ಚಂದ್ರನಲ್ಲಿ ಮತ್ತೆ ಸೂರ್ಯೋದಯ: ಇಂದು ವಿಕ್ರಂ ಪ್ರಜ್ಞಾನ್‌ರನ್ನು ನಿದ್ದೆಯಿಂದ ಏಳಿಸಲಿದೆ ಇಸ್ರೋ...

By Kannadaprabha News  |  First Published Sep 22, 2023, 7:45 AM IST

ಚಂದ್ರಯಾನ 3 ಉಡ್ಡಯನದ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಇಂದು ಇಸ್ರೋ ಕೈಗೊಳ್ಳಲಿದೆ.


ಬೆಂಗಳೂರು: ಚಂದ್ರಯಾನ 3 ಉಡ್ಡಯನದ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಇಂದು ಇಸ್ರೋ ಕೈಗೊಳ್ಳಲಿದೆ. ಒಂದು ವೇಳೆ ಇದರಲ್ಲಿ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ.

ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದ್ದು, ಇಂದು ಅಲ್ಲಿ ಸೂರ್ಯೋದಯವಾಗಲಿದೆ. ಇಂದು ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು (Pragyan rover) ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಇದು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆಯಾಗಲಿದೆ. ಅಲ್ಲದೇ ಚಂದ್ರನ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಇದು ನೆರವು ನೀಡಲಿದೆ. ಚಂದ್ರನ ಮೇಲೆ 1 ಹಗಲಿನಲ್ಲಿ (ಭೂಮಿಯ 14 ದಿನ) ಕೆಲಸ ಮಾಡಲು ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಇವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕಾರಣ 2 ದಿನ ಮೊದಲೇ ಇವುಗಳನ್ನು ಸ್ಲೀಪ್‌ ಮೋಡ್‌ಗೆ ಹಾಕಲಾಗಿತ್ತು.

Tap to resize

Latest Videos

undefined

ಚಂದ್ರನ ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯೋದಯ, ನಿದ್ರೆಯಿಂದ ಏಳ್ತಾರಾ ವಿಕ್ರಮ್‌, ಪ್ರಗ್ಯಾನ್‌?

ಚಂದ್ರನಲ್ಲಿ ಸೂರ್ಯನ ಬೆಳಕು ಇಲ್ಲದ ಸಮಯದಲ್ಲಿ ಉಷ್ಣಾಂಶ ಮೈನಸ್‌ 240 ಡಿಗ್ರಿವರೆಗೂ ತಲುಪುತ್ತದೆ. ಹಾಗಾಗಿ ಈ ಉಷ್ಣಾಂಶದಲ್ಲಿ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳು ಉಳಿಯುವುದು ಸಾಹಸವೇ ಆಗಿದೆ. ಹಾಗಾಗಿ ಇಸ್ರೋದ ಈ ಪ್ರಯೋಗದ ಮೇಲೆ ಎಲ್ಲಾ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಕಣ್ಣಿಟ್ಟಿವೆ.

ಚಂದ್ರನ ಮೇಲೆ ನೀರು ಸಾಧ್ಯವಿದೆ, ಚಂದ್ರಯಾನ-1 ಡೇಟಾದಿಂದ ಸಿಕ್ಕಿತು ಮಹತ್ವದ ಮಾಹಿತಿ!

click me!