ಇಸ್ಲಾಮಿಕ್ ತತ್ವಗಳು ಲಿವ್-ಇನ್ ಸಂಬಂಧಗಳನ್ನು ಅನುಮತಿಸುವುದಿಲ್ಲ. ಅದರಲ್ಲೂ ಸಂಗಾತಿ ಇರುವಾಗ ಮತ್ತೊಬ್ಬರೊಡನೆ ಲಿವ್ ಇನ್ ಸಂಬಂಧದ ಹಕ್ಕು ಕೇಳುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಮುಸ್ಲಿಮರು ಜೀವನಸಂಗಾತಿ ಇರುವಾಗಲೇ ಲಿವ್ ಇನ್ ಸಂಬಂಧಗಳಲ್ಲಿ ಇರುವಂತಿಲ್ಲ. ಇದನ್ನು ಇಸ್ಲಾಮಿಕ್ ತತ್ವಗಳು ಕೂಡಾ ಅನುಮತಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಲಿವ್ ಇನ್ ಸಂಬಂಧದ ಹಕ್ಕಿನ ವಿಷಯವು ಇಬ್ಬರು ವ್ಯಕ್ತಿಗಳು ಅವಿವಾಹಿತರಾಗಿದ್ದಾಗ ವಿಭಿನ್ನ ನಿಲುವು ಪಡೆಯಬಹುದು ಎಂದೂ ಕೋರ್ಟ್ ಸ್ಪಷ್ಟನೆ ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬುಧವಾರ, ಮುಸ್ಲಿಮರು ಪತ್ನಿಯನ್ನು ಹೊಂದಿರುವಾಗ ಮತ್ತು ಅವರು ಬದುಕಿರುವಾಗಲೇ ಲಿವ್-ಇನ್ ಸಂಬಂಧದಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ, ಏಕೆಂದರೆ ಇಸ್ಲಾಂ ಧರ್ಮದ ತತ್ವಗಳ ಅಡಿಯಲ್ಲಿ ಅಂತಹ ಸಂಬಂಧವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಗೆಳೆಯನಿಗಾಗಿ ರಾಜಕೀಯಕ್ಕೆ ಬಂದಿದ್ದ ಅಮಿತಾಭ್ ಬಚ್ಚನ್ ಅಭಿಮಾನಿಗಾಗಿ ಕ್ಷೇತ್ರ ತೊರೆದಿದ್ದರು!
ಸ್ನೇಹ ದೇವಿ ಮತ್ತು ಮೊಹಮ್ಮದ್ ಶಾದಾಬ್ ಖಾನ್ ಎಂಬ ಪ್ರೇಮಿಗಳು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಆರ್ ಮಸೂದಿ ಮತ್ತು ಎಕೆ ಶ್ರೀವಾಸ್ತವ-ಐ ಅವರ ದ್ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿದಾರರಿಬ್ಬರೂ ಲಿವ್ ಇನ್ ಸಂಬಂಧದಲ್ಲಿದ್ದು, ಮಹಿಳೆಯ ಪೋಷಕರು ಮೊಹಮ್ಮದ್ ಶಾದಾಬ್ ಖಾನ್ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು. ಇವರ ವಿರುದ್ಧ ರಕ್ಷಣೆ ಕೋರಿ ಜೋಡಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಅವರಿಬ್ಬರೂ ತಾವ ವಯಸ್ಕರೆಂದೂ, ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆ ಕೊಡಬೇಕೆಂದೂ ಕೇಳಿದರು. ಮತ್ತು ಸುಪ್ರೀಂ ಕೋರ್ಟ್ ಪ್ರಕಾರ, ಅವರು ಲಿವ್-ಇನ್ ಸಂಬಂಧದಲ್ಲಿ ಒಟ್ಟಿಗೆ ವಾಸಿಸಲು ಸ್ವತಂತ್ರರು ಎಂದೂ ಪ್ರತಿಪಾದಿಸಿದರು.
ದೀಪಿಕಾ ಅಲ್ಲ, ಆಲಿಯಾ ಅಲ್ಲ.. 40 ಕೋಟಿ ರೂ. ಸಂಭಾವನೆ ಪಡೆಯೋ ಈ ನಟಿ 7 ವರ್ಷಗಳಲ್ಲಿ ಒಂದೂ ಹಿಟ್ ಸಿನಿಮಾ ಕೊಟ್ಟಿಲ್ಲ..
ಆದರೆ, ಮೊಹಮ್ಮದ್ ಶಾದಾಬ್ ಖಾನ್ ಗೆ 2020ರಲ್ಲಿ ಫರೀದಾ ಖಾತೂನ್ ಎಂಬವರ ಜೊತೆ ಮದುವೆಯಾಗಿದ್ದು, ದಂಪತಿಗೆ ಮಗುವೂ ಇದೆ ಎಂಬುದನ್ನು ಪೀಠ ತಿಳಿಯಿತು. ಹೀಗಾಗಿ, 'ಇಸ್ಲಾಮಿಕ್ ತತ್ವಗಳು ವಿವಾಹಿತರಿಗೆ ಲಿವ್-ಇನ್ ಸಂಬಂಧಗಳನ್ನು ಅನುಮತಿಸುವುದಿಲ್ಲ. ಇಬ್ಬರು ವ್ಯಕ್ತಿಗಳು ಅವಿವಾಹಿತರಾಗಿದ್ದರೆ ಮತ್ತು ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸಲು ನಿರ್ಧರಿಸಿದರೆ ಸ್ಥಾನವು ವಿಭಿನ್ನವಾಗಿರಬಹುದು'ಎಂದು ಕೋರ್ಟ್ ಹೇಳಿತು. ಸ್ನೇಹಾಳನ್ನು ಪೋಲೀಸ್ ಭದ್ರತೆಯಲ್ಲಿ ಪೋಷಕರ ಜೊತೆ ಕಳುಹಿಸಲು ಕೋರ್ಟ್ ಹೇಳಿತು.
ವಿವಾಹ ಸಂಸ್ಥೆಗಳ ವಿಷಯದಲ್ಲಿ ಸಾಂವಿಧಾನಿಕ ನೈತಿಕತೆ ಮತ್ತು ಸಾಮಾಜಿಕ ನೈತಿಕತೆಯು ಸಮತೋಲನದಲ್ಲಿರಬೇಕು ಎಂದು ನ್ಯಾಯಾಲಯವು ಗಮನಿಸಿದೆ. ಅದು ವಿಫಲವಾದರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿಯ ಉದ್ದೇಶವನ್ನು ಸಾಧಿಸಲು ಸಾಮಾಜಿಕ ಸುಸಂಬದ್ಧತೆ ಮರೆಯಾಗುತ್ತದೆ ಎಂದು ಅದು ಹೇಳಿದೆ.