ಬಾಕ್ಸರ್‌ ಪರ್ವೀನ್‌ ಅಮಾನತು: ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡ ಭಾರತ!

By Kannadaprabha News  |  First Published May 18, 2024, 11:02 AM IST

ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಪರ್ವೀನ್‌, ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಿಕೊಂಡಿದ್ದರು. ಆದರೆ 12 ತಿಂಗಳಲ್ಲಿ 3 ಬಾರಿ ವಾಡಾ ನಿಯಮ ಉಲ್ಲಂಘಿಸಿದ್ದಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.


ನವದೆಹಲಿ: 3 ಬಾರಿ ನಿಯಮ ಉಲ್ಲಂಘನೆ ಮಾಡಿದ ಭಾರತದ ಬಾಕ್ಸರ್‌ ಪರ್ವೀನ್‌ ಹೂಡಾ ಅವರನ್ನು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) 22 ತಿಂಗಳುಗಳ ಕಾಲ ಅಮಾನತುಗೊಳಿಸಿ ಆದೇಶಿಸಿದೆ. ಇದರೊಂದಿಗೆ ಭಾರತ 57 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್ ಕೋಟಾ ಕಳೆದುಕೊಂಡಿದೆ.

ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಪರ್ವೀನ್‌, ಕಳೆದ ವರ್ಷ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಿಕೊಂಡಿದ್ದರು. ಆದರೆ 12 ತಿಂಗಳಲ್ಲಿ 3 ಬಾರಿ ವಾಡಾ ನಿಯಮ ಉಲ್ಲಂಘಿಸಿದ್ದಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಅಮಾನತು ಅವಧಿ ಈಗಾಗಲೇ 8 ತಿಂಗಳು ಆಗಿರುವುದರಿಂದ ಇನ್ನು 14 ತಿಂಗಳ ಅಮಾನತು ಅವಧಿಯನ್ನು ಪರ್ವೀನ್‌ ಪೂರ್ಣಗೊಳಿಸಬೇಕಿದೆ.

Tap to resize

Latest Videos

undefined

ಇದರೊಂದಿಗೆ ಪರ್ವೀನ್‌ ಸದ್ಯ ಒಲಿಂಪಿಕ್ಸ್‌ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಮೇ 24ರಿಂದ ಬ್ಯಾಂಕಾಕ್‌ನಲ್ಲಿ ಒಲಿಂಪಿಕ್ಸ್ ಅರ್ಹತಾ ಟೂರ್ನಿ ನಡೆಯಲಿದ್ದು, 57 ಕೆ.ಜಿ. ವಿಭಾಗದಲ್ಲಿ ಕೋಟಾ ಗೆಲ್ಲಲು ಭಾರತಕ್ಕೆ ಮತ್ತೊಂದು ಅವಕಾಶವಿದೆ.

ನನ್ನ ದಾಖಲೆಗಳನ್ನು ಯಾರಿಂದಲೂ ಮುರಿಯಲು ಆಗುವುದಿಲ್ಲ: ಉಸೇನ್‌ ಬೋಲ್ಟ್‌

ಆದರೆ ಏಪ್ರಿಲ್‌ 11ರ ಮೊದಲು ಹೆಸರು ನೋಂದಾಯಿಸಿದ ಬಾಕ್ಸರ್‌ಗಳಿಗೆ ಮಾತ್ರ ಅರ್ಹತಾ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಹೀಗಾಗಿ 60 ಕೆ.ಜಿ. ಮತ್ತು 66 ಕೆ.ಜಿ. ವಿಭಾಗದಲ್ಲಿ ಭಾರತ ಹೆಸರಿಸಿದ್ದ ಮೀಸಲು ಆಟಗಾರ್ತಿಯರನ್ನೇ 57 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಸಬೇಕಿದೆ.

ಡೋಪ್‌ನಲ್ಲಿ ಸಿಕ್ಕಿ ಬಿದ್ರೆ ಕ್ರೀಡಾಪಟುವಿನ ಜತೆ ಇನ್ನು ಕೋಚ್‌ಗೂ ಶಿಕ್ಷೆ!

ನವದೆಹಲಿ: ಉದ್ದೀಪನ ಮದ್ದು ಸೇವನೆ ಮಾಡಿ ಅಥ್ಲೀಟ್‌ಗಳು ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಹೊಸ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಡೋಪ್‌ ಪರೀಕ್ಷೆಯಲ್ಲಿ ಅಥ್ಲೀಟ್‌ ವಿಫಲವಾದರೆ ಅವರ ಕೋಚ್‌ಗೂ ಶಿಕ್ಷೆ ವಿಧಿಸಲು ತೀರ್ಮಾನಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಲ್ಲ, ‘ಡೋಪಿಂಗ್‌ ಪ್ರಕರಣಗಳು ಮಿತಿ ಮೀರುತ್ತಿದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇಡುತ್ತಿದ್ದೇವೆ. ಡೋಪ್‌ ಪರೀಕ್ಷೆಗೆ ಮಾದರಿ ನೀಡುವಾಗ ಅಥ್ಲೀಟ್‌ಗಳು ಅವರ ಕೋಚ್‌ಗಳ ಹೆಸರನ್ನೂ ಉಲ್ಲೇಖಿಸಬೇಕು. ಒಂದು ವೇಳೆ ಅಥ್ಲೀಟ್‌ ಸಿಕ್ಕಿ ಬಿದ್ದರೆ ಅವರನ್ನು ಅಮಾನತು ಮಾಡಿ, ಕೋಚ್‌ಗೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧ ಹೇರುತ್ತೇವೆ. ಅವರ ಸರ್ಕಾರಿ ಹುದ್ದೆಗಳನ್ನೂ ಕಿತ್ತು ಹಾಕಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ರು ಆರ್‌ಸಿಬಿ ಪ್ಲೇ ಆಫ್‌ಗೇರೋದು ಡೌಟ್..! ಇಲ್ಲಿದೆ ಹೊಸ ಅಪ್ಡೇಟ್‌

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ಸೆಮಿಗೆ

ಬ್ಯಾಂಕಾಕ್‌: ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಡಬಲ್ಸ್‌ ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ ಪ್ರವೇಶಿಸಿದೆ. ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಮಲೇಷ್ಯಾದ ಜುನೈದಿ ಆರಿಫ್‌-ರಾಯ್‌ ಕಿಂಗ್‌ ವಿರುದ್ಧ 21-7, 21-14ರಲ್ಲಿ ಗೆಲುವು ಲಭಿಸಿತು. ಮಹಿಳಾ ಡಬಲ್ಸ್‌ನಲ್ಲಿ ತನಿಶಾ-ಅಶ್ವಿನಿ ಪೊನ್ನಪ್ಪ ಕೂಡಾ ಸೆಮೀಸ್‌ಗೇರಿದರು. ಪುರುಷರ ಸಿಂಗಲ್ಸ್‌ನಲ್ಲಿ ಮೀರಬಾ ಲುವಾಂಗ್‌ ಸೋಲನುಭವಿಸಿದರು.
 

click me!