Moon Mission: ಭಾರತವಾಯ್ತು ಈಗ ಜಪಾನ್‌ನ ಸರದಿ, ಆ.26ಕ್ಕೆ 'ಸ್ಲಿಮ್‌' ಉಡಾವಣೆ ಮಾಡಲಿರುವ ಜಾಕ್ಸಾ!

By Santosh Naik  |  First Published Aug 24, 2023, 5:01 PM IST


ಜಪಾನ್‌ನ ಜಾಕ್ಸಾದ ಮೂನ್‌ ಮಿಷನ್‌ನ ಮೂಲ ಉದ್ದೇಶ, ಅತ್ಯಂತ ಪಕ್ವವಾದ ಲ್ಯಾಂಡಿಂಗ್‌ ತಂತ್ರಜ್ಞಾನವನ್ನು ಅರಿಯುವುದಾಗಿದೆ. ಚಂದ್ರನ ಮೇಲೆ ಲ್ಯಾಂಡ್‌ ಮಾಡಬೇಕಾದಲ್ಲಿ ಯಾವ ರೀತಿಯಲ್ಲಿ ಇಳಿಯಬೇಕು ಎನ್ನುವುದೇ ಮಿಷನ್‌ನ ಉದ್ದೇಶವಾಗಿದೆ.


ನವದೆಹಲಿ (ಆ.24): ಭಾರತದ ಚಂದ್ರಯಾನ-3 ಯಶಸ್ಸು ವಿಶ್ವಕ್ಕೆ ಚಂದ್ರನ ಮೇಲೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಭಾರತದ ಯಶಸ್ಸಿನ ಬೆನ್ನಲ್ಲಿಯೇ ಜಪಾನ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಪಾನೀಸ್‌ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್‌ ಏಜೆನ್ಸ್‌ ಅಂದರೆ ಜಾಕ್ಸಾ ತನ್ನ ಮೂನ್‌ ಮಿಷನ್‌ ಅನ್ನು ಚಂದ್ರನಲ್ಲಿಗೆ ಕಳಿಸಲು ಸಜ್ಜಾಗಿದೆ. ಭಾರತ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ಮೂರು ದಿನಗಳ ಬಳಿಕ ಜಪಾನ್‌ ತನ್ನ ಚಂದ್ರ ಯೋಜನೆ ಉಡಾವಣೆ ಮಾಡಲಿದೆ. ಚಂದ್ರನ ಪರಿಶೋಧನೆ ಮಾಡುವ ಸಲುವಾಗಿ ಸ್ಮಾರ್ಟ್‌ ಲ್ಯಾಂಡರ್‌ ಫಾರ್‌ ಇನ್ವೆಸ್ಟಿಗೇಟಿಂಗ್‌ ಮೂನ್‌ ಅಥವಾ ಸ್ಲಿಮ್‌ಅನ್ನು ಚಂದ್ರನ ನೆಲಕ್ಕೆ ಕಳುಹಿಸಿಕೊಡಲಿದೆ. ಆಗಸ್ಟ್‌ 26 ರಂದು ಭಾರತೀಯ ಕಾಲಮಾನ ಬೆಳಗ್ಗೆ 6.04 ನಿಮಿಷಕ್ಕೆ ಟಾನೆಗಶಿಮಾ ಸ್ಪೇಸ್‌ ಸೆಂಟರ್‌ನಿಂದ ಎಚ್‌2ಎ 202 ರಾಕೆಟ್‌ನಿಂದ ಉಡಾವಣೆ ಮಾಡಲಾಗುತ್ತದೆ. ಚಂದ್ರನ ಕಕ್ಷೆಯಲ್ಲಿ ಇದು 2-3 ವಾರ ಇರಲಿದ್ದು, ಚಂದ್ರನ ನೆಲದ ಮೇಲೆ ಕೆಲ ದಿನಗಳನ್ನು ಕಳೆಯುವ ಪ್ಲ್ಯಾನ್‌ ಮಾಡಲಾಗಿದೆ. ಈ ಮಿಷನ್‌ನ ಮೂಲ ಉದ್ದೇಶ ಚಂದ್ರನ ಮೇಲೆ ಅತ್ಯಂತ ಪಕ್ವವಾದ ಲ್ಯಾಂಡಿಂಗ್‌ ತಂತ್ರಜ್ಞಾನ ಅರಿಯುವುದಾಗಿದೆ.

