ಕ್ಯಾಂಡಿಡೇಟ್ಸ್‌ ಚೆಸ್ ಪಂದ್ಯಾವಳಿಗೆ ಭಾರತದ ಐವರು: ಹೊಸ ದಾಖಲೆ!

By Naveen Kodase  |  First Published Jan 2, 2024, 11:27 AM IST

ಸೋಮವಾರ ಫಿಡೆ ರ್‍ಯಾಂಕಿಂಗ್‌ ಆಧಾರದಲ್ಲಿ ಕೊನೆರು ಹಂಪಿ ಟೂರ್ನಿಗೆ ಅರ್ಹತೆ ಪಡೆದರು. ಇದರೊಂದಿಗೆ ಈ ಬಾರಿ ಟೂರ್ನಿಯಲ್ಲಿ ಆಡಲಿರುವ ಭಾರತದ 2ನೇ ಮಹಿಳೆ, ಒಟ್ಟಾರೆ 5ನೇ ಚೆಸ್‌ ಪಟು ಖ್ಯಾತಿ ಪಡೆದರು.


ನವದೆಹಲಿ(ಜ.02): ಏ.2ರಿಂದ 25ರ ವರೆಗೆ ಕೆನಡಾದ ಟೊರೊಂಟೊದಲ್ಲಿ ನಡೆಯಲಿರುವ ಪ್ರತಿಷ್ಠಿತ ಚೆಸ್‌ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಭಾರತದ ಐವರು ಆಟಗಾರರು ಪ್ರವೇಶ ಗಿಟ್ಟಿಸಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಸೋಮವಾರ ಫಿಡೆ ರ್‍ಯಾಂಕಿಂಗ್‌ ಆಧಾರದಲ್ಲಿ ಕೊನೆರು ಹಂಪಿ ಟೂರ್ನಿಗೆ ಅರ್ಹತೆ ಪಡೆದರು. ಇದರೊಂದಿಗೆ ಈ ಬಾರಿ ಟೂರ್ನಿಯಲ್ಲಿ ಆಡಲಿರುವ ಭಾರತದ 2ನೇ ಮಹಿಳೆ, ಒಟ್ಟಾರೆ 5ನೇ ಚೆಸ್‌ ಪಟು ಖ್ಯಾತಿ ಪಡೆದರು. ಪುರುಷರ ವಿಭಾಗದಲ್ಲಿ ಆರ್‌.ಪ್ರಜ್ಞಾನಂದ, ಡಿ.ಗುಕೇಶ್‌ ಹಾಗೂ ವಿದಿತ್‌ ಗುಜರಾತ್‌ ಅರ್ಹತೆ ಪಡೆದಿದ್ದು, ಮಹಿಳೆಯರ ವಿಭಾಗದಲ್ಲಿ ಪ್ರಜ್ಞಾನಂದರ ಅಕ್ಕ ಆರ್‌.ವೈಶಾಲಿ ಕೂಡಾ ಸ್ಪರ್ಧಿಸಲಿದ್ದಾರೆ. ಇವರೆಲ್ಲರೂ ವಿವಿಧ ಅರ್ಹತಾ ಟೂರ್ನಿಗಳ ಮೂಲಕ ಕ್ಯಾಂಡಿಡೇಟ್ಸ್‌ಗೆ ಪ್ರವೇಶ ಪಡೆದಿದ್ದಾರೆ. 1950ರಿಂದಲೂ ನಡೆಯುತ್ತಿರುವ ಟೂರ್ನಿಯಲ್ಲಿ ಈ ವರೆಗೆ ಭಾರತದಿಂದ ಸ್ಪರ್ಧಿಸಿದ್ದು ವಿಶ್ವನಾಥನ್ ಆನಂದ್‌ ಮಾತ್ರ. ಅವರು ಕೊನೆ ಬಾರಿ 2016ರಲ್ಲಿ ಆಡಿದ್ದರು.

Tap to resize

Latest Videos

undefined

ಅಮಾನತಿಗೆ ಹೆದರಲ್ಲ, ಕುಸ್ತಿಗೆ ನಮ್ಮದೇ ಆಡಳಿತ: ಸಂಜಯ್‌ ಸಿಂಗ್‌

ಏನಿದು ಕ್ಯಾಂಡಿಡೇಟ್ಸ್‌?

ಕ್ಯಾಂಡಿಟೇಟ್ಸ್ 8 ಆಟಗಾರರ ನಡುವೆ ನಡೆಯುವ ಟೂರ್ನಿ. ಚೆಸ್ ವಿಶ್ವಕಪ್‌ ಸೇರಿ ವಿವಿಧ ಟೂರ್ನಿಗಳ ಮೂಲಕ ಕ್ಯಾಂಡಿಡೇಟ್ಸ್‌ಗೆ ಆಟಗಾರರು ಪ್ರವೇಶ ಪಡೆಯುತ್ತಾರೆ. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ ಗೆದ್ದವರು, ಹಾಲಿ ವಿಶ್ವ ಚಾಂಪಿಯನ್ ವಿರುದ್ಧ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ.

