11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪ್ಲೇ-ಆಫ್ ಹಂತ ತಲುಪಿದ್ದು, ಇಂದು 2 ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಯು.ಪಿ.ಯೋಧಾಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಹಾಗೂ ಯು-ಮುಂಬಾ ತಂಡಗಳು ಸೆಣಸಲಿವೆ.
ಪುಣೆ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಪ್ಲೇ-ಆಫ್ ಹಂತ ತಲುಪಿದ್ದು, ಗುರುವಾರ 2 ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೊದಲ ಎಲಿಮಿನೇಟರ್‌ನಲ್ಲಿ ಯು.ಪಿ.ಯೋಧಾಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್, 2ನೇ ಎಲಿಮಿನೇಟರ್‌ನಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಯು-ಮುಂಬಾ ತಂಡಗಳು ಸೆಣಸಲಿವೆ.
ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಹರ್ಯಾಣ ಸ್ಟೀಲರ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ತಮ್ಮ ಎದುರಾಳಿಗಳಿಗಾಗಿ ಕಾಯುತ್ತಿವೆ.
undefined
ಪ್ಲೇ-ಆಫ್ ಪ್ರವೇಶಿಸಿರುವ 6 ತಂಡಗಳ ಪೈಕಿ ಹರ್ಯಾಣ ಹಾಗೂ ಯು.ಪಿ.ಯೋಧಾಸ್ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಪಾಟ್ನಾ ಪೈರೇಟ್ಸ್ 3 ಬಾರಿ ಚಾಂಪಿಯನ್ ಆದರೆ, ದಬಾಂಗ್ ಡೆಲ್ಲಿ 8ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಉದ್ಘಾಟನಾ ಆವೃತ್ತಿ ಹಾಗೂ 9ನೇ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ರಶಸ್ತಿ ಎತ್ತಿಹಿಡಿದಿತ್ತು. ಇನ್ನು ಯುಮುಂಬಾ 2ನೇ ಆವೃತ್ತಿಯಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿತ್ತು.
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕಿಂದು ಪಂಜಾಬ್ ಚಾಲೆಂಜ್! ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣು
ಈ ಬಾರಿ ಹರ್ಯಾಣ ಹಾಗೂ ದಬಾಂಗ್ ಡೆಲ್ಲಿ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರಿ, ಎಲ್ಲರಿಗಿಂತ ಮೊದಲೇ ಪ್ಲೇ-ಆಫ್‌ಗೆ ಪ್ರವೇಶಿಸಿದ್ದವು. ಲೀಗ್‌ನಲ್ಲಿ ಹರ್ಯಾಣ 22 ಪಂದ್ಯ ಗಳಲ್ಲಿ 16 ಗೆಲುವು ಸಾಧಿಸಿದರೆ, ಡೆಲ್ಲಿ 13 ಜಯ ಪಡೆದು, 4 ಪಂದ್ಯಗಳನ್ನು ಟೈ ಮಾಡಿಕೊಂಡಿತ್ತು. 22 ಪಂದ್ಯಗಳ ಮುಕ್ತಾಯದ ಬಳಿಕ ಈ ಎರಡು ತಂಡಗಳ ನಡುವೆ ಕೇವಲ 3 ಅಂಕಗಳ ವ್ಯತ್ಯಾಸವಷ್ಟೇ ಇತ್ತು. ಜೈಪುರ 6ನೇ ಸ್ಥಾನಕ್ಕೆ ಕುಸಿದು ಎಲಿಮಿನೇ
ಟರ್ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು.
ಇಂದಿನ ಪಂದ್ಯಗಳು:
ಯೋಧಾಸ್-ಜೈಪುರ, ರಾತ್ರಿ 8ಕ್ಕೆ,
ಪಾಟ್ನಾ-ಮುಂಬಾ, ರಾತ್ರಿ 9ಕ್ಕೆ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ + ಹಾಟ್‌ಸ್ಟಾರ್
ಪ್ರೊ ಕಬಡ್ಡಿ: ಸೋಲಿನೊಂದಿಗೆ ಬುಲ್ಸ್ ಅಭಿಯಾನ ಕೊನೆ
ಪುಣೆ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದೆ. ಬೆಂಗಳೂರು ಬುಲ್ಸ್ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. ಮಂಗಳವಾರ ನಡೆದ 22ನೇ ಹಾಗೂ ಕೊನೆಯ ಪಂದ್ಯದಲ್ಲಿ ಬುಲ್ಸ್ 30-44 ಅಂಕಗಳಲ್ಲಿ ಯು.ಪಿ.ಯೋಧಾಸ್‌ಗೆ ಶರಣಾಯಿತು. 19 ಸೋಲು, 2 ಜಯ, 1 ಟೈನೊಂದಿಗೆ ಬುಲ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.
ಬಾಕ್ಸಿಂಗ್ ಡೇ ಟೆಸ್ಟ್ ಸೋತರೆ WTC ಫೈನಲ್‌ನಿಂದ ಟೀಂ ಇಂಡಿಯಾ ಔಟ್?
ಈ ಜಯದೊಂದಿಗೆ ಯೋಧಾಸ್ 3ನೇ ಸ್ಥಾನಕ್ಕೇರಿತು. ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 36-27ರಲ್ಲಿ ಗೆದ್ದ ಯು ಮುಂಬಾ 6ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿತು. ಗುರುವಾರದಿಂದ ಪ್ಲೇ-ಆಫ್ ಪಂದ್ಯಗಳು ಆರಂಭಗೊಳ್ಳಲಿವೆ.