French Open 2024 ಇಂದು ಆಲ್ಕರಜ್ - ಜ್ವೆರೆವ್ ನಡುವೆ ಫೈನಲ್ ಫೈಟ್

By Kannadaprabha News  |  First Published Jun 9, 2024, 2:22 PM IST

ಸೆಮಿಫೈನಲ್‌ನಲ್ಲಿ ಆಲ್ಕರಜ್, ಇಟಲಿಯ ಯಾನ್ನಿಕ್ ಸಿನ್ನರ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರೆ, ನಾರ್ವೆಯ ಕ್ಯಾಸ್ಟರ್ ರುಡ್ ವಿರುದ್ಧ ಜ್ವೆರೆವ್ 2-6, 6-2, 6-4, 6-2 ಸೆಟ್ ಗಳಲ್ಲಿ ಜಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 2020ರಲ್ಲಿ ಯುಎಸ್ ಓಪನ್ ಫೈನಲ್ ಗೇರಿದ್ದ ಜೆರೆವ್‌ರ ಪ್ರಶಸ್ತಿ ಕನಸು ಈಡೇರಿರಲಿಲ್ಲ.


ಪ್ಯಾರಿಸ್: ಫ್ರೆಂಚ್ ಓಪನ್ ಗ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾನುವಾರ, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಇಬ್ಬರೂ ಫೈನಲ್ ಪ್ರವೇಶಿಸಿದ್ದು, ಜೈರೆವ್ ಚೊಚ್ಚಲ ಹಾಗೂ ಆಲ್ಕರಜ್ 3ನೇ ಗ್ಯಾನ್ ಸ್ಲಾಂ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. 

ಸೆಮಿಫೈನಲ್‌ನಲ್ಲಿ ಆಲ್ಕರಜ್, ಇಟಲಿಯ ಯಾನ್ನಿಕ್ ಸಿನ್ನರ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರೆ, ನಾರ್ವೆಯ ಕ್ಯಾಸ್ಟರ್ ರುಡ್ ವಿರುದ್ಧ ಜ್ವೆರೆವ್ 2-6, 6-2, 6-4, 6-2 ಸೆಟ್ ಗಳಲ್ಲಿ ಜಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 2020ರಲ್ಲಿ ಯುಎಸ್ ಓಪನ್ ಫೈನಲ್ ಗೇರಿದ್ದ ಜೆರೆವ್‌ರ ಪ್ರಶಸ್ತಿ ಕನಸು ಈಡೇರಿರಲಿಲ್ಲ. ಇನ್ನು ಆಲ್ಕರಜ್ 2022ರಲ್ಲಿ ಯುಎಸ್ ಓಪನ್, 2023ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.

Tap to resize

Latest Videos

undefined

ವಾಯು ಮಾಲಿನ್ಯ ಕಾರಣಕ್ಕೆ ಚೆಸ್‌ ವಿಶ್ವಕಪ್‌ ಆತಿಥ್ಯವನ್ನು ಕಳೆದುಕೊಳ್ಳಲಿರುವ ದೆಹಲಿ?

ನವದೆಹಲಿ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಹಾಗೂ ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್‌ ಲಿರೆನ್‌ ನಡುವೆ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನ ಆತಿಥ್ಯಕ್ಕೆ ನವದೆಹಲಿ ಬಿಡ್‌ ಸಲ್ಲಿಸಿದ್ದರೂ, ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಆತಿಥ್ಯ ಹಕ್ಕು ಕಳೆದುಕೊಳ್ಳುವ ಸಾಧ್ಯತೆಯಿದೆ.

ಇಂದು ಇಂಡೋ-ಪಾಕ್ ವಿಶ್ವಕಪ್ ಪಂದ್ಯ ನಡೆಯೋದೇ ಡೌಟ್..! ಇಲ್ಲಿದೆ ಹೊಸ ಅಪ್‌ಡೇಟ್‌

ಈ ಬಗ್ಗೆ ಅಂತಾರಾಷ್ಟ್ರೀಯ ಚೆಸ್‌ ಫೆಡರೇಶನ್‌ನ ಸಿಇಒ ಎಮಿಲ್ ಸುಟೋವ್ಸ್ಕಿ ಸುಳಿವು ನೀಡಿದ್ದು, ಆತಿಥ್ಯ ಸ್ಥಳದ ಆಯ್ಕೆ ವೇಳೆ ವಾಯುಮಾಲಿನ್ಯವನ್ನು ನಾವು ಪ್ರಮುಖವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ. ಚಾಂಪಿಯನ್‌ಶಿಪ್‌ಗೆ ನವದೆಹಲಿ ಮಾತ್ರವಲ್ಲದೆ ತಮಿಳುನಾಡು ಸರ್ಕಾರ, ಸಿಂಗಾಪುರ ಕೂಡಾ ಬಿಡ್‌ ಸಲ್ಲಿಸಿದೆ. ಶೀಘ್ರದಲ್ಲೇ ಆತಿಥ್ಯ ಸ್ಥಳ ಘೋಷಣೆಯಾಗುವ ನಿರೀಕ್ಷೆಯಿದೆ.

ಪ್ರೊ ಲೀಗ್: ಭಾರತ ವನಿತಾ ತಂಡಕ್ಕೆ ಸತತ 7ನೇ ಸೋಲು

ಲಂಡನ್‌: 2023-24 ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸತತ 7ನೇ ಸೋಲನುಭವಿಸಿದೆ. ಶನಿವಾರ ಜರ್ಮನಿ ವಿರುದ್ಧ 2-4 ಗೋಲುಗಳಿಂದ ಸೋಲು ಎದುರಾಯಿತು. ಇದರೊಂದಿಗೆ ಭಾರತ ತಂಡ ಆಡಿರುವ 15 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 8 ಅಂಕ ಸಂಪಾದಿಸಿ ಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಬಾಕಿಯಾಗಿದೆ. ಪಂದ್ಯದಲ್ಲಿ ಸುನೆಲಿತಾ(9ನೇ ನಿಮಿಷ), ದೀಪಿಕಾ(15ನೇ ನಿ.) ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರೂ, ಬಳಿಕ 4 ಗೋಲು ಬಿಟ್ಟುಕೊಟ್ಟು ಪಂದ್ಯ ಕೈಚೆಲ್ಲಿತು. ಭಾರತ ಲೀಗ್‌ನ ಕೊನೆ ಪಂದ್ಯದಲ್ಲಿ ಭಾನುವಾರ ಬ್ರಿಟನ್‌ ವಿರುದ್ಧ ಸೆಣಸಾಡಲಿದೆ.

click me!