ಸ್ಕಾಟ್ಲೆಂಡ್‌ನಲ್ಲಿ ಭಾರತದ ಐವರು ಸ್ಕ್ಯಾಶ್‌ ಚಾಂಪಿಯನ್‌!

ನವದೆಹಲಿ: ಭಾರತದ ಪ್ರತಿಭಾನ್ವಿತ ಸ್ಕ್ವ್ಯಾಶ್‌ ಆಟಗಾರ್ತಿ ಅನಾಹತ್‌ ಸಿಂಗ್‌ ಸೇರಿದಂತೆ ಐವರು ಸ್ಕಾಟ್ಲೆಂಡ್‌ನ ಕಿರಿಯರ ಓಪನ್‌ ಸ್ಕ್ವಾಶ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಂಡರ್‌-19 ವಿಭಾಗದಲ್ಲಿ ಅನಾಹತ್‌ ಸ್ಕಾಟ್ಲೆಂಡ್‌ನ ರೊಬೈನ್‌ ಮೆಕ್‌ಅಲ್ಪೈನ್‌ ವಿರುದ್ಧ 11-6, 11-1, 11-5 ಅಂತರದಿಂದ ಜಯಶಾಲಿಯಾಗಿ ಹೊರಹೊಮ್ಮಿದರು. ಇದೇ ವೇಳೆ ಅಂಡರ್‌-15 ಬಾಲಕರ ವಿಭಾಗದಲ್ಲಿ ಶುಭಾಸ್‌ ಚೌದರಿ, ಅಂಡರ್‌-13 ವಿಭಾಗದಲ್ಲಿ ಶ್ರೇಷ್ಠ ಅಯ್ಯರ್‌ ಚಾಂಪಿಯನ್‌ ಎನಿಸಿಕೊಂಡರು. ಅಂಡರ್‌-13 ಬಾಲಕಿಯರ ವಿಭಾಗದಲ್ಲಿ ಆಧ್ಯಾ ಬುಧಿಯಾ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, 11 ವರ್ಷದೊಳಗಿನ ಬಾಲಕರ ವಿಭಾಗದನಲ್ಲಿ ಪ್ರಭಾವ್‌ ಬಜೋರಿಯಾ ಚಾಂಪಿಯನ್‌ ಆದರು.

2024 ಕ್ರೀಡಾಭಿಮಾನಿಗಳಿಗೆ ರಸದೌತಣ; ಈ ವರ್ಷವಾದ್ರೂ ನೀಗುತ್ತಾ ವಿಶ್ವಕಪ್‌ ಬರ?

ಹಾಕಿ ಫೈವ್ಸ್‌ ವಿಶ್ವಕಪ್‌: ಭಾರತ ತಂಡದಲ್ಲಿ ಕರ್ನಾಟಕದ ರಾಹೀಲ್‌

ನವದೆಹಲಿ: ಜನವರಿ 28ರಿಂದ 31ರ ವರೆಗೆ ಒಮಾನ್‌ನಲ್ಲಿ ನಡೆಯಲಿರುವ ಎಫ್‌ಎಚ್‌ಐ ಹಾಕಿ ಫೈವ್ಸ್‌ ವಿಶ್ವಕಪ್‌ ಟೂರ್ನಿಗೆ ಭಾರತ ಪುರುಷರ ತಂಡ ಪ್ರಕಟಗೊಂಡಿದೆ. ಸಿಮ್ರನ್‌ಜೀತ್‌ ಸಿಂಗ್‌ ನಾಯಕತ್ವ ವಹಿಸಲಿದ್ದು, ಕರ್ನಾಟಕದ ಮೊಹಮದ್‌ ರಾಹೀಲ್‌ ಕೂಡಾ ತಂಡದಲ್ಲಿದ್ದಾರೆ. ‘ಬಿ’ ಗುಂಪಿನಲ್ಲಿರುವ ಭಾರತ ಗುಂಪು ಹಂತದಲ್ಲಿ ಈಜಿಪ್ಟ್‌, ಜಮೈಕಾ, ಸ್ವಿಜ್ಜರ್‌ಲೆಂಡ್‌ ತಂಡಗಳನ್ನು ಎದುರಿಸಲಿದೆ. ಭಾನುವಾರ ಟೂರ್ನಿಗೆ ಮಹಿಳೆಯರ ತಂಡವನ್ನೂ ಪ್ರಕಟಿಸಲಾಗಿದೆ. ಅನುಭವಿ ಗೋಲ್‌ಕೀಪರ್‌ ರಜಿನಿ ಎಟಿಮಾರ್ಪು ತಂಡ ಮುನ್ನಡೆಸಲಿದ್ದಾರೆ. ಒಟ್ಟು 16 ಮಹಿಳಾ ತಂಡಗಳು ಭಾಗಿಯಾಗಲಿದ್ದು, ಭಾರತ ‘ಸಿ’ ಗುಂಪಿನಲ್ಲಿ ನಮೀಬಿಯಾ, ಪೋಲಂಡ್‌, ಯುಎಸ್‌ಎ ತಂಡಗಳ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ. ಟೂರ್ನಿ ಜ.24 ರಿಂದ 27 ವರೆಗೆ ನಡೆಯಲಿದೆ.
 

click me!