ಮೊದಲ ಸುತ್ತಿನಲ್ಲಿ ಡ್ರಾಗೆ ತೃಪ್ತಿಪಟ್ಟ ಭಾರತದ ಐವರು

By Kannadaprabha News  |  First Published Apr 6, 2024, 11:22 AM IST

ಗುರುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ ಆರಂಭಿಕ ಸುತ್ತಿನಲ್ಲಿ 18ರ ಪ್ರಜ್ಞಾನಂದ ಅವರು ಫ್ರಾನ್ಸ್‌ನ ಫಿರೌಜಾ ಅಲಿರೆಜಾ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಭಾರತದವರೇ ಆದ ವಿದಿತ್‌ ಗುಜರಾತಿ ಹಾಗೂ ಡಿ.ಗುಕೇಶ್‌ ನಡುವಿನ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿತು. 2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗುಕೇಶ್‌ ಸವಾಲು ಎದುರಾಗಲಿದ್ದು, ವಿದಿತ್‌ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಸೆಣಸಲಿದ್ದಾರೆ.


ಟೊರೊಂಟೊ(ಕೆನಡಾ): ತಾರಾ ಚೆಸ್‌ ಪಟು ಆರ್‌.ಪ್ರಜ್ಞಾನಂದ ಸೇರಿದಂತೆ ಐವರು ಭಾರತೀಯರು ಇಲ್ಲಿ ಆರಂಭಗೊಂಡ ಪ್ರತಿಷ್ಠಿತ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಗುರುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ ಆರಂಭಿಕ ಸುತ್ತಿನಲ್ಲಿ 18ರ ಪ್ರಜ್ಞಾನಂದ ಅವರು ಫ್ರಾನ್ಸ್‌ನ ಫಿರೌಜಾ ಅಲಿರೆಜಾ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಭಾರತದವರೇ ಆದ ವಿದಿತ್‌ ಗುಜರಾತಿ ಹಾಗೂ ಡಿ.ಗುಕೇಶ್‌ ನಡುವಿನ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿತು. 2ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗುಕೇಶ್‌ ಸವಾಲು ಎದುರಾಗಲಿದ್ದು, ವಿದಿತ್‌ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಸೆಣಸಲಿದ್ದಾರೆ.

Tap to resize

Latest Videos

undefined

ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ನೀರು ಬಳಕೆ: ವರದಿ ಸಲ್ಲಿಸುವಂತೆ ಎನ್‌ಜಿಟಿ ಆದೇಶ!

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದ ಅವರ ಸಹೋದರಿ, ಆರ್‌.ವೈಶಾಲಿ ತಮ್ಮ ಪ್ರತಿಸ್ಪರ್ಧಿ ಕೊನೆರು ಹಂಪಿ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು. 2ನೇ ಸುತ್ತಿನಲ್ಲಿ ಹಂಪಿ, ರಷ್ಯಾದ ಕ್ಯಾಟೆರಿನಾ ಲಾಗ್ನೊ ವಿರುದ್ಧ, ವೈಶಾಲಿ ಅವರು ಟಾನ್‌ ಝೊಂಗ್ಯಿ ವಿರುದ್ಧ ಸೆಣಸಾಡಲಿದ್ದಾರೆ.

ಭಾರತ vs ಆಸೀಸ್‌ ಹಾಕಿ ಸರಣಿ ಇಂದಿನಿಂದ ಶುರು

ಪರ್ಥ್‌: ಭಾರತ ಪುರುಷರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಮೊದಲ ಪಂದ್ಯ ಶನಿವಾರ ನಡೆಯಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ಸಿದ್ಧತೆ ದೃಷ್ಟಿಯಲ್ಲಿ ಇತ್ತಂಡಗಳಿಗೂ ಈ ಸರಣಿ ಮಹತ್ವದ್ದೆನಿಸಿದೆ. ಎಲ್ಲಾ ಪಂದ್ಯಗಳಿಗೂ ಪರ್ಥ್‌ ಆತಿಥ್ಯ ವಹಿಸಲಿದೆ. ಏ.7ಕ್ಕೆ 2ನೇ ಪಂದ್ಯ ನಡೆಯಲಿದ್ದು, ಬಳಿಕ ಏ.10, ಏ.12 ಮತ್ತು ಏ.13ಕ್ಕೆ ಕ್ರಮವಾಗಿ ಇತರ ಪಂದ್ಯಗಳು ನಿಗದಿಯಾಗಿವೆ.

