ಆಸ್ಪ್ರೇಲಿಯಾದಲ್ಲಿ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟ: ಕುಸ್ತಿ, ಶೂಟಿಂಗ್‌ಗಿಲ್ಲ ಸ್ಥಾನ..!

By Kannadaprabha News  |  First Published Apr 13, 2022, 7:36 AM IST

* 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆಸ್ಟ್ರೇಲಿಯಾ ಆತಿಥ್ಯ

* 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕುಸ್ತಿ, ಶೂಟಿಂಗ್‌ಗೆ ಇಲ್ಲ ಅವಕಾಶ

* ಆಸ್ಪ್ರೇಲಿಯಾಕ್ಕೆ 6ನೇ ಬಾರಿ ಕ್ರೀಡಾಕೂಟದ ಅತಿಥ್ಯ ಹಕ್ಕು


ಲಂಡನ್‌: 23ನೇ ಆವೃತ್ತಿಯ, 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ (Commonwealth Games 2026) ಆಸ್ಪ್ರೇಲಿಯಾದ ವಿಕ್ಟೋರಿಯಾ ರಾಜ್ಯ ಆತಿಥ್ಯ ವಹಿಸಲಿದೆ ಎಂದು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌(ಸಿಜಿಎಫ್‌) ಮಂಗಳವಾರ ಘೋಷಿಸಿದೆ. ಮೆಲ್ಬರ್ನ್‌, ಜೀಲೊಂಗ್‌, ಬೆಂಡಿಗೋ, ಜಿಫ್ಸ್‌ಲೆಂಡ್‌ ಸೇರಿ ಇನ್ನೂ ಕೆಲ ಪ್ರಮುಖ ನಗರಗಳಲ್ಲಿ 2026ರ ಮಾರ್ಚ್‌ನಲ್ಲಿ ಗೇಮ್ಸ್‌ ನಡೆಯಲಿದೆ. ಪ್ರಸಿದ್ಧ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ 1 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಜಿಎಫ್‌ ಮಾಹಿತಿ ನೀಡಿದೆ. 

ಆರಂಭಿಕ ಪಟ್ಟಿಯಲ್ಲಿ ಟಿ20 ಕ್ರಿಕೆಟ್‌ ಸೇರಿದಂತೆ ಒಟ್ಟು 16 ಕ್ರೀಡೆಗಳಿದ್ದು, ಕೆಲ ಕ್ರೀಡೆಗಳು ಈ ವರ್ಷಾಂತ್ಯದಲ್ಲಿ ಸೇರ್ಪಡೆಯಾಗಲಿದೆ. ಸದ್ಯ ಈ ಪಟ್ಟಿಯಲ್ಲಿ ಶೂಟಿಂಗ್‌, ಕುಸ್ತಿ, ಆರ್ಚರಿ (No Place for Shooting, Wrestling and Archery) ಕ್ರೀಡೆಗಳಿಗೆ ಸ್ಥಾನ ಸಿಕ್ಕಿಲ್ಲ. ಈ ಕ್ರೀಡೆಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಭಾರತಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆಸ್ಪ್ರೇಲಿಯಾಕ್ಕೆ 6ನೇ ಬಾರಿ ಕ್ರೀಡಾಕೂಟದ ಅತಿಥ್ಯ ಹಕ್ಕು ಲಭಿಸಿದ್ದು, ವಿಕ್ಟೋರಿಯಾ 2006ರ ಬಳಿಕ 2ನೇ ಬಾರಿ ಗೇಮ್ಸ್‌ ಆಯೋಜಿಸಲಿದೆ.

Tap to resize

Latest Videos

undefined

ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ಗೆ ಸೈನಾ ಗೈರು?

ನವದೆಹಲಿ: ಮಾಜಿ ವಿಶ್ವ ನಂ.1 ಶಟ್ಲರ್‌ ಸೈನಾ ನೆಹ್ವಾಲ್‌ (Saina Nehwal) ಈ ಬಾರಿ ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ (Asian Games) ಆಯ್ಕೆ ಟ್ರಯಲ್ಸ್‌ಗೆ ಗೈರಾಗಲು ನಿರ್ಧರಿಸಿದ್ದು, ಎರಡೂ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದು ಅನುಮಾನ ಮೂಡಿಸಿದೆ. ಟ್ರಯಲ್ಸ್‌ ಏಪ್ರಿಲ್ 15-20ಕ್ಕೆ ನಡೆಯಲಿದ್ದು, ಆದರೆ ಟ್ರಯಲ್ಸ್‌ನಿಂದ ಹೊರಗುಳಿಯುವುದಾಗಿ ಸೈನಾ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಗೆ ತಿಳಿಸಿದ್ದಾರೆ. 2 ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಸೈನಾ, ಕಳೆದ ಕೆಲ ವರ್ಷಗಳಿಂದ ಸತತವಾಗಿ ಗಾಯಗೊಳ್ಳುತ್ತಿದ್ದು, ಸದ್ಯ ವಿಶ್ವ ರಾರ‍ಯಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿದ್ದಾರೆ.

ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌: ಭಾರತಕ್ಕೆ ತಪ್ಪಿದ ಕಂಚು

ಪಾಚೆಫ್‌ಸ್ಟೂ್ರಮ್‌: ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ () 2ನೇ ಬಾರಿ ಕಂಚು ಗೆಲ್ಲುವ ಭಾರತ ಕನಸು ಭಗ್ನಗೊಂಡಿದೆ. ಮಂಗಳವಾರ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಶೂಟೌಟ್‌ನಲ್ಲಿ 0-3 ಗೋಲುಗಳಿಂದ ಸೋತು ನಿರಾಸೆ ಮೂಡಿಸಿತು. 2013ರಲ್ಲಿ ಕಂಚಿನದ ಪದಕದ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದ ಇಂಗ್ಲೆಂಡ್‌, ಈ ಬಾರಿ ಸೇಡು ತೀರಿಸಿಕೊಂಡಿತು.

ಇಂಗ್ಲೆಂಡ್‌ನ ಗಿಗಿಲಿಯೋ 18ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಭಾರತದ ಮುಮ್ತಾಜ್‌ ಖಾನ್‌(21 ಮತ್ತು 47ನೇ ನಿ.) 2 ಗೋಲು ಹೊಡೆದು ಮುನ್ನಡೆ ಒದಗಿಸಿದರು. ಆದರೆ ಕ್ಲಾಡಿಯಾ ಸ್ವೈನ್‌ 58ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಇಂಗ್ಲೆಂಡ್‌ ಟೈ ಸಾಧಿಸಿತು. ಪಂದ್ಯದ ನಿಗದಿತ ಸಮಯದಲ್ಲಿ ಉಭಯ ತಂಡಗಳೂ 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಶೂಟೌಟ್‌ನಲ್ಲಿ ಭಾರತದ ಮೂರೂ ಪ್ರಯತ್ನಗಳು ವಿಫಲಗೊಂಡವು. ಇಂಗ್ಲೆಂಡ್‌ 3 ಗೋಲು ಬಾರಿಸಿ ಕಂಚಿನ ಪದಕಕ್ಕೆ ಕೊರಳ್ಳೊಡ್ಡಿತು.

ಎಎಫ್‌ಸಿ: ಹೊಸ ದಾಖಲೆ ಬರೆದ ಮುಂಬೈ ಎಫ್‌ಸಿ

ರಿಯಾದ್‌: ಮುಂಬೈ ಸಿಟಿ ಎಫ್‌ಸಿ ಫುಟ್ಬಾಲ್‌ ತಂಡ ಎಎಫ್‌ಸಿ ಏಷ್ಯನ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಪ್ರಥಮ ಫುಟ್ಬಾಲ್‌ ಕ್ಲಬ್‌ ಎಂಬ ದಾಖಲೆ ಬರೆದಿದೆ. ಸೋಮವಾರ ‘ಬಿ’ ಗುಂಪಿನ ಪಂದ್ಯದಲ್ಲಿ ಇರಾಕ್‌ನ ಏರ್‌ ಫೋರ್ಸ್‌ ಕ್ಲಬ್‌ ವಿರುದ್ಧ ಮುಂಬೈ 2-1 ಗೋಲುಗಳಿಂದ ಜಯಭೇರಿ ಬಾರಿಸಿತು. ಹಮ್ಮಾದಿ ಅಹ್ಮದ್‌ ಏರ್‌ ಫೋರ್ಸ್‌ ಪರ ಏಕೈಕ ಗೋಲು ಹೊಡೆದರೆ, ಮುಂಬೈ ಪರ ಡಿಯಾಗೊ ಮಾರಿಸಿಯೋ, ರಾಹುಲ್‌ ಭೆಕೆ ಗೋಲು ಬಾರಿಸಿ ಐತಿಹಾಸಿಕ ಗೆಲುವು ತಂದುಕೊಟ್ಟರು.
 

click me!