ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಧರೆಗುರುಳಿಸಲಿದೆ ನಾಸಾ, 100 ಕೋಟಿಯ ಪ್ಲ್ಯಾನ್‌ ರೆಡಿ!

By Santosh Naik  |  First Published Sep 27, 2023, 6:13 PM IST

ಭೂಮಿಯ ಹೊರಗಡೆ, ಭೂಮಿಯದ್ದು ಎನ್ನುವಂಥ ನಿಲ್ದಾಣವಾಗಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಧರೆಗುರುಳಿಸಲು ನಾಸಾ ಪ್ಲ್ಯಾನ್‌ ರೆಡಿ ಮಾಡಿದೆ. ಇದಕ್ಕಾಗಿ 100 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿದೆ. 2030ರ ವೇಳೆ ಈ ನಿಲ್ದಾಣ ಬಾಹ್ಯಾಕಾಶದಿಂದ ಭೂಮಿಗೆ ಬೀಳಲಿದೆ.
 


ವಾಷಿಂಗ್ಟನ್‌ (ಸೆ.27): ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ದಶಕದ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್) ತನ್ನ ಕಕ್ಷೆಯಿಂದ ತೆಗೆದು ಭೂಮಿಗೆ ಅಪ್ಪಳಿಸುವ ಯೋಜನೆಯನ್ನು ರೂಪಿಸುತ್ತದೆ. ಅದರೊಂದಿಗೆ ಹಲವು ದಶಕಗಳ ಕಾಲ ಬಾಹ್ಯಾಕಾಶದಲ್ಲಿದ್ದು ಭೂಮಿ ಹಾಗೂ ಬಾಹ್ಯಾಕಾಶದ ಅಧ್ಯಯನ ಮಾಡಿದ ಐಎಸ್‌ಎಸ್‌ ಅಂದರೆ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ನ ಯುಗಾಂತ್ಯವಾಗಲಿದೆ.  ಈ ದಶಕದ ಅಂತ್ಯದ ವೇಳೆಗೆ ಇದು ನಡೆಯಲಿದ್ದು, 2026ರಿಂದ ಐಎಸ್‌ಎಸ್‌ಅನ್ನು ಭೂಮಿಗೆ ಇಳಿಸುವ ಕೆಲಸ ನಡೆಯಲಿದೆ ಎಂದು ನಾಸಾ ತಿಳಿಸಿದೆ. ಐಎಸ್‌ಎಸ್‌ ಈಗಾಗಲೇ ತನ್ನ ಜೀವಿತಾವಧಿಯ ಅಂತ್ಯವನ್ನು ತಲುಪಿದೆ ಮತ್ತು ಭವಿಷ್ಯದ ಅನ್ವೇಷಣೆಗೆ ಹೆಚ್ಚು ಸುಧಾರಿತ ಬಾಹ್ಯಾಕಾಶ ನಿಲ್ದಾಣದ ಅಗತ್ಯವಿದೆ ಎಂದು ವಿಜ್ಞಾನಿಗಳು ನಂಬಿರುವ ಕಾರಣ, ಈ ಬಾಹ್ಯಾಕಾಶ ನಿಲ್ದಾಣವನ್ನು ಸೇವೆಯಿಂದ ತೆಗೆದುಹಾಕಲಾಗುತ್ತಿದೆ. ಇದಕ್ಕಾಗಿ ಯುಎಸ್ ಡಿಯೋರ್ಬಿಟ್ ವೆಹಿಕಲ್ (ಯುಎಸ್‌ಡಿವಿ) ಅಭಿವೃದ್ಧಿಗೆ ನಾಸಾ ಪ್ರಸ್ತಾವನೆಯನ್ನು ನೀಡಿದೆ. ಇದು ಐಎಸ್‌ಎಸ್‌ ಅನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸಲು ವಿನ್ಯಾಸಗೊಳಿಸಿದ ಬಾಹ್ಯಾಕಾಶ ನೌಕೆಯಾಗಿದೆ. ಯುಎಸ್‌ಡಿವಿ ಐಎಸ್‌ಎಸ್‌ನ ಸುರಕ್ಷಿತ ಮತ್ತು ನಿಯಂತ್ರಿತ ಡಿಕಮಿಷನಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರದ ಪ್ರಮುಖ ಅಂಶವಾಗಿರಲು ಯೋಜಿಸಲಾಗಿದೆ. 2000 ಇಸವಿಯ ನವೆಂಬರ್‌ನಿಂದ ವಿವಿಧ ದೇಶಗಳ ಗಗನಯಾತ್ರಿಗಳು ಈ ನಿಲ್ದಾಣದಲ್ಲಿ ಕೆಲಸ ಮಾಡಿದ್ದರು.

