Union Budget 2024: ಪ್ಯಾರಿಸ್‌ ಒಲಿಂಪಿಕ್ಸ್‌ ಟಾರ್ಗೆಟ್‌, ಭಾರೀ ಬಜೆಟ್‌ ನಿರೀಕ್ಷೆಯಲ್ಲಿದೆ ಕ್ರೀಡಾಕ್ಷೇತ್ರ!

By Santosh Naik  |  First Published Jan 29, 2024, 1:50 PM IST


ಕ್ರೀಡಾ ಕ್ಷೇತ್ರದಲ್ಲಿ ತಳಮಟ್ಟಕ್ಕೆ ಸಹಾಯವಾಗಬಲ್ಲ ಕಾರ್ಯಕ್ರಮಗಳು, ಕಾರ್ಪೊರೇಟ್‌ಗಳಿಂದ ಬೆಂಬಲಿತವಾದ ಸ್ವದೇಶಿ ಕ್ರೀಡಾ ಲೀಗ್‌ಗಳು, ಎನ್‌ಎಸ್‌ಎಫ್ ಹಂಚಿಕೆ, ಪಿಪಿಪಿ ಮಾದರಿಯ ಮೂಲಕ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಸೇರಿದಂತೆ ಕ್ರೀಡಾ ಸೇವೆಗಳ ಮೇಲಿನ ಜಿಎಸ್‌ಟಿಯಲ್ಲಿ ಕಡಿತದ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ನಿರೀಕ್ಷೆ ಇಟ್ಟಿದೆ.
 


ನವದೆಹಲಿ (ಜ.29): ಚುನಾವಣಾ ವರ್ಷದಲ್ಲಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಮಂಡನೆ ಮಾಡುವ ದಿನ ಹತ್ತಿರವಾಗುತ್ತಿರುವ ನಡುವೆ ಕ್ರೀಡಾ ಕ್ಷೇತ್ರ ತನ್ನ ಭಾರೀ ನಿರೀಕ್ಷೆಯನ್ನು ಮುಂದುವರಿಸಿದೆ. ಅದಕ್ಕೆ ಕಾರಣ ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌. ಒಲಿಂಪಿಕ್ಸ್‌ ಕಾರಣಕ್ಕಾಗಿಯೇ ಕ್ರೀಡಾ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಇನ್ನಷ್ಟು ಹೆಚ್ಚಿನ ಗಮನ ಸಿಗಬಹುದು ಎನ್ನುವ ಅಂದಾಜು ವ್ಯಕ್ತವಾಗಿದೆ. 2023ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 3397.32 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿತ್ತು. ಅದಕ್ಕೂ ಹಿಂದಿನ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣಕ್ಕಿಂತ 300 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಮೀಸಲಿಟಟಿತ್ತು. ಇದು ಕ್ರೀಡಾ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ನೀಡಿದ ಈವರೆಗಿನ ಅತ್ಯಂತ ಗರಿಷ್ಠ ಮೊತ್ತ ಎನಿಸಿಕೊಂಡಿತ್ತು. ಇದರಲ್ಲಿ ಖೇಲೋ ಇಂಡಿಯಾಗೆ ಗರಿಷ್ಠ ಮಟ್ಟದ ಹಣವನ್ನು ನೀಡಲಾಗಿತ್ತು. ದೇಶದ ಕ್ರೀಡಾ ಕ್ಷೇತ್ರದ ಪ್ರಗತಿಯಲ್ಲಿ ಪ್ಮರುಖ ಪಾತ್ರ ವಹಿಸಿರುವ ಖೇಲೋ ಇಂಡಿಯಾಗಾಗಿ 1045 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು.

ಕಳೆದ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ನೀಡಿದ್ದ ಹಣದ ಲೆಕ್ಕಾಚಾರದಲ್ಲಿ ಈ ಬಾರಿಯೂ ದೊಡ್ಡ ಮೊತ್ತದ ಹಣ ಬರಿದು ಬರುವ ನಿರೀಕ್ಷೆ ಇದೆ ಎಂದು ಕ್ರೀಡಾ ಕ್ಷೇತ್ರದ ಉದ್ದಿಮೆಯ ಪಾಲುದಾರರು ಅಅಂದಾಜಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಕ್ರೀಡಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಮುಂದಿನ ಕೇಂದ್ರ ಬಜೆಟ್‌ ಮುಖ್ಯವಾಗಿದೆ. ಕೇವಲ ಪ್ಯಾರಿಸ್‌ ಒಲಿಂಪಿಕ್ಸ್‌ ಮಾತ್ರವಲ್ಲ, ದೇಶದ ಒಲಿಂಪಿಕ್ಸ್‌ ಆತಿಥ್ಯದ ಬಿಡ್ ಕಾರಣಕ್ಕಾಗಿಯೂ ಬಜೆಟ್‌ ಮೇಲೆ ನಿರೀಕ್ಷೆ ಇದೆ.

