ಚಂದ್ರನ ಅಧ್ಯಯನಕ್ಕಾಗಿ ಜಪಾನ್ ಗುರುವಾರ ನೌಕೆಯೊಂದನ್ನು ಉಡ್ಡಯನ ಮಾಡಿದೆ. ಈ ನೌಕೆ ಅತಿ ಚಿಕ್ಕ ಗಾತ್ರದ ಲ್ಯಾಂಡರನ್ನು ಹೊಂದಿದ್ದು, ಇದು 4 ತಿಂಗಳ ಬಳಿಕ ಚಂದ್ರನ ಮೇಲ್ಮೈನಲ್ಲಿ ಇಳಿಯಲಿದೆ
ಟೋಕಿಯೋ: ಚಂದ್ರನ ಅಧ್ಯಯನಕ್ಕಾಗಿ ಜಪಾನ್ ಗುರುವಾರ ನೌಕೆಯೊಂದನ್ನು ಉಡ್ಡಯನ ಮಾಡಿದೆ. ಈ ನೌಕೆ ಅತಿ ಚಿಕ್ಕ ಗಾತ್ರದ ಲ್ಯಾಂಡರನ್ನು ಹೊಂದಿದ್ದು, ಇದು 4 ತಿಂಗಳ ಬಳಿಕ ಚಂದ್ರನ ಮೇಲ್ಮೈನಲ್ಲಿ ಇಳಿಯಲಿದೆ. ಸಾಫ್ಟ್ ಲ್ಯಾಂಡಿಂಗ್ ಮಾಡಿದರೆ ಚಂದ್ರನ ಮೇಲಿಳಿದ 5ನೇ ದೇಶ ಎಂಬ ಖ್ಯಾತಿಗೆ ಜಪಾನ್ ಪಾತ್ರವಾಗಲಿದೆ. ಜಪಾನ್ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ ನಿರ್ಮಾಣ ಮಾಡಿರುವ ಎಚ್‌ಐಐ-ಎ ರಾಕೆಟ್ ಈ ನೌಕೆಯನ್ನು ಹೊತ್ತು ಗುರುವಾರ ಮುಂಜಾನೆ 5.12ಕ್ಕೆ ತಾನೆಗಾಶಿಮಾ ಸ್ಪೇಸ್ ಸೆಂಟರ್‌ನಿಂದ ಉಡಾವಣೆಗೊಂಡಿತ್ತು.
ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (Space center) ಸಹಕಾರವನ್ನು ಹೊಂದಿರುವ ಈ ಯೋಜನೆ ಎಕ್ಸ್ ರೇ ಮಿಶನ್ (X ray Mission)ಹಾಗೂ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಇದಕ್ಕೆ ಮೂನ್ ಸ್ನೈಪರ್ (Moon Sniper) ಎಂದು ಹೆಸರಿಡಲಾಗಿದ್ದು, ಅತಿ ಚಿಕ್ಕ ಲ್ಯಾಂಡರನ್ನು ಚಂದ್ರನ ಮೇಲಿಳಿಸುವ ಮೂಲಕ ದಾಖಲೆಗೆ ಜಪಾನ್ ಮುಂದಾಗಿದೆ. ಜಪಾನ್‌ನ ಈ ಸಾಧನೆಗೆ ಇಸ್ರೋ ಅಭಿನಂದನೆ ಸಲ್ಲಿಸಿದ್ದು, ಜಾಗತಿಕವಾಗಿ ಮತ್ತೊಂದು ಚಂದ್ರನ ಅಧ್ಯಯನ ಸಫಲತೆಗೆ ಅಭಿನಂದನೆಗಳು ಎಂದು ಹೇಳಿದೆ.
undefined
News Hour: ಹೀಯಾಳಿಸಿದವರೇ ಎದುರೇ ಹೆಮ್ಮರವಾಗಿ ಬೆಳೆದು ನಿಂತ ಭಾರತದ ಇಸ್ರೋ!
ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಭಾರತ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿ ಅಧ್ಯಯನ ಶುರು ಮಾಡಿದೆ. ಆಗಸ್ಟ್ 23 ರಂದು ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿತ್ತು. ಈ ಮೂಲಕ ಚಂದ್ರನ ಮೇಲೆ ಕಾಲಿಟ್ಟ 4ನೇ ದೇಶ ಹಾಗೂ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಜಪಾನ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಪ್ರಯತ್ನಿಸಿ. ಉಡಾವಣೆಗೂ 30 ನಿಮಿಷ ಮೊದಲು ಜಪಾನ್ ತನ್ನ ಉಡಾವಣೆಯನ್ನು ರದ್ದುಗೊಳಿಸಿತ್ತು.
ಆ.28 ಬೆಳಿಗ್ಗೆ 5.25ರ (ಭಾರತೀಯ ಕಾಲಮಾನ)ವೇಳೆ ಜಪಾನ್ ಚಂದ್ರಯಾನ್ ಮಿಷನ್ ಉಡಾವಣೆ ಮಾಡಲು ನಿರ್ಧರಿಸಿತ್ತು. ಚಂದ್ರನ ಮೇಲೆ ಲ್ಯಾಂಡ್ ಇಳಿಸುವ ಈ ಯೋಜನೆಗೆ ಜಪಾನ್ ಮೂನ್ ಸ್ನೈಪರ್ ಎಂದು ಹೆಸರಿಟ್ಟಿತ್ತು. ಈ ಯೋಜನೆ ಎಕ್ಸ್ ರೇ ಮಿಶನ್ ಹಾಗೂ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಕ್ರಿಯೆಗಳನ್ನು ಒಳಗೊಂಡಿತ್ತು.ಆದರೆ ಜಪಾನ್ ಯೋಜನೆ ಎಲ್ಲವೂ ಬುಡಮೇಲಾಗಿದೆ. ಪ್ರತಿಕೂಲ ಹವಾಮಾನ, ತೀವ್ರ ಗಾಳಿ ಹಾಗೂ ಪ್ರಕ್ಷುಬ್ದ ವಾತಾವರಣ ಕಾರಣದಿಂದ ಜಪಾನ್ ಉಡಾವಣೆ ರದ್ದು ಮಾಡಿದೆ.
Healthy Food : ಜಪಾನೀಯರು 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಇದೇ ಕಾರಣ
ಜಪಾನ್ ಬಾಹ್ಯಕಾಶ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಮೂನ್ ಸ್ನೈಪರ್ ಚಂದ್ರನ ಮೇಲೆ ತಲುಪಲು ಬರೋಬ್ಬರಿ 4 ರಿಂದ 6 ತಿಂಗಳು ಬೇಕು. ಈ ಯೋಜನೆ ಅಂಗೈ ಅಗಲದ ರೋವರ್ ಮಾತ್ರ ಹೊಂದಿದ್ದು, ಇದು ಚಂದ್ರನ ಮೇಲಿರುವ ವಸ್ತುಗಳನ್ನು ಅಧ್ಯಯನ ಮಾಡುವ ಚಂದ್ರನ ಉಗಮವನ್ನು ಪತ್ತೆ ಮಾಡಲಿದೆ ಎಂದು ಸಂಸ್ಥೆ ಹೇಳಿದೆ. ಈ ಮೊದಲು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಈ ಯೋಜನೆಯನ್ನು ಜಪಾನ್ ಮುಂದೂಡಿತ್ತು. ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು 2022ರಲ್ಲೂ ಜಪಾನ್ ಪ್ರಯತ್ನ ಮಾಡಿ ವಿಫಲವಾಗಿತ್ತು.
ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನದಿಂದ ನಾವು ಹಿಂದೆ ಸರಿಯಲ್ಲ. ಪ್ರತಿಕೂಲ ಹವಾಮಾನ ಕಾರಣದಿಂದ ಉಡಾವಣೆಗೆ 30 ನಿಮಿಷ ಮೊದಲು ರದ್ದು ಮಾಡಲಾಗಿದೆ. ಮುಂದಿನ ಉಡಾವಣೆ ದಿನಾಂಕ ಶೀಘ್ರದಲ್ಲೇ ಘೋಷಿಸಲಾಗುತ್ತದೆ. ಇಂಧನ ತುಂಬಿಸುವುದು, ಸೇರಿದಂತೆ ಇತರ ಕೆಲಸಗಳು ನಡೆಯುತ್ತಿದೆ. ಸೆಪ್ಟೆಂಬರ್ 15ರ ವೇಳೆಗೆ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಜಪಾನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಆದರೆ ಆ ದಿನಾಂಕಕ್ಕೂ ಮೊದಲೇ ಈಗ ಚಂದ್ರಯಾನ ನೌಕೆ ಉಡಾವಣೆ ಮಾಡಲಾಗಿದ್ದು, 4 ತಿಂಗಳ ನಂತರ ಅದು ಚಂದ್ರನ ಕಕ್ಷೆ ಸೇರಲಿದೆ.