ಐದು ದೇಶಗಳ ಸೇರಿ ನಿರ್ಮಿಸಿದ್ದ ಐಎಸ್‌ಎಸ್‌: ಐಎಸ್ಎಸ್ ಅನ್ನು ನಾಸಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ, ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ, ಕೆನಡಾದ ಬಾಹ್ಯಾಕಾಶ ಸಂಸ್ಥೆ ಮತ್ತು ರಷ್ಯಾದ ರೋಸ್ಕೋಸ್ಮಾಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದವು. ಇದು 1998 ರಿಂದ ನಿರಂತರ ಕಾರ್ಯಾಚರಣೆಯಲ್ಲಿದೆ. ಈ ಎಲ್ಲಾ ದೇಶಗಳ 2030ರವರೆಗೆ ಐಎಸ್‌ಎಸ್‌ಅನ್ನು ನಿರ್ವಹಣೆ ಮಾಡಲು ಒಪ್ಪಿಕೊಂಡಿದೆ. ರಷ್ಯಾ 2028ರವರೆಗೆ ಐಎಸ್‌ಎಸ್‌ನಲ್ಲಿ ಕೆಲಸ ಮಾಡುವುದಾಗಿ ಮಾಹಿತಿ ನೀಡಿದೆ. ನಾಸಾ ಪ್ರಕಾರ, ಬಾಹ್ಯಾಕಾಶ ನಿಲ್ದಾಣವು ಭೂಮಿಯಿಂದ ಸುಮಾರು 410 ಕಿಲೋಮೀಟರ್‌ಗಳಷ್ಟು ಕಕ್ಷೆಯಲ್ಲಿ ಸುತ್ತುತ್ತಿದೆ. ಕೆಲವು ವರ್ಷಗಳ ಹಿಂದೆ, ಗಗನಯಾತ್ರಿಗಳ ತಂಡವು ಐಎಸ್‌ಎಸ್‌ನ ಸೌರ ಫಲಕಗಳನ್ನು ನವೀಕರಿಸಲು ಬಾಹ್ಯಾಕಾಶ ನಡಿಗೆಯನ್ನು ಮಾಡಿತ್ತು,

ಬಾಹ್ಯಾಕಾಶದ ಪರಿಶೋಧನೆಗಾಗಿ ನಿರ್ಮಾಣ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಲು ನಿರ್ಮಿಸಲಾಗಿದೆ. ಇದನ್ನು ಭೂಮಿಯ ಅತ್ಯಂತ ಕಡಿಮೆ ಕಕ್ಷೆಯಲ್ಲಿ ನಿಯೋಜಿಸಲಾಗಿದೆ. ಇದರ ಕೆಲಸವನ್ನು 1989ರಿಂದ ಆರಂಭಿಸಲಾಗಿತ್ತು. ಪ್ರಸ್ತುತ ಐಎಸ್‌ಎಸ್‌ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಉಪಗ್ರಹವಾಗಿದೆ. ರಷ್ಯಾದ ಫೆಡರಲ್ ಬಾಹ್ಯಾಕಾಶ ಸಂಸ್ಥೆ (RKA), ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA), ಕೆನಡಾದ ಕೆನಡಿಯನ್ ಬಾಹ್ಯಾಕಾಶ ಸಂಸ್ಥೆ (CSA) ಮತ್ತು ಯುರೋಪಿಯನ್ ರಾಷ್ಟ್ರಗಳ ಜಂಟಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಐಎಸ್‌ಎಸ್‌ನಲ್ಲಿ ಅಮೆರಿಕದ ನಾಸಾದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ.

Latest Videos

undefined

ISS Retirement : 2031ರಲ್ಲಿ ನಿವೃತ್ತಿಯಾಗಲಿದೆ ಬಾಹ್ಯಾಕಾಶ ನಿಲ್ದಾಣ, NASA ಬಿಚ್ಚಿಡ್ತು ನಿವೃತ್ತಿ ಪ್ಲ್ಯಾನ್!

ಐಎಸ್‌ಎಸ್‌ ಭೂಮಿಗೆ ಬಿದ್ದರೆ ಏನಾಗುತ್ತದೆ?: ಐಎಸ್‌ಎಸ್‌ಅನ್ನು ನಿಯಂತ್ರಿತ ರೀತಿಯಲ್ಲಿ ಭೂಮಿಗೆ ಇಳಿಸಲಾಗುತ್ತದೆ. ಯಾವುದೇ ಜನನಿಬಿಡ ಪ್ರದೇಶದಲ್ಲಿ ಇದು ಬೀಳುವುದಿಲ್ಲ. ಐಎಸ್‌ಎಸ್‌ ಬರೋಬ್ಬರಿ 4.20 ಲಕ್ಷ ಕೆಜಿ ತೂಗುತ್ತದೆ. ಇಷ್ಟು ಭಾರೀ ಪ್ರಮಾಣದ ನಿಲ್ದಾಣವನ್ನು ಭೂಮಿಗೆ ಕ್ರ್ಯಾಶ್‌ ಮಾಡುವುದು ಸುಲಭವಿಲ್ಲ. ನಾಸಾ ತನ್ನ ಪ್ರಸ್ತುತ ಕಕ್ಷೆಯಿಂದ ಮೇಲ್ಮೈಯಿಂದ 253 ಮೈಲುಗಳಷ್ಟು ನಿಧಾನವಾಗಿ ಕೆಳಕ್ಕೆ ಇಳಿಸುವ ಮೂಲಕ ಇದನ್ನು ಮಾಡುತ್ತದೆ, ಇದರಿಂದಾಗಿ ಅದು ಜನವರಿ 2031 ರಲ್ಲಿ ವಾತಾವರಣವನ್ನು ಪ್ರವೇಶಿಸಬಹುದು. ಮುಖ್ಯವಾಗಿ ISS ಸಾಗರಕ್ಕೆ ಬೀಳಲು ಯೋಜಿಸಲಾಗಿದೆ. ಇದರಿಂದ ಭೂಮಿಗೆ ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ. ISS ನ ಸುರಕ್ಷಿತ ಡಿಆರ್ಬಿಟ್ ಎಲ್ಲಾ ಐದು ಬಾಹ್ಯಾಕಾಶ ಏಜೆನ್ಸಿಗಳ ಹಂಚಿಕೆಯ ಜವಾಬ್ದಾರಿಯಾಗಿದೆ.

International Space Station: ರಣರಂಗದಲ್ಲಿ ಮುಖಾಮುಖಿ, ಬಾಹ್ಯಾಕಾಶದಲ್ಲಿ ಫ್ರೆಂಡ್‌ಶಿಪ್ಪು!

click me!