
ಶ್ರೀಹರಿಕೋಟಾ (ಫೆ.17): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಭಾರತದ ನೂತನ ಹವಾಮಾನ ಉಪಗ್ರಹವಾದ ಇನ್ಸಾಟ್-3ಡಿಎಸ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಉಡಾವಣೆ ಮಾಡಿದೆ. ಹವಾಮಾನ ಬದಲಾವಣೆಯು ಭೂಮಂಡಲದ ಮೇಲೆ ಹಾನಿಯನ್ನುಂಟುಮಾಡುತ್ತಿರುವ ಸಮಯದಲ್ಲಿ ಭಾರತಕ್ಕೆ ಹವಾಮಾನ ಮುನ್ಸೂಚನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಇನ್ಸಾಟ್ 3ಡಿಎಸ್‌ಗೂ ಮುನ್ನ ಇದೇ ಮಾದರಿಯ ಇನ್ಸಾಟ್ 3ಡಿ ಮತ್ತು ಇನ್ಸಾಟ್ 3ಡಿಆರ್ ಯಶಸ್ವಿ ನಿಯೋಜನೆಯನ್ನು ಅನುಸರಿಸಲಾಗುತ್ತದೆ. ಈಗಾಗಲೇ ಮೊದಲ ಎರಡು ಉಪಗ್ರಹಗಳು ದೇಶದ ಹವಾಮಾನ ವೀಕ್ಷಣೆ ಮತ್ತು ವಿಶ್ಲೇಷಣೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಮಾತ್ರ ವಹಿಸಿದೆ. ಇನ್ಸಾಟ್ 3ಡಿಆರ್ 2016ರ ಸೆಪ್ಟೆಂಬರ್‌ನಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. INSAT-3DS ವಾಯುಮಂಡಲದ ಪರಿಸ್ಥಿತಿಗಳ ಬಗ್ಗೆ ಹೆಚ್ಚು ನಿಖರವಾದ ಮತ್ತು ಸಮಯೋಚಿತ ಡೇಟಾವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಪೇಲೋಡ್‌ಗಳನ್ನು ಹೊಂದಿದೆ.
ಹವಾಮಾನ ಸೇವೆಗಳನ್ನು ಇನ್ನಷ್ಟು ಬಲಿಷ್ಠ ಮಾಡುವ ನಿಟ್ಟಿನಲ್ಲಿ ಹಾಗೂ ಹವಾಮಾನ ಸಂಬಂಧಿತ ಸವಾಲುಗಳು ದೇಶದ ಸಿದ್ದತೆಗಳು ಅಗ್ರಪಂಕ್ತಿಯಲ್ಲಿರಬೇಕು ಎನ್ನುವ ಹಾದಿಯಲ್ಲಿ ಹೊಸ ತಲೆಮಾರಿನ ಉಪಗ್ರಹ ಉಡಾವಣೆ ಮಾಡಲಾಗಿದೆ. ಈ ಉಪಗ್ರಹ ಕಥಷಿ, ವಾಯುಯಾನ ಮತ್ತು ವಿಪತ್ತು ನಿರ್ವಹಣೆ ಸೇರಿದದಂತೆ ಹಲವು ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಪ್ರಯೋಜನವನ್ನು ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಜಿಎಸ್ಎಲ್‌ವಿ-ಎಂಕೆಐಐ ರಾಕೆಟ್ ಬಳಸಿ ಯಶಸ್ವಿ ಉಡಾವಣೆ ಮಾಡಲಾಗಿದೆ. ಇದು ಭೂಸ್ಥಿರ ವರ್ಗಾವಣೆ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಯೋಜಿಸಿ, ಭೂಸ್ಥಿರ ಕಕ್ಷೆಗೆ ಉಪಗ್ರಹವನ್ನು ಏರಿಸಲಿದೆ.
17 ವರ್ಷಗಳ ಬಳಿಕ ಕಾರ್ಟೋಸ್ಯಾಟ್ ಉಪಗ್ರಹ ಭೂಮಿಯ ವಾತವರಣಕ್ಕೆ ತರುವಲ್ಲಿ ಇಸ್ರೋ ಯಶಸ್ವಿ!
ಉಪಗ್ರಹದ ಪ್ರಾಥಮಿಕ ಉದ್ದೇಶಗಳು ಬಹುಮುಖಿ ಮತ್ತು ಪರಿಸರದ ಮೇಲ್ವಿಚಾರಣೆ ಮತ್ತು ಸುರಕ್ಷತೆಗೆ ನಿರ್ಣಾಯಕವಾಗಿವೆ. ಇದು ಭೂಮಿಯ ಮೇಲ್ಮೈಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಹವಾಮಾನ ವಿಶ್ಲೇಷಣೆಗೆ ಪ್ರಮುಖವಾದ ವಿವಿಧ ಹಂತದ ಚಾನಲ್‌ಗಳಲ್ಲಿ ಸಾಗರ ವೀಕ್ಷಣೆಗಳನ್ನು ಕೈಗೊಳ್ಳಲು ಸಜ್ಜುಗೊಂಡಿದೆ.
ವೈಫಲ್ಯ ಭೀತಿಯೇ ಯಶಸ್ಸಿಗೆ ಕಾರಣ: ಇಸ್ರೋ ಅಧ್ಯಕ್ಷ ಸೋಮನಾಥ್ ಮುಕ್ತ ಮಾತು
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.