ಇಸ್ರೋ SpaDeX ಉಡಾವಣೆ ಯಶಸ್ವಿ,ಸ್ವದೇಶಿ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಮಹತ್ವದ ಹೆಜ್ಜೆ!

By Chethan Kumar  |  First Published Dec 30, 2024, 10:01 PM IST

ಚಂದ್ರಯಾನ 3 ಸೇರಿದಂತೆ ಹಲವು ಮಹತ್ವದ ಮೈಲಿಗಲ್ಲು ನಿರ್ಮಿಸಿರುವ ಇಸ್ರೋ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ನೌಕೆಗಳ ಡಾಕಿಂಗ್ ಮಾಡುವ ಪ್ರಯೋಗದಲ್ಲಿ ಆರಂಭಿಕ ಯಶಸ್ಸು ಕಂಡಿದೆ. ಇಸ್ರೋ SpaDeX ಉಡಾವಣೆ ಯಶಸ್ವಿಯಾಗಿದೆ.
 


ಶ್ರೀಹರಿಕೋಟಾ(ಡಿ.30) ಜಗತ್ತಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಪೈಕಿ ಭಾರತದ ಇಸ್ರೋ ತನ್ನದೇಯಾದ ಹೆಗ್ಗುರುತು ಹೊಂದಿದೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರಯಾನ3 ಸೇರಿದಂತೆ ಹಲವು ಯಶಸ್ವಿ ಯೋಜನೆಗಳನ್ನು ಇಸ್ರೋ ಸಾಧಿಸಿದೆ. ಇದೀಗ ಇಸ್ರೋ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. PSLV-ಸಿ60 ರಾಕೆಟ್ ಮೂಲಕ ಸ್ಪೇಸ್ ಡಾಕಿಂಗ್(SpaDeX) ಪ್ರಯೋಗ ಉಡಾವಣೆ ಯಶಸ್ವಿಯಾಗಿ ಮಾಡಿದೆ. ರಾತ್ರಿ ಗಂಟೆಗೆ ಸರಿಯಾಗಿ PSLV-ಸಿ60 ರಾಕೆಟ್ ನಭೋಮಂಡಲಕ್ಕೆ ಚಿಮ್ಮಿತ್ತು. ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಡಾಕಿಂಗ್ ಮಾಡುವ ಈ ಯೋಜನೆ ಇಸ್ರೋ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಈ ಮೂಲಕ  ಸ್ಪೇಸ್‌ ಡಾಕಿಂಗ್‌ ತಂತ್ರಜ್ಞಾನ ಹೊಂದಿದೆ ಜಗತ್ತಿನ ನಾಲ್ಕನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತಕ್ಕೂ ಮೊದಲು ಅಮೇರಿಕ, ಚೀನಾ, ರಷ್ಯಾ ಈ ತಂತ್ರಜ್ಞಾನ ಬಳಸಿಕೊಂಡಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹಿಡಿತದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೀತಿಯಲ್ಲೇ ಇದೀಗ ಇಸ್ರೋ ತನ್ನ ಸ್ವದೇಶಿ ಭಾರತೀಯ ಅಂತರಿಕ್ಷ ನಿಲ್ದಾಣದ ಯೋಜನೆ ಹಾಕಿಕೊಂಡಿದೆ. ಈ ಕೇಂದ್ರ ಸ್ಥಾಪಿಸಲು ಸ್ಪೇಸ್ ಡಾಕಿಂಗ್ ಅತ್ಯವಶ್ಯಕವಾಗಿದೆ. ಬಾಹ್ಯಾಕಾಶದಲ್ಲಿ ಭಾರತದ ಇಸ್ರೋ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಬಾಹ್ಯಾಕಾಶ ಕೇಂದ್ರಕ್ಕೆ   ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ಸಾಮರ್ಥ್ಯ ಹಾಗೂ ಪರಿಣಿತಿ ಹೊಂದಿರಬೇಕು. ಇಷ್ಟೇ ಅಲ್ಲ ಮುಂದಿನ ಇಸ್ರೋದ ಪ್ರಮುಖ ಯೋಜನೆಗಳಾದ ಮಾನವರಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರ ರವಾನೆ ಸೇರಿದಂತೆ ಹಲವು ಯೋಜನೆಗಳಿಗೆ ಸ್ಪೇಸ್ ಡಾಕಿಂಗ್ ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಸ್ರೋದ ಮೊದಲ ಪ್ರಯೋಗ ಯಶಸ್ವಿಯಾಗಿ ಉಡಾವಣಯಾಗಿದೆ. 
 
