ಬೆಂಗಳೂರು ಓಪನ್ 2018: 2ನೇ ಸುತ್ತಿಗೆ ಲಗ್ಗೆಯಿಟ್ಟ ಪ್ರಜ್ಞೇಶ್

By Web Desk  |  First Published Nov 14, 2018, 10:07 AM IST

ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸೋಲುಂಡರೂ, ನಂತರದ 2 ಸೆಟ್ ಜಯಿಸಿ ಹೊಸ್ಸಾಮ್ 2ನೇ ಸುತ್ತಿಗೆ ಪ್ರವೇಶಿಸಿದರು. ಮಂಗಳವಾರ ಭಾರತದ ಐವರು ಆಟಗಾರರು ಕಣದಲ್ಲಿದ್ದರು. ಈ ಪೈಕಿ ಸಾಕೇತ್ ಮೈನೇನಿ, ಪ್ರಜ್ನೇಶ್ ಗುಣೇಶ್ವರನ್ ಹಾಗೂ ಶಶಿಕುಮಾರ್ ಮುಕುಂದ್ 2ನೇ ಸುತ್ತಿಗೆ ಪ್ರವೇಶ ಪಡೆದರು.


ಬೆಂಗಳೂರು[ನ.14]: ಈಜಿಪ್ಟ್‌ನ ಯೂಸೆಫ್ ಹೊಸ್ಸಾಮ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಅಗ್ರ ಶ್ರೇಯಾಂಕಿತ ಆಟಗಾರ ಮೊಲ್ಡೋವಾದ ರಾಡು
ಆಲ್ಬೊಟ್‌ರನ್ನು ಹೊಸ್ಸಾಮ್ 26-, 6-2, 6-3 ಸೆಟ್‌ಗಳಲ್ಲಿ ಸೋಲಿಸಿ ಗಮನ ಸೆಳೆದಿದ್ದಾರೆ.

ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸೋಲುಂಡರೂ, ನಂತರದ 2 ಸೆಟ್ ಜಯಿಸಿ ಹೊಸ್ಸಾಮ್ 2ನೇ ಸುತ್ತಿಗೆ ಪ್ರವೇಶಿಸಿದರು. ಮಂಗಳವಾರ ಭಾರತದ ಐವರು ಆಟಗಾರರು ಕಣದಲ್ಲಿದ್ದರು. ಈ ಪೈಕಿ ಸಾಕೇತ್ ಮೈನೇನಿ, ಪ್ರಜ್ನೇಶ್ ಗುಣೇಶ್ವರನ್ ಹಾಗೂ ಶಶಿಕುಮಾರ್ ಮುಕುಂದ್ 2ನೇ ಸುತ್ತಿಗೆ ಪ್ರವೇಶ ಪಡೆದರು. ರಷ್ಯಾದ ಇವಾನ್ ನೆಡೆಲ್ಕೋ ವಿರುದ್ಧ ಪ್ರಜ್ನೇಶ್ 6-2, 6-2ರಲ್ಲಿ ಗೆದ್ದರೆ, ಸಾಕೇತ್ ಭಾರತದವರೇ ಆದ ಆದಿಲ್ ಕಲ್ಯಾಣ್‌ಪುರ್‌ರನ್ನು 6-3, 7-6 ಸೆಟ್‌ಗಳಲ್ಲಿ ಮಣಿಸಿದರು. ಶಶಿಕುಮಾರ್ ಅಮೆರಿಕದ ಕಾಲಿನ್ ವಿರುದ್ಧ 7-6, 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. 

Tap to resize

Latest Videos

ಇನ್ನು ಮೈಸೂರಿನ ಸೂರಜ್ ಪ್ರಬೋಧ್, ಫ್ರಾನ್ಸ್‌ನ ಕ್ವೆಂಟಿನ್ ಹೇಲ್ಸ್ ವಿರುದ್ಧ 3-6, 1-6 ಸೆಟ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಅಗ್ರಶ್ರೇಯಾಂಕಿತ ಭಾರತದ ಜೀವನ್ ಹಾಗೂ ಜರ್ಮನಿಯ ಕೆವಿನ್ ಜೋಡಿ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು.
 

click me!