕ ಜೆ.ಜೆ. ವಾಲ್ಫ್ ವಿರುದ್ಧ 6-1, 6-2, 6-1ರಲ್ಲಿ ಜಯಭೇರಿ ಬಾರಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಒಸಾಕ ಅವರು ಇಟಲಿಯ ಲೂಸಿಯಾ ಬ್ರೊನ್ಜೆಟಿಯನ್ನು 1-6, 6-4, 7-5 ಸೆಟ್‌ಗಳಲ್ಲಿ ಸೋಲಿಸಿದರು.
ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಹಾಲಿ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್, 2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ನವೋಮಿ ಒಸಾಕ ಶುಭಾರಂಭ ಮಾಡಿದ್ದಾರೆ.
ಭಾನುವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್‌ನ ಆಲ್ಕರಜ್ ಅಮೆರಿಕ ಜೆ.ಜೆ. ವಾಲ್ಫ್ ವಿರುದ್ಧ 6-1, 6-2, 6-1ರಲ್ಲಿ ಜಯಭೇರಿ ಬಾರಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಒಸಾಕ ಅವರು ಇಟಲಿಯ ಲೂಸಿಯಾ ಬ್ರೊನ್ಜೆಟಿಯನ್ನು 1-6, 6-4, 7-5 ಸೆಟ್‌ಗಳಲ್ಲಿ ಸೋಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ 6ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್ ಕೂಡಾ 2ನೇ ಸುತ್ತಿಗೇರಿದರು.
ಇಂದು ನಗಾಲ್ ಸ್ಪರ್ಧೆ
ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿರುವ ಸುಮಿತ್ ನಗಾಲ್ ಸೋಮವಾರ ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ ರಷ್ಯಾದ ಕರೆನ್ ಕಚನೊವ್ ವಿರುದ್ಧ ಸೆಣಸಲಿದ್ದಾರೆ. 14 ಬಾರಿ ಚಾಂಪಿಯನ್ ರಾಫೆಲ್ ನಡಾಲ್, 24 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್, ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್, ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್ ಸೇರಿ ಪ್ರಮುಖರು ಕೂಡಾ ಕಣಕ್ಕಿಳಿಯಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.
ಫ್ರಾನ್ಸ್‌ನಲ್ಲಿ ಈಜು ಕೂಟ: ರಾಜ್ಯ ದ ಶ್ರೀಹರಿಗೆ ಬೆಳ್ಳಿ
ಕ್ಯಾನೆಟ್ -ಎನ್-ರಾಸಿಲನ್ (ಫ್ರಾನ್ಸ್): ಇಲ್ಲಿ ನಡೆಯುತ್ತಿರುವ ಫ್ರಾನ್ಸ್ ಮೇ ಸ್ಪ್ಯಾಸ್‌ಟ್ರೊಮ್ ಈಜು ಕೂಟದಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ 50 ಮೀ. ಬ್ಯಾಕ್ ಸ್ಟೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಶ್ರೀಹರಿ 25.50 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನಿಯಾದರೆ, ಹಂಗೇರಿಯ ಆಡಂ ಜಾಸೋ(25.46 ಸೆಕೆಂಡ್) ಚಿನ್ನ, ಬ್ರಿಟನ್‌ನ ಸ್ಕಾಟ್ ಗಿಬ್ಬನ್ (25.64 ಸೆಕೆಂಡ್) ಕಂಚಿನ ಪದಕ ಜಯಿಸಿದರು.
ಹಾಕಿ: ಭಾರತಕ್ಕೆ ಸೋಲು
ಆ್ಯಂಟೆಪ್ (ಬೆಲ್ಸಿಯಂ): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಸೋಲಿನ ಸರಪಳಿ ಕಳಚಲು ಭಾರತ ಮಹಿಳಾ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಭಾನುವಾರ ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 0 -3 ಗೋಲುಗಳಿಂದ ಸೋಲು ಎದುರಾಯಿತು. ಇದು ಯುರೋಪ್ ಚರಣದಲ್ಲಿ ತಂಡದ ಸತತ 4ನೇ ಸೋಲು. 12 ಪಂದ್ಯಗಳಲ್ಲಿ ಕೇವಲ 8 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.