ಮತ್ತೆ ಅಬ್ಬರಿಸಿದ ಡಿವಿಲಿಯರ್ಸ್ - ಆರ್‌ಸಿಬಿಗೆ ಐಪಿಎಲ್ ಪ್ರಶಸ್ತಿ ಖಚಿತ!

By Web DeskFirst Published Nov 14, 2018, 5:39 PM IST
Highlights

2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡೋದು ಖಚಿತ. ಕಾರಣ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

ಕೇಪ್‌ಟೌನ್(ನ.14): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮೊದಲ ಟಿ20 ಲೀಗ್ ಪಂದ್ಯವಾಡಿದ 360 ಡಿಗ್ರಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಗೆ ಇನ್ನು 4 ತಿಂಗಳಿರುವಾಗಲೇ ಎಬಿಡಿ ಉತ್ತಮ ಫಾರ್ಮ್ ಸೂಚನೆ ನೀಡಿದ್ದಾರೆ.

ಸೌತ್ಆಫ್ರಿಕಾದ ಮಜಾನ್ಸಿ ಸೂಪರ್ ಲೀಗ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಕೇವಲ 31 ಎಸೆತದಲ್ಲಿ 93 ರನ್ ಸಿಡಿಸಿದ್ದಾರೆ. ಎಬಿಡಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.

ಎಬಿಡಿ ಅಬ್ಬರಿಸುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಕಾರಣ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು 4 ತಿಂಗಳು ಮಾತ್ರ ಬಾಕಿ ಇದೆ. ಅಷ್ಟರಲ್ಲೇ ಎಬಿಡಿ ಅದ್ಭುತ ಫಾರ್ಮ್ ಹಾಗೂ ಫಿಟ್ನೆಸ್ ಹೊಂದಿದ್ದಾರೆ.
 

click me!