ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ 9/14 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಬಳಿಕ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ಚಾಂಪಿಯನ್ ಆದ ಎರಡನೇ ಭಾರತೀಯ ಎನ್ನುವ ಹಿರಿಮೆಗೆ ಇದೀಗ ಡಿ ಗುಕೇಶ್ ಪಾತ್ರರಾಗಿದ್ದಾರೆ.
ಟೊರೊಂಟೊ(ಕೆನಡಾ): ಭಾರತದ 17 ವರ್ಷದ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೊನೆ ಸುತ್ತಿನಲ್ಲಿ ಗುಕೇಶ್‌ಗೆ ನಕಮುರಾ ವಿರುದ್ದ ಡ್ರಾ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಹಾಲಿ ವಿಶ್ವ ಚಾಂಪಿಯನ್(ಚೀನಾದ ಡಿಂಗ್ ಲಿರೆನ್) ಜೊತೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಗುಕೇಶ್ ಸೆಣಸಾಡಲಿದ್ದಾರೆ.
ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ 9/14 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಬಳಿಕ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್ ಚಾಂಪಿಯನ್ ಆದ ಎರಡನೇ ಭಾರತೀಯ ಎನ್ನುವ ಹಿರಿಮೆಗೆ ಇದೀಗ ಡಿ ಗುಕೇಶ್ ಪಾತ್ರರಾಗಿದ್ದಾರೆ.
undefined
ಐಸಿಸಿ ಟಿ20 ವಿಶ್ವಕಪ್: ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ KMF ಪ್ರಾಯೋಜಕತ್ವ
🇮🇳 Gukesh D wins the 2024 and the right to challenge the reigning World Champion 🇨🇳 Ding Liren for the title! 🏆
Congratulations! 👏
📷 Michal Walusza pic.twitter.com/MYvnJ48VtZ
ಇನ್ನು ಇದರ ಜತೆಗೆ ಮತ್ತೋರ್ವ ಚೆಸ್ ದಂತಕಥೆ ಗ್ಯಾರಿ ಕ್ಯಾಸ್ಪರೋವ್ ಅವರ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಗುಕೇಶ್ ಯಶಸ್ವಿಯಾಗಿದ್ದಾರೆ. 1984ರಲ್ಲಿ 22 ವರ್ಷದ ಗ್ಯಾರಿ ಕ್ಯಾಸ್ಪರೋವ್ ಎದುರಾಳಿ ಅಂಟೋಲೆ ಕಾರ್ಪಾವ್ ಅವರನ್ನು ಮಣಿಸಿ ಚಾಂಪಿಯನ್ ಅಗಿದ್ದರು. ಇದೀಗ ಕೇವಲ 17 ವರ್ಷದ ಗುಕೇಶ್ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆದ ಅತಿಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
Congratulations to for becoming the youngest challenger. The family is so proud of what you have done . I’m personally very proud of how you played and handled tough situations. Enjoy the moment
— Viswanathan Anand (@vishy64theking)ಇನ್ನು ಡಿ ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆಗುವುದರೊಂದಿಗೆ ಸುಮಾರು 88,500 ಯೂರೋ ಡಾಲರ್ ನಗದು(78.5 ಲಕ್ಷ ರುಪಾಯಿ) ಬಹುಮಾನ ತಮ್ಮದಾಗಿಸಿಕೊಂಡರು.
ಇನ್ನು ಡಿ ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಆಗುತ್ತಿದ್ದಂತೆಯೇ ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್, ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. 'ಅತಿ ಕಿರಿಯ ಚಾಲೆಂಜರ್ ಅಗಿ ಹೊರಹೊಮ್ಮಿದ್ದಕ್ಕೆ ಡಿ ಗುಕೇಶ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಸಾಧನೆಗೆ ವೆಸ್ಟ್‌ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿಯ ಕುಟುಂಬ ಹೆಮ್ಮೆ ಪಡುತ್ತದೆ. ವೈಯುಕ್ತಿಯವಾಗಿ ಕಠಿಣ ಸವಾಲನ್ನು ಮೆಟ್ಟಿನಿಂತು, ಗೆಲುವು ಸಾಧಿಸಿದ್ದಕ್ಕೆ ನಿಮ್ಮ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ' ಎಂದು ಆನಂದ್ ಟ್ವೀಟ್ ಮಾಡಿದ್ದಾರೆ.