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ  PSLV-ಸಿ60 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಜನವರಿ ತಿಂಗಳಲ್ಲೇ ಅಂದರೆ ಇನ್ನು ಕೆಲವೇ ದಿನಗಳಲ್ಲಿ ಸ್ಪೇಸ್ ಡಾಕಿಂಗ್ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. 

Tap to resize

Latest Videos

ಅಂತಿಮ ಹಂತದಲ್ಲಿ ಸಮಯ ಬದಲಾವಣೆ
ಇಸ್ರೋ ಐತಿಹಾಸಿಕ ಸಾಧನೆಯ  PSLV-ಸಿ60 ರಾಕೆಟ್ ಉಡಾವಣೆಯನ್ನು ರಾತ್ರಿ 9.58ಕ್ಕೆ ನಿಗಧಿಪಡಿಸಲಾಗಿತ್ತು. ಆದರೆ ಈ ಸಮಯ ಬದಲಾವಣೆ ಮಾಡಲಾಗಿತ್ತು. 9.58ರ ಬದಲು ರಾತ್ರಿ 10 ಗಂಟೆಗೆ ಬದಲಾವಣೆ ಮಾಡಲಾಗಿತ್ತು. 

ಬಾಹ್ಯಾಕಾಶದಲ್ಲಿ ಸಸಿಗಳು ಚಿಗುರುವ ಬಗ್ಗೆಯೂ ಈ ಉಡ್ಡಯನದ ವೇಳೆ ಸಂಶೋಧನೆ ನಡೆಸಲಾಗುವುದು. ವಿಕ್ರಂ ಸಾರಾಬಾಯ್‌ ಬಾಹ್ಯಾಕಾಶ ಕೇಂದ್ರವು ಕ್ರಾಪ್ಸ್‌ ಹೆಸರಿನ ಯೋಜನೆಯಡಿ ಆಗಸದಲ್ಲೇ ಉಳಿಯಲಿರುವ ಕಡೆಯ ಹಂತದ ರಾಕೆಟ್‌ನಲ್ಲಿ ಸಸಿಗಳ ಬೆಳವಣಿಗೆ ಕುರಿತ ಪ್ರಯೋಗವನ್ನೂ ನಡೆಸಲಿದೆ. ಯೋಜನೆಯ ಭಾಗವಾಗಿ ಮುಚ್ಚಿದ ಬಾಕ್ಸ್‌ ಒಂದರಲ್ಲಿ ಹಲಸಂದೆ ಬೀಜಗಳನ್ನು ಇಡಲಾಗಿದ್ದು ಅದು ಮೊಳಕೆಯೊಡೆದು, 2 ಎಲೆಗಳಾಗಿ ಅರಳುವ ತನಕದ ಮಾಹಿತಿ ಸಂಗ್ರಹಿಸಿ ಸಂಶೋಧನೆಗೆ ಒಳಪಡಿಸಲಿಎ. ಜೊತೆಗೆ ಅಂತೆಯೇ, ಪೋಮ್-4 ಮಿಷನ್‌ನ ಅಡಿಯಲ್ಲಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ತ್ಯಾಜ್ಯವನ್ನು ಸಂಗ್ರಹಿಸುವ ರೋಬೋಟ್‌ ಹಾಗೂ ನೌಕೆಗಳಿಗೆ ಇಂಧನ ತುಂಬುವ ಪರೀಕ್ಷೆ ನಡೆಸಲಾಗುವುದು.


 

click me!