ಇರಾನ್‌ ಬಾಕ್ಸಿಂಗ್‌ ಕೂಟ: ಭಾರತಕ್ಕೆ 1 ಚಿನ್ನ, 5 ಬೆಳ್ಳಿ

By Web DeskFirst Published Mar 1, 2019, 9:56 AM IST
Highlights

ಇರಾನ್‌ನಲ್ಲಿ ನಡೆದ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಭಾರತ ಒಟ್ಟು 8 ಪದಕ ಗೆದ್ದಿದೆ. ಇಲ್ಲಿದೆ ಬಾಕ್ಸಿಂಗ್ ಕೂಟದ ವಿವರ. 

ನವದೆಹಲಿ(ಮಾ.01): ಇರಾನ್‌ನ ಚಾಬಹರ್‌ನಲ್ಲಿ ನಡೆದ ಮಕ್ರನ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತ 1 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನೊಂದಿಗೆ 8 ಪದಕ ಜಯಿಸಿದೆ. ಫೈನಲ್‌ ಪ್ರವೇಶಿಸಿದ್ದ 6 ಬಾಕ್ಸರ್‌ಗಳ ಪೈಕಿ ರಾಷ್ಟ್ರೀಯ ಚಾಂಪಿಯನ್‌ ದೀಪಕ್‌ ಸಿಂಗ್‌ (49 ಕೆ.ಜಿ) ಮಾತ್ರ ಚಿನ್ನದ ಪದಕ ಗೆದ್ದರು. 

 

Deepak's Golden Punch!🥊

The 🇮🇳 boxer won the🥇for India, beating Jaafar Naseri in the (46-49kg) light fly category summit clash at in Iran. Kudos man! Way to go.💪👏👏👏 pic.twitter.com/u5VlMsHXNA

— Boxing Federation (@BFI_official)

 

ಉಳಿದಂತೆ ಲಲಿತಾ ಪ್ರಸಾದ್‌ (52 ಕೆ.ಜಿ), ಮನೀಶ್‌ ಕೌಶಿಕ್‌ (60 ಕೆ.ಜಿ), ದುರ್ಯೋಧನ್‌ ಸಿಂಗ್‌ (69 ಕೆ.ಜಿ), ಸಂಜೀತ್‌ (91 ಕೆ.ಜಿ) ಹಾಗೂ ಸತೀಶ್‌ ಕುಮಾರ್‌ (+91 ಕೆ.ಜಿ) ಬೆಳ್ಳಿ ಪದಕ ಜಯಿಸಿದರು. ರೋಹಿತ್‌ ಟೋಕಾಸ್‌ (64 ಕೆ.ಜಿ) ಹಾಗೂ ಮಂಜೀತ್‌ ಸಿಂಗ್‌ ಪಂಗಲ್‌ (75 ಕೆ.ಜಿ) ಸೆಮೀಸ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟರು.

click me!