ಉಡಾವಣೆ ಮಾಡುವ ವೇಳೆ ಸ್ಲಿಮ್‌ ಒಟ್ಟು 590 ಕೆಜಿ ಭಾರವಿರಲಿದ್ದು, ಚಂದ್ರನ ಮೇಲೆ ಸ್ಪರ್ಶ ಮಾಡಿದ ಬಳಿಕ ಇದರ ಭಾರತ 210ಕೆಜಿ ಆಗಿರಲಿದೆ. ಲೂನಾರ್‌-ಎ ನೇರವಾಗಿ ಚಂದ್ರನ ಆಳವನ್ನು ಅಧ್ಯಯನ ಮಾಡಲಿದೆ. ಚಂದ್ರನ ಮೂಲ ಹಾಗೂ ಚಂದ್ರ ಬದಲಾದ ರೀತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇದು ನೀಡಲಿದೆ ಎಂದು ಜಾಕ್ಸಾ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ತನ್ನ ಸ್ಲಿಮ್‌ ಲ್ಯಾಂಡರ್‌ 9 ಫೀಟ್‌ ಎತ್ತರ, 8.8 ಫೀಟ್‌ ಅಗಲ ಇರಲಿದೆ. ಸ್ಲಿಮ್‌ ನೌಕೆಯಲ್ಲಿ ಲ್ಯಾಂಡಿಂಗ್‌ ರಾಡಾರ್‌ ಕೂಡ ಇರಲಿದೆ. ಇದು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲು ಸಹಾಯ ಮಾಡಲಿದೆ. ಆಗಬಹುದಾದ ಸಮಸ್ಯೆಗಳನ್ನು ಗುರುತಿಸಲುಹಾಗೂ ನ್ಯಾವಿಗೇಷನ್‌ಗೆ ಸಹಾಯ ಮಾಡಲು ಇಮೇಜ್‌ ಮ್ಯಾಚಿಂಗ್‌ ವ್ಯವಸ್ಥೆಯನ್ನೂ ಹೊಂದಿರಲಿದೆ.

ಎಕ್ಸ್‌ರಿಸಮ್‌ ಎನ್ನುವ ಪೇಲೋಡ್‌ಅನ್ನೂ ನೌಕೆ ಹೊಂದಿದೆ. ಇದು ನಾಸಾ ಮತ್ತು ಜಾಕ್ಸಾದ ಜಂಟಿ ಉಪಕ್ರಮವಾಗಿದೆ. ಎರಡು ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಮಹತ್ವಾಕಾಂಕ್ಷೆಯ ಮಿಷನ್ ಬ್ರಹ್ಮಾಂಡದ ಅತ್ಯಂತ ಬಿಸಿಯಾದ ಪ್ರದೇಶಗಳು, ದೊಡ್ಡ ರಚನೆಗಳು ಮತ್ತು ಬಲವಾದ ಗುರುತ್ವಾಕರ್ಷಣೆಯ ವಸ್ತುಗಳನ್ನು ಅಧ್ಯಯನ ಮಾಡುತ್ತದೆ. ಆದರೆ, ಜಾಕ್ಸಾದ ಸ್ಲಿಮ್‌ ಒಂದು ಸಣ್ಣ ಪರಿಶೋಧಕರಿಂದ ನಿಖರವಾದ ಲ್ಯಾಂಡಿಂಗ್ ತಂತ್ರಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. 

 

Tap to resize

Latest Videos

undefined

Nehru Point in Moon: ಭೂಮಿಯ ಮೇಲೆ ಇಂದಿರಾ ಪಾಯಿಂಟ್‌, ಚಂದ್ರನ ಮೇಲಿದೆ ನೆಹರು ಪಾಯಿಂಟ್‌!

ಗ್ಯಾಲಕ್ಸಿ ಸಮೂಹಗಳಿಂದ ಬಿಡುಗಡೆಯಾದ ಅನಿಲದಿಂದ ಎಕ್ಸ್-ರೇ ಬೆಳಕನ್ನು ಪತ್ತೆಹಚ್ಚಲು ಬಾಹ್ಯಾಕಾಶ ನೌಕೆಗೆ ಸಾಧ್ಯವಾಗುತ್ತದೆ ಮತ್ತು ಈ ವ್ಯವಸ್ಥೆಗಳ ಒಟ್ಟು ದ್ರವ್ಯರಾಶಿಯನ್ನು ಅಳೆಯಲು ಖಗೋಳಶಾಸ್ತ್ರಜ್ಞರಿಗೆ ಸಹಾಯ ಮಾಡುತ್ತದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಪ್ರಕಾರ, ಇದು ಬ್ರಹ್ಮಾಂಡದ ರಚನೆ ಮತ್ತು ವಿಕಾಸದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. XRISM ನ ಗ್ಯಾಲಕ್ಸಿ ಕ್ಲಸ್ಟರ್‌ಗಳ ಅವಲೋಕನಗಳು ಯೂನಿವರ್ಸ್‌ನಿಂದ ರಾಸಾಯನಿಕ ಅಂಶಗಳನ್ನು ಹೇಗೆ ಉತ್ಪಾದಿಸಲಾಗಿದೆ ಮತ್ತು ವಿತರಿಸಲಾಗಿದೆ ಎಂಬುದರ ಕುರಿತು ಒಳನೋಟವನ್ನು ನೀಡುತ್ತದೆ. ಜಪಾನ್‌ನ ಸ್ಲಿಮ್‌ ಬಾಹ್ಯಾಕಾಶ ನೌಕೆಯನ್ನು ಮೂನ್‌ ಸ್ನೈಪರ್‌ ಎಂದೂ ಕರೆಯಲಾಗುತ್ತದೆ. ಇದು ಜಪಾನ್‌ನ ಮೊಟ್ಟಮೊದಲ ಮೂನ್‌ ಮಿಷನ್‌ ಆಗಿದೆ.

Chandrayaan Mission: ಕನಸು ಕಂಡಿದ್ದು ವಾಜಪೇಯಿ, ನೆಹರು ಜನ್ಮದಿನಕ್ಕೆ ಚಂದ್ರನಲ್ಲಿತ್ತು ಇಸ್ರೋ!
 

click me!