ಅರುಣಾಚಲ ಮಹಿಳಾ ತಂಡ 14 ರನ್‌ಗೆ ಆಲೌಟ್‌!

By Web DeskFirst Published 16, Jan 2019, 10:17 AM IST
Highlights

ಚೀನಾ ಮಹಿಳಾ ತಂಡ  14 ರನ್‌ಗೆ ಆಲೌಟ್ ಆಗಿರೋದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾರಣ ಚೀನಾ ಕ್ರಿಕೆಟ್‌ನಲ್ಲಿ ಇನ್ನೂ ಶಿಶು. ಆದರೆ ಇದೀಗ ಬಲಿಷ್ಠ ಭಾರತದ ದೇಸಿ ಮಹಿಳಾ ತಂಡ ಕೂಡ 14 ರನ್‌ಗೆ ಆಲೌಟ್ ಆಗಿರುವುದು ಅಶ್ಚರ್ಯ ಮೂಡಿಸಿದೆ.
 

ನವದೆಹಲಿ(ಜ.16): ಬಿಸಿಸಿಐನ ಮಹಿಳಾ ಲೀಗ್‌ ಮತ್ತು ನಾಕೌಟ್‌ ಅಂಡರ್‌-23 ಟಿ20 ಪಂದ್ಯಾವಳಿಯಲ್ಲಿ ಅರುಣಾಚಲ ಪ್ರದೇಶ ತಂಡ 14 ರನ್‌ಗಳಿಗೆ ಆಲೌಟ್‌ ಆಗಿದೆ. ಮಂಗಳವಾರ ನಡೆದ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅರುಣಾಚಲ 11 ಓವರ್‌ಗಳಲ್ಲಿ 14 ರನ್‌ಗಳಿಸಿತು. 

ಇದನ್ನೂ ಓದಿ: ರಾಮನ್‌ರಿಂದ ಬದಲಾವಣೆ ನಿರೀಕ್ಷೆ: ಮಿಥಾಲಿ ರಾಜ್‌

ತಂಡದ 7 ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. 15 ರನ್‌ ಗುರಿ ಬೆನ್ನಟ್ಟಿದ ಹಿಮಾಚಲ ಕೇವಲ 1.2 ಓವರ್‌ಗಳಲ್ಲಿ ಜಯದ ನಗೆ ಬೀರಿತು. ಇದು ಭಾರತೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಲ್ಪ ಮೊತ್ತ  ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. 

ಇದನ್ನೂ ಓದಿ: ಬಾಕ್ಸಿಂಗ್: ಭಾರತದ ಮೇರಿ ಕೋಮ್ ನಂ.1

ಕಾಕತಾಳಿಯ ಎಂಬಂತೆ ಸೋಮವಾರವಷ್ಟೇ ಚೀನಾ ಮಹಿಳಾ ತಂಡ ಸಹ ಟಿ20 ಪಂದ್ಯದಲ್ಲಿ 14 ರನ್‌ಗೆ ಆಲೌಟ್‌ ಆಗಿತ್ತು. ಇದೀಗ ಅತ್ಯಂತ ಬಲಿಷ್ಠ ಕ್ರಿಕೆಟ್ ಅಡಿಪಾಯ ಹೊಂದಿರುವ ಭಾರತದಲ್ಲೂ ಇದೇ ರೀತಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿರುವುದು ದುರಂತ.

Last Updated 16, Jan 2019, 10:17 AM IST