'ಕಳೆದ ವರ್ಷ ಕ್ರೀಡಾ ಬಜೆಟ್‌ಗೆ ಉತ್ತಮ ಹಣ ಸಂದಾಯವಾಗಿತ್ತು. ದೇಶದ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಬದ್ಧತೆ ಇದರಲ್ಲಿ ಎದ್ದು ಕಂಡಿತ್ತು. ಈ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ ಇದೆ. ಆ ಕಾರಣಕ್ಕಾಗಿ ಉದಯೋನ್ಮುಖ ಅಥ್ಲೀಟ್‌ಗಳ ಪ್ರಗತಿಗೆ ಸರ್ಕಾರದ ನೆರವು ಮುಂದುವರಿಯುವ ಸಾಧ್ಯತೆ ಇದೆ. ಅದರೊಂದಿಗೆ ತಳಮಟ್ಟದ ಕಾರ್ಯಕ್ರಮಗಳಾದ ಖೇಲೋ ಇಂಡಿಯಾ, ವೃತ್ತಿಪರ ಲೀಗ್‌ಗಳು ಭಾರತದ ಕ್ರೀಡಾ ಲೋಕದ ಪ್ರಮುಖ ಕಾರ್ಯಕ್ರಮವಾಗಿದ್ದು, ಅವುಗಳಿಗೂ ಸಹಾಯ ಸಿಗುವ ಸಾಧ್ಯತೆ ಇದೆ ಎಂದು ಪುನೀತ್‌ ಬಾಲನ್‌ ಗ್ರೂಪ್‌ನ ಎಂಸಿ ಹಾಗೂ ಚೇರ್ಮನ್‌ ಪುನೀತ್‌ ಬಾಲನ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Tap to resize

Latest Videos

undefined

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ  ಭಾರತದ ಒಲಿಂಪಿಕ್ಸ್‌ ಆತಿಥ್ಯದ ಬಗ್ಗೆ ಮಾತನಾಡಿದ್ದು, 2036ರ ಒಲಿಂಪಿಕ್ಸ್‌ ಗೇಮ್ಸ್‌ಗೆ ಬಿಡ್‌ ಮಾಡುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಗುಜರಾತ್‌ನ ಅಹಮದಾಬಾದ್‌ ಕೂಡ ತನ್ನ ಸಿದ್ಧತೆಗಳನ್ನು ಆರಂಭಿಸಿದೆ.

ಪ್ರಧಾನಿ ಮೋದಿ ಈಗಾಗಲೇ ಒಲಿಂಪಿಕ್ಸ್‌ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟ್‌ ಹೊರತಾದ ಕ್ರೀಡೆಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಕ್ಕೆ ಹೆಚ್ಚಿನ ಹಣ ಹರಿದು ಬರುವ ನಿರೀಕ್ಷೆಯಲ್ಲಿದ್ದೇವೆ. ಅದರೊಂದಿಗೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸರ್ಕಾರ ತನ್ನ ಬಜೆಟ್‌ನಲ್ಲಿ ಹಣ ನೀಡಬಹುದು.  ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಧಿಯ ಹೆಚ್ಚಳವೂ ಅತ್ಯಗತ್ಯವಾಗಿದೆ. ಇದು ಭಾರತವನ್ನು ಬಹು-ಕ್ರೀಡೆ ಆಡುವ ರಾಷ್ಟ್ರವನ್ನಾಗಿ ಮಾಡುವುದರೊಂದಿಗೆ ಮಾತ್ರವಲ್ಲದೆ ಕ್ರೀಡಾ ಆಂದೋಲನದಲ್ಲಿ ಹೆಚ್ಚುವರಿ ಕಾರ್ಪೊರೇಟ್ ಭಾಗವಹಿಸುವಿಕೆಯನ್ನು ತೊಡಗಿಸಿಕೊಳ್ಳ ಪಿಪಿಪಿ ಮಾದರಿಯ ಮೂಲಕ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಲ್ಟಿಮೇಟ್‌ ಖೋಖೋ ಲೀಗ್‌ ಕಮೀಷನರ್‌ ಹಾಗೂ ಸಿಇಒ ತೆನ್‌ಜಿಂಗ್‌ ನಿಯೋಗಿ ಹೇಳಿದ್ದಾರೆ.

ಒಲಿಂಪಿಕ್ಸ್‌ ಮೇಲೆ ಕಣ್ಣು: ಬೆಂಗ್ಳೂರಿನಲ್ಲಿ ಅಭ್ಯಾಸ ಆರಂಭಿಸಿದ ಪಿ.ವಿ. ಸಿಂಧು

ಕಾರ್ಯತಂತ್ರದ ಹಂಚಿಕೆಗಳು ಮತ್ತು ಹಣವು ಭಾರತವನ್ನು ನಿಜವಾದ ಕ್ರೀಡಾ ರಾಷ್ಟ್ರವಾಗಿ ಪರಿವರ್ತಿಸುವ ಮಾರ್ಗಸೂಚಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರ್ಕಾರದಿಂದ ಉತ್ತಮ ಬೆಂಬಲಿತ ಕ್ರೀಡಾ ಪರಿಸರ ವ್ಯವಸ್ಥೆಯು ಪ್ಯಾರಿಸ್ ಒಲಿಂಪಿಕ್ಸ್‌ನಂತಹ ಟೂರ್ನಿಗಳಲ್ಲಿ ಯಶಸ್ಸಿಗೆ ಕೊಡುಗೆ ನೀಡುವುದು ಮಾತ್ರವಲ್ಲದೆ ಸುಸ್ಥಿರ ಮತ್ತು ಅಭಿವೃದ್ಧಿ ಹೊಂದುತ್ತಿರುವ ಉದ್ಯಮಕ್ಕೆ ಅಡಿಪಾಯವನ್ನು ಹಾಕುತ್ತದೆ ಎಂದು ಹೇಳಿದ್ದಾರೆ.

Union Budget 2024 ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಟೀಮ್‌ನಲ್ಲಿರುವ ಅನುಭವಿ ಮುಖಗಳಿವು!

click me!