ಮಹಿಳಾ ಹಾಕಿ ತಂಡಕ್ಕೆ ಮನೋವೈದ್ಯೆ ನೆರವು

By Web Desk  |  First Published Jan 31, 2019, 9:19 AM IST

ಇದೆ ಮೊದಲ ಬಾರಿಗೆ  ಭಾರತ ಮಹಿಳಾ ಹಾಕಿ ತಂಡಕ್ಕೆ ಮನೋವೈದ್ಯೆ ನೆರವು ನೀಡುತ್ತಿದ್ದಾರೆ. ಸ್ಪೇನ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರ್ತಿಯರ ಏಕಾಂಗಿತನ, ಮಾನಸಿಕ ಒತ್ತಡದಂತಹ ಸಮಸ್ಯೆಗಳನ್ನು ನಿವಾಸರಿಸಲು ಮನೋವೈದ್ಯೆ ನೆರವಾಗಲಿದ್ದಾರೆ.
 


ನವದೆಹಲಿ(ಜ.31): ಸ್ಪೇನ್‌ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡದೊಂದಿಗೆ ಮನೋವೈದ್ಯೆಯೊಬ್ಬರು ಸಹ ಪ್ರಯಾಣಿಸಿದ್ದಾರೆ. ತಂಡದೊಂದಿಗೆ ಮನೋವೈದ್ಯೆ ಪ್ರಯಾಣಿಸಿರುವುದು ಇದೇ ಮೊದಲು. ಆಟಗಾರ್ತಿಯರು ವರ್ಷದಲ್ಲಿ 300 ದಿನಗಳ ಕಾಲ ಮನೆಯಿಂದ ದೂರವಿರುವ ಕಾರಣ, ಮನೆಯ ನೆನಪು, ಏಕಾಂಗಿತನ, ಮಾನಸಿಕ ಒತ್ತಡದಂತಹ ಸಮಸ್ಯೆಗಳನ್ನು ಎದುರಿಸಲಿದ್ದಾರೆ. 

ಇದನ್ನೂ ಓದಿ: ಸ್ಪೇನ್ ವಿರುದ್ದ ಭಾರತ ಮಹಿಳಾ ತಂಡಕ್ಕೆ 5-2 ಅಂತರದ ಗೆಲುವು!

Tap to resize

Latest Videos

ಇಂತಹ ಸಂದರ್ಭಗಳಲ್ಲಿ ನೆರವಾಗಲು ಇನ್ಮುಂದೆ ತಂಡದೊಂದಿಗೆ ಮನೋವೈದ್ಯೆ ಸಹ ಪ್ರಯಾಣಿಸಲಿದ್ದಾರೆ. 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಮನೋವೈದ್ಯೆಯ ಸಲಹೆ, ಸೂಚನೆಗಳು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ತಂಡದ ಕೋಚ್‌ ಸೋರ್ಡ್‌ ಮರಿನೆ ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ: ಐಎಸ್‌ಎಲ್‌: ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ

ಸ್ಪೇನ್‌ ವಿರುದ್ಧದ 3ನೇ ಪಂದ್ಯದಲ್ಲಿ 5-2 ಗೋಲುಗಳ ಗೆಲುವು ಸಾಧಿಸಿ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.  ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ, 2ನೇ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಭಾರತದ ಪರ ಲಾಲ್ರೆಸಿಯಾಮಿ (17, 58), ನೇಹಾ (21), ನವನೀತ್‌ (32), ರಾಣಿ (51) ನಿಮಿಷಗಳಲ್ಲಿ ಗೋಲು ಬಾರಿಸಿದರು.

click me!