ಇದು ಹೊಸ ಟೀಂ ಇಂಡಿಯಾ-ಇಲ್ಲಿ ಬೌಲರ್‌ಗಳೂ ಕೂಡ ಬಲಿಷ್ಠ!

By Web DeskFirst Published Oct 18, 2018, 6:00 PM IST
Highlights

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಇದೀಗ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರದಂತೆ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಭಾರತದ ಬೌಲಿಂಗ್ ಕುರಿತು ಜಸ್‌ಪ್ರೀತ್ ಬುಮ್ರಾ ಹೇಳಿದ್ದೇನು? ಇಲ್ಲಿದೆ.
 

ಮುಂಬೈ(ಅ.18): ಟೀಂ ಇಂಡಿಯಾದಲ್ಲಿ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಮುಂದೆ ಬೌಲರ್‌ಗಳ ಸಂಖ್ಯೆ ಕಡಿಮೆ. ಆದರೆ ಇದು ಹಳೆ ಟೀಂ ಇಂಡಿಯಾ. ಸದ್ಯ ಕಾಲ ಬದಲಾಗಿದೆ. ಟೀಂ ಇಂಡಿಯಾ ಬೌಲಿಂಗ್‌ನಲ್ಲೂ ಅಷ್ಟೇ ಬಲಿಷ್ಠವಾಗಿದೆ.

ಭುವನೇಶ್ವರ್ ಕುಮಾರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಸದ್ಯ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿದೆ. ಇದೀಗ ಟೀಂ ಇಂಡಿಯಾ ಬೌಲಿಂಗ್ ಶಕ್ತಿ ಕುರಿತು ಜಸ್‌ಪ್ರೀತ್ ಬುಮ್ರಾ ಪ್ರತಿಕ್ರಿಯಿಸಿದ್ದಾರೆ.  ಎಲ್ಲಾ ಬೌಲರ್‌ಗಳು 140ರ ವೇಗದಲ್ಲಿ ಬೌಲಿಂಗ್ ಮಾಡಲು ಶಕ್ತರು ಎಂದು ಜಸ್‌ಪ್ರೀತ್ ಬುಮ್ರಾ ಹೇಳಿದ್ದಾರೆ. 

ಟೀಂ ಇಂಡಿಯಾ ಪ್ರತಿ ವೇಗಿಗಳು ಅವರದ್ದೇ ಆದ ಶೈಲಿ ಹೊಂದಿದ್ದಾರೆ. ಇಷ್ಟೇ ಅಲ್ಲ ಪ್ರತಿ ಸರಣಿಯಿಂದ ನಾವು ಕಲಿತಿದ್ದೇವೆ. ಇದೀಗ ಮುಂಬರುವ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಸಜ್ಜಾಗಬೇಕಿದೆ ಎಂದು ಬುಮ್ರಾ ಹೇಳಿದ್ದಾರೆ.

click me!