ಬೆಂಗಳೂರು 10ಕೆ ಓಟಕ್ಕೆ ಕಿವೀಸ್‌ ದಿಗ್ಗಜೆ ಅಥ್ಲೀಟ್‌ ಆ್ಯಡಮ್ಸ್‌ ರಾಯಭಾರಿ

ಬೆಂಗಳೂರು: ಏ.28ಕ್ಕೆ ನಿಗದಿಯಾಗಿರುವ ವಿಶ್ವ 10ಕೆ ಬೆಂಗಳೂರು ಓಟಕ್ಕೆ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನ್ಯೂಜಿಲೆಂಡ್‌ನ ದಿಗ್ಗಜ ಶಾಟ್‌ ಪುಟ್‌ ಎಸೆತಗಾರ್ತಿ ವೆಲೇರಿ ಆ್ಯಡಮ್ಸ್‌ ಅವರನ್ನು ನೇಮಿಸಲಾಗಿದೆ. ಆ್ಯಡಮ್ಸ್‌ 2008 ಹಾಗೂ 2012ರ ಒಲಿಂಪಿಕ್ಸ್‌ನ ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ 2016ರಲ್ಲಿ ಬೆಳ್ಳಿ, 2021ರಲ್ಲಿ ಕಂಚಿನ ಪದಕಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ 39ರ ಆ್ಯಡಮ್ಸ್‌ ಅವರು ವಿಶ್ವ ಅಥ್ಲೆಟಿಕ್ಸ್‌ ಆಯೋಗದ ಮುಖ್ಯಸ್ಥರಾಗಿದ್ದಾರೆ.

Watch: ಪ್ರ್ಯಾಕ್ಟೀಸ್‌ ಜೆರ್ಸಿಯಲ್ಲಿ ಟ್ರೋಫಿ ಸ್ವೀಕರಿಸಿ, ಬಾಂಗ್ಲಾಕ್ಕೆ ಕಿಚಾಯಿಸಿದ ಶ್ರೀಲಂಕಾ!

ಪಾಕ್‌ನಲ್ಲಿ ವಾಲಿಬಾಲ್‌ ಲೀಗ್‌ ಆಡುವಂತೆ ಭಾರತಕ್ಕೆ ಮನವಿ

ಕರಾಚಿ: ಮೇ 11ರಿಂದ 17ರ ವರೆಗೆ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯನ್‌ ಚಾಲೆಂಜ್‌ ವಾಲಿಬಾಲ್‌ ಲೀಗ್‌ನಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಪಾಕಿಸ್ತಾನ ವಾಲಿಬಾಲ್‌ ಫೆಡರೇಷನ್‌(ಪಿವಿಎಫ್‌) ಮನವಿ ಮಾಡಿದೆ. ಈ ಬಗ್ಗೆ ಪಿವಿಎಫ್‌ ಮುಖ್ಸಸ್ಥ ಯಾಕೂಬ್‌ ಚೌಧರಿ ಮಾಹಿತಿ ನೀಡಿದ್ದು, ಭಾರತ ಸೇರಿ ಎಲ್ಲಾ ದೇಶಗಳಿಗೂ ಆಹ್ವಾನ ಪತ್ರ ನೀಡಿದ್ದಾಗಿ ತಿಳಿಸಿದ್ದಾರೆ. ಟೂರ್ನಿಯಲ್ಲಿ ಇರಾನ್‌, ಶ್ರೀಲಂಕಾ, ಭೂತಾನ್‌, ತುರ್ಕ್‌ಮೇನಿಸ್ತಾನ, ಅಫ್ಘಾನಿಸ್ತಾನ, ಕಜಕಸ್ತಾನ, ಕಿರ್ಗಿಸ್ಥಾನ ತಂಡಗಳು ಪಾಲ್ಗೊಳ್ಳಲಿದ್ದು, ಇನ್ನೂ 4-5 ತಂಡಗಳು ಭಾಗವಹಿಸುವ ವಿಶ್ವಾಸವನ್ನು ಪಿವಿಎಫ್‌ ವ್ಯಕ್ತಪಡಿಸಿದೆ.
 

click me!