ಪತ್ನಿಗೆ ಮದುವೆಗೆ ಮುಂಚೆ ಒಬ್ಬ ಬಾಯ್‌ಫ್ರೆಂಡ್ ಇರುವ ಬಗ್ಗೆ ಅನುಮಾನ ಇದೆ. ಆಕೆ ತವರಿಗೆ ಹೋದಾಗ ಆತನ ಜೊತೆಗೆ ಸೆಕ್ಸ್ ಮಾಡಬಹುದೇ? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಈ ಅನುಮಾನ ಬಗೆ ಹರಿಸಿಕೊಳ್ಳೋ ಮಾರ್ಗ ಇದೆಯೇ?
ಪ್ರಶ್ನೆ: ನಮಗೆ ಮದುವೆ (Marriage) ಆಗಿ ಐದು ವರ್ಷಗಳಾಗಿವೆ. ನಾನು ಬ್ಯುಸಿನೆಸ್ Bussyness) ಕೆಲಸದ ಮೇಲೆ ಆಗಾಗ ಬೇರೆ ಕಡೆ ಹೋಗಿ ಕೆಲವು ದಿನ ಅಲ್ಲೇ ಇರಬೇಕಾಗುತ್ತದೆ. ಆಗ ಪತ್ನಿ (Wife) ಅವಳ ತಂದೆ ತಾಯಿ ಇರುವ ಮನೆಗೆ ಹೋಗುತ್ತಾಳೆ. ಅವಳಿಗೆ ಮದುವೆಗೂ ಮುಂಚೆ ಬಾಯ್‌ಫ್ರೆಂಡ್ (Boyfriend) ಇರುವ ಬಗ್ಗೆ ಅನುಮಾನ ಇದೆ. ಆಕೆ ಅವಳ ಮನೆಗೆ ಹೋದಾಗಲೆಲ್ಲ ಹಳೇ ಬಾಯ್‌ಫ್ರೆಂಡ್ ಜೊತೆಗೆ ಸೆಕ್ಸ್ (Sex) ಮಾಡಬಹುದಾ? ಇದನ್ನು ಅರಿತು ಕೊಳ್ಳೋದು ಹೇಗೆ? ಬೇರೆ ವ್ಯಕ್ತಿಗಳ ಜೊತೆಗೆ ಹೆಣ್ಣುಮಕ್ಕಳು ಸೆಕ್ಸ್ ಮಾಡಿದ್ದಾರಾ ಇಲ್ವಾ ಅನ್ನೋದನ್ನು ಪತ್ತೆ ಮಾಡಲಿಕ್ಕೆ ಏನಾದರೂ ದಾರಿ ಇದೆಯಾ? ಮಕ್ಕಳು ಬೇಡ ಅಂತ ಕಾಪರ್ಟಿ (Copper T) ಹಾಕಿಸಿಕೊಂಡಿದ್ದಾಳೆ. ಹೀಗಾಗಿ ಗರ್ಭಿಣಿ ಆಗಲಿಕ್ಕಿಲ್ಲ. ಅದಕ್ಕೇ ಅನುಮಾನ ಹೆಚ್ಚಾಗುತ್ತಿದೆ. ಉತ್ತರಿಸಿ.
ಉತ್ತರ: ಇದೇ ಅನುಮಾನ ನಿಮ್ಮ ಪತ್ನಿಗೂ ಬರಬಹುದಲ್ವೇ. ನೀವು ಊರೂರು ಟೂರ್ ಮಾಡುತ್ತಾ ಇರುತ್ತೀರಿ. ಪತಿಗೆ ಇನ್ಯಾರ ಜೊತೆಗಾದರೂ ಸಂಬಂಧ ಇರಬಹುದಾ, ಆತ ಅಲ್ಲಿ ತನ್ನ ಹಳೇ ಗರ್ಲ್ ಫ್ರೆಂಡ್‌ಗಳನ್ನು (Girlfriend) ಮೀಟ್ ಆಗಿ ಅವರ ಜೊತೆಗೆ ಸೆಕ್ಸ್ ಮಾಡಬಹುದಾ ಅಥವಾ ಹೊಸ ಗರ್ಲ್ ಫ್ರೆಂಡ್‌ಗಳಿರಬಹುದಾ ಅಂತೆಲ್ಲ ಆಕೆಯೂ ಯೋಚಿಸಿ ನಿಮ್ಮ ಬಗ್ಗೆ ಅನುಮಾನ ಪಡಬಹುದು. ಹೀಗೆ ಅನುಮಾನ ಪಡುತ್ತಿದ್ದರೆ ನಿತ್ಯದ ಲೈಫಿನಲ್ಲೇ ಪರಸ್ಪರ ಡೌಟ್ ಪಡುತ್ತಾ ಹೋಗಬಹುದು. ಅದಕ್ಕೋಸ್ಕರ ಆಕೆ ತನ್ನ ಮನೆಗೆ ಹೋಗಬೇಕು ಅಂತಿಲ್ಲ. ಆಕೆಯೂ ತನ್ನ ಗಂಡ ಸೆಕ್ಸ್ ಮಾಡಿದ್ದಾನಾ ಇಲ್ಲವಾ ಅಂತ ನೋಡೋದಕ್ಕೆ ಏನಾದರೂ ದಾರಿ ಇದೆಯಾ ಅಂದರೆ ಏನು ಹೇಳೋದು? ಆಕೆ ಸೆಕ್ಸ್ ಮಾಡಿದ್ದಾಳಾ ಇಲ್ವಾ ಅನ್ನೋದನ್ನು ಪತ್ತೆ ಹಚ್ಚಲು ಡಿಟೆಕ್ಟಿವ್‌ಗಳ (Detectives) ಮೊರೆ ಹೋಗಬಹುದಷ್ಟೇ. ಅದರ ಬದಲು ಪತ್ನಿಯ ಮೇಲೆ ನಂಬಿಕೆ ಇಟ್ಟು ಆರಾಮವಾಗಿರಬಹುದು. ಕೌನ್ಸಿಲಿಂಗ್ ಸಹಾಯದಿಂದ ಈ ಅನುಮಾನವನ್ನು ಪತಿ ಪತ್ನಿ ಇಬ್ಬರೂ ಸೇರಿ ಪರಿಹರಿಸಬಹುದು. ಯಾವುದನ್ನು ಕದ್ದುಮುಚ್ಚಿ ಮಾಡುತ್ತೇವೋ ಅದು ಬಹಿರಂಗ ಆದಾಗ ದೊಡ್ಡ ಹೊಡೆತ ಕೊಡುತ್ತೆ. ಅದರ ಬದಲು ಇಂಥಾ ಅನುಮಾನಗಳ ಬಗ್ಗೆ ನೇರವಾಗಿ ಚರ್ಚಿಸಿ, ಇದು ತನ್ನ ಸಮಸ್ಯೆ ಅನ್ನೋದನ್ನು ಒಪ್ಪಿಕೊಂಡರೆ ಇದನ್ನು ಬೇಗ ಬಗೆಹರಿಸಬಹುದು.
Menstruation and Sex: ಮುಟ್ಟಾದಾಗ ಸೆಕ್ಸ್‌ಗೆ ಒತ್ತಾಯಿಸುವ ಗಂಡ, ಇದೇನು ವಿಚಿತ್ರ!
ಪ್ರಶ್ನೆ: ನಮ್ಮ ಮದುವೆಯಾಗಿ 14 ವರ್ಷಗಳಾಗಿವೆ. ಎರಡು ಮಕ್ಕಳಿದ್ದಾರೆ. ಆದರೆ ಎರಡನೇ ಹೆರಿಗೆಯ ಬಳಿಕ ಪತ್ನಿಗೆ ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ಲ. ಏಳೆಂಟು ತಿಂಗಳಿಂದ ನಾವಿಬ್ಬರೂ ಒಮ್ಮೆಯೂ ಸೆಕ್ಸ್ ಮಾಡಿಲ್ಲ. ನಮ್ಮಿಬ್ಬರ ನಡುವೆ ನಾರ್ಮಲ್ ಮಾತುಕತೆ ಬಿಟ್ಟರೆ ಮತ್ತೆ ಏನೂ ನಡೆಯುತ್ತಿಲ್ಲ. ನನಗೆ ಇದರಿಂದ ನಿದ್ದೆಯೇ ಬರುತ್ತಿಲ್ಲ. ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಡಿಪ್ರೆಶನ್ ಶುರುವಾಗಿದೆ ಅನಿಸುತ್ತಿದೆ. ಇದಕ್ಕೆ ಪರಿಹಾರ ಅನ್ನುವ ಹಾಗೆ ನಾನು ಬೇರೆ ಹೆಂಗಸಿನ ಆಕರ್ಷಣೆಯಲ್ಲಿ ಬಿದ್ದೆ. ಆದರೆ ಅದು ಮಾತಿನ ಲೆವೆಲ್‌ನಲ್ಲೇ ಇದೆ. ಮಾತಿಗಿಂತ ಹೆಚ್ಚು ಮುಂದುವರಿಯುತ್ತಿಲ್ಲ. ಒಮ್ಮೆ ನಾನು ಈ ರೀತಿ ಮಾಡಿದ್ದು ಕೆಟ್ಟದು ಅಂತ ಅನಿಸಿದೆ. ಈ ಬಗ್ಗೆ ಪತ್ನಿಗೆ ಹೇಳಿ ಸಾರಿ ಕೇಳಿದೆ. ಅವಳು ಕೇಳಿಸಿಕೊಂಡು ಸುಮ್ಮನಾದಳು. ಅವಳಿಂದ ದೊಡ್ಡ ವಿರೋಧ ಬರಲಿಲ್ಲ. ಆಮೇಲೂ ಅವಳು ಸೆಕ್ಸ್‌ಗೆ ಬರಲಿಲ್ಲ. ಇದರಿಂದ ಅವಳಿಗೂ ಬಾಯ್ ಫ್ರೆಂಡ್ ಇರಬಹುದಾ? