
ಮದುವೆಯ (Marriage) ದಿನಾಂಕವನ್ನು ಸಾಮಾನ್ಯವಾಗಿ ಮಂಗಳಕರ ದಿನವನ್ನು ಆಯ್ಕೆ ಮಾಡಿ ನಿಗದಿ ಮಾಡಲಾಗುತ್ತದೆ. ಭಾರತ(India)ದಲ್ಲೊಂದೇ ಅಲ್ಲ, ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಲ್ಲಿನ ರೀತಿ-ರಿವಾಜು (Rules), ಸಂಸ್ಕೃತಿ(Tradition)ಗಳಿಗೆ ತಕ್ಕಂತೆ ಶುಭ (Good) ದಿನವನ್ನೇ ಆಯ್ಕೆ ಮಾಡಲಾಗುತ್ತದೆ. ಅಚ್ಚರಿಯೆಂದರೆ, ವಿಶ್ವದೆಲ್ಲೆಡೆ ವಿವಿಧ ದಿನಾಂಕಗಳಿಗೆ ಸಂಬಂಧಿಸಿ ವಿಭಿನ್ನ ನಂಬಿಕೆಗಳಿವೆ. ನಿಮಗೆ ಗೊತ್ತೇ? ಜಗತ್ತಿನ ಹಲವೆಡೆ 8 ಮತ್ತು 9ನೇ ದಿನಾಂಕವನ್ನು ಮಹತ್ವಪೂರ್ಣವನ್ನಾಗಿ ಪರಿಗಣಿಸಲಾಗುತ್ತದೆ. ಚೀನಾ(China)ದಲ್ಲಿ 8 ಮತ್ತು 9ನೇ ತಾರೀಕನ್ನು ಹಣ (Money) ಮತ್ತು ಆಯುಷ್ಯ (Life)ದೊಂದಿಗೆ ಜೋಡಿಸಲಾಗುತ್ತದೆ. 2008ರ ಆಗಸ್ಟ್ 8ರಂದು ವಿಶ್ವದಾದ್ಯಂತ ಅಸಂಖ್ಯಾತ ಮದುವೆಗಳು ಜರುಗಿದ್ದವು. ಹಾಗೆಯೇ, 9-9-2009ರಲ್ಲೂ ಸಿಕ್ಕಾಪಟ್ಟೆ ಮದುವೆಗಳಾಗಿದ್ದವು. ಚೀನಾದಲ್ಲಿ 9ನೇ ಸಂಖ್ಯೆಯನ್ನು ಸಹ ಆಯುಷ್ಯದೊಂದಿಗೆ ಪರಿಗಣಿಸಲಾಗುತ್ತದೆ.
ನಕಾರಾತ್ಮಕ ಸಂಖ್ಯೆಗಳು!
ಯಾವುದೇ ನಿರ್ದಿಷ್ಟ ಸಂಖ್ಯೆಯ ಸಕಾರಾತ್ಮಕ (Possitive) ಹಾಗೂ ನಕಾರಾತ್ಮಕ (Negative) ಪ್ರಭಾವ ಬೇರೆ ಬೇರೆ ಸಂಸ್ಕೃತಿಗಳ ಮೇಲೆ ಆಧಾರವಾಗಿರುತ್ತದೆ ಎನ್ನಬಹುದು. ಉದಾಹರಣೆಯೆಂದರೆ 8. ಭಾರತದಲ್ಲಿ 8ನ್ನು ಅಶುಭ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಚೀನಾದಲ್ಲಿ ಇದು ಶುಭಕರ. ಚೀನಾದಲ್ಲಿ 4ನ್ನು ಸಾವಿನೊಂದಿಗೆ ಜೋಡಿಸಲಾಗುತ್ತದೆ. ಏಷ್ಯಾದ ಹಲವು ದೇಶಗಳಲ್ಲಿ 4ನ್ನು ಹೀಗೆಯೇ ಭಾವಿಸಲಾಗುತ್ತದೆ. ವಿಚಿತ್ರವೆಂದರೆ, ಹಲವು ದೇಶಗಳಲ್ಲಿ ಕಟ್ಟಡ ನಿರ್ಮಿಸುವಾಗ 3ನೇ ಮಹಡಿ ಬಳಿಕ ಸೀದಾ 5ನೇ ಮಹಡಿ ಕಟ್ಟಲಾಗುತ್ತದೆ! ಅರ್ಥಾತ್, 4ನೇ ಮಹಡಿ ಎಂದು ಎಲ್ಲಿಯೂ ಹೆಸರಿಸುವುದಿಲ್ಲ. ಗಗನಚುಂಬಿ ಕಟ್ಟಡಗಳಲ್ಲಿ 40-49ನೇ ಸಂಖ್ಯೆಗಳನ್ನು ಬಿಟ್ಟುಬಿಡಲಾಗುತ್ತದೆ.
