ಕ್ರಿಕೆಟ್ ಸೀಕ್ರೆಟ್ಸ್: ಪಾಕ್ ಮಣಿಸಿದ ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ

By Web DeskFirst Published Sep 24, 2018, 7:32 PM IST
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಸೆಪ್ಟೆಂಬರ್ 24 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಸೆ.24): ಏಷ್ಯಾಕಪ್ 2018ರ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ಮಣಿಸಿ ಫೈನಲ್‌ಗೆ ಎಂಟ್ರಿಕೊಟ್ಟಿದೆ. ಈ ಸಂಭ್ರಮದಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಧಮಾಕ. ಕಾರಣ ಈ ದಿನ ಭಾರತ , ಪಾಕಿಸ್ತಾನ ತಂಡವನ್ನ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು.

 

in 2007, won the inaugural T20 World Cup beating Pakistan in the final in South Africa. pic.twitter.com/zCSBH8w1S5

— BCCI (@BCCI)

 

ಸೆಪ್ಟೆಂಬರ್ 24, 2007. ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ ಗೆಲುವಿನ ಸೂಚನೆ ನೀಡಿತ್ತು.

ಅಂತಿಮ ಓವರ್‌ನಲ್ಲಿ ಪಾಕ್ ಗೆಲುವಿಗೆ 13 ರನ್ ಅವಶ್ಯಕತೆ ಇತ್ತು.  ಜೋಗಿಂದರ್ ಶರ್ಮಾಗೆ ಬಾಲ್ ನೀಡಿದ ಧೋನಿ ನಿರ್ಧಾರ ಎಲ್ಲರಲ್ಲಿ ಅಚ್ಚರಿ ತಂದಿತ್ತು. ಮೊದಲ ಎಸೆತ ವೈಡ್, ಎರಡನೇ ಎಸೆತ ಡಾಟ್ ಬಾಲ್, ಆದರೆ ಮೂರನೇ ಎಸೆತವನ್ನ ನಾಯಕ ಮಿಸ್ಬಾ ಉಲ್ ಹಕ್ ಸಿಕ್ಸರ್ ಸಿಡಿಸಿದರು. 

4 ಎಸೆತದಲ್ಲಿ ಪಾಕ್ ಗೆಲುವಿಗೆ ಕೇವಲ 6 ರನ್ ಬೇಕಿತ್ತು. ಬ್ಯಾಕ್ ಫ್ಲಿಕ್ ಮಾಡಲು ಹೋದ ಮಿಸ್ಬಾ ಶ್ರೀಶಾಂತ್‌ಗೆ ಕ್ಯಾಚ್ ನೀಡಿದರು. ಹೀಗಾಗಿ ಪಾಕಿಸ್ತಾನ 152 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 5 ರನ್ ರೋಚಕ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತು.
 

click me!