ಇಲ್ಲಿ ನಡೆಯುತ್ತೆ ಮದುವೆಯ ಒಲಂಪಿಕ್ಸ್
ಚೀನಾ, ಥಾಯ್ಲೆಂಡ್ (Thailand) ಮತ್ತು ವಿಯಟ್ನಾಂಗಳಲ್ಲಿ 7ನ್ನು ಸಹ ಅಶುಭವೆಂದು ಭಾವಿಸಲಾಗುತ್ತದೆ. ಇಲ್ಲಿ 7ನೇ ತಿಂಗಳನ್ನು ಭೂತದ (Ghost) ತಿಂಗಳು ಎಂದು ಕರೆಯಲಾಗುತ್ತದೆ. ಆದರೆ, ಕ್ರಿಶ್ಚಿಯನ್ (Christian), ಮುಸ್ಲಿಂ (Muslim) ಮತ್ತು ಯೆಹೂದಿ (Jew) ಸಂಸ್ಕೃತಿಗಳಲ್ಲಿ ಇದನ್ನು ಶುಭ ಸಂಖ್ಯೆಯನ್ನಾಗಿ ಪರಿಗಣಿಸಲಾಗುತ್ತದೆ. ಇವರ ಅನೇಕ ಶಾಸ್ತ್ರಗಳಲ್ಲಿ 7ನ್ನು ಶುಭಕರವೆಂದು ಹೇಳುವ ಅನೇಕ ಉದಾಹರಣೆಗಳು ದೊರೆಯುತ್ತವೆ. ಬೈಬಲ್ ನಲ್ಲೂ ಸಹ ವಿಶ್ವ “7 ದಿನಗಳಿಂದ ಮಾಡಲ್ಪಟ್ಟಿದೆ’ ಎಂದು ಹೇಳಲಾಗಿದೆ. ಇದೇ ರೀತಿ, 13ನ್ನು ಸಹ ಅಶುಭವೆಂದು ತಿಳಿಯಲಾಗುತ್ತದೆ. ಅಷ್ಟೇ ಏಕೆ? 13ನ್ನು ಕುರಿತಂತೆ ಇರುವ ಭಯವನ್ನು ಟ್ರಿಸ್ಕೈಡೆಕಾಫೋಬಿಯಾ (Triskaidekaphobia) ಎಂದೇ ಹೆಸರಿಸಲಾಗಿದೆ. 1980ರಲ್ಲಿ ಈ ಕುರಿತು “ಫ್ರೈಡೇ ದ 13’ ಎನ್ನುವ ಸಿನಿಮಾ ಕೂಡ ಬಿಡುಗಡೆಯಾಗಿತ್ತು.
ಹಾಗಿದ್ರೆ ಡಬಲ್ ಸಂಖ್ಯೆಯ ವಿವಾಹ ಕೆಟ್ಟದ್ದೇ?
ಜರ್ಮನಿ(Germany)ಯಲ್ಲಿ ಫೆಬ್ರವರಿ ತಿಂಗಳು ಮದುವೆಗೆ ಪ್ರಶಸ್ತವಲ್ಲ. 2011-2020ರ ಅವಧಿಯಲ್ಲಿ ನೋಡುವುದಾದರೆ ಕೇವಲ ಶೇ.3.5ರಷ್ಟು ಮದುವೆಗಳು ಮಾತ್ರ ಫೆಬ್ರವರಿಯಲ್ಲಿ ಜರುಗಿವೆ. ಆದರೆ, ಕ್ಯಾಲೆಂಡರ್ ನಲ್ಲಿ ಒಂದೇ ರೀತಿಯ ದಿನಾಂಕ, ತಿಂಗಳು, ವರ್ಷ ಬರುವ ದಿನಗಳು ಭಾರೀ ಖ್ಯಾತಿ ಪಡೆದುಕೊಳ್ಳುತ್ತವೆ. ಎರಡೇ ವರ್ಷಗಳ ಮೊದಲು 2-2-2020 ಹಾಗೂ 20-2-2020 ದಿನಾಂಕಗಳು ಕೂಡ ಹೀಗೆಯೇ ಖ್ಯಾತಿ ಗಳಿಸಿದ್ದವು. ವಿಶೇಷವೆಂದರೆ, ದಿನಾಂಕ (Date) ಹಾಗೂ ಮದುವೆಯ ಕುರಿತು ಹಲವು ಅಧ್ಯಯನಗಳು ಕೂಡ ನಡೆದಿವೆ. ಮೆಲ್ಬೋರ್ನ್ ವಿಶ್ವವಿದ್ಯಾಲಯ ನಡೆಸಿದ್ದ ಅಧ್ಯಯನದ ಪ್ರಕಾರ, ಸಂಖ್ಯಾ ಸಂಕೇತ ಯಾವಾಗಲೂ ಪ್ರೇಮಿಗಳನ್ನು ಒಂದುಗೂಡಿಸುವ ಪಕ್ಷದಲ್ಲಿರುವುದಿಲ್ಲ! ಹಾಗೆಯೇ, ಡಚ್ (Dutch) ಮ್ಯಾರೇಜ್ ಮತ್ತು ಡಿವೋರ್ಸ್ ರಿಜಿಸ್ಟ್ರಿ ಪ್ರಕಾರ, ಡಬಲ್ ದಿನಾಂಕದಂದು ಮದುವೆಯಾಗುವವರ ಡಿವೋರ್ಸ್ ಆಗುವ ಪ್ರಮಾಣ ಶೇ.18ರಷ್ಟು ಹೆಚ್ಚು.
ಪ್ರೇಮಿಗಳ ದಿನದಂದು ಸಪ್ತಪದಿ ತುಳಿದ ಕಪಲ್ಸ್
ಭಯ ಬೇಡ
ಸೈಕೋಥೆರಪಿಸ್ಟ್ (Psychotherapist) ವುಲ್ಫಗೈಂಗ್ ಕ್ರೂಜರ್ ಪ್ರಕಾರ, ಸಂಖ್ಯೆಗೂ, ಡಿವೋರ್ಸ್ (Divorce) ಗೂ ಸಂಬಂಧವಿಲ್ಲ. ಮದುವೆಗಾಗಿ ಇಂತಹ ಫ್ಯಾನ್ಸಿ (Fancy) ದಿನಾಂಕಗಳನ್ನು ಆಯ್ಕೆ ಮಾಡಿಕೊಳ್ಳುವವರು ಬಾಹ್ಯ ಪ್ರಪಂಚದ ತೋರಿಕೆಯ ಕುರಿತಾಗಿಯೇ ಹೆಚ್ಚು ಚಿಂತಿತರಾಗಿರುತ್ತಾರೆ. ಅವರ ನಡುವೆ, ಗಟ್ಟಿಯಾದ ಬಾಂಧವ್ಯ ಇರುವುದಿಲ್ಲ. ಹಾಗಾಗಿ ಡಿವೋರ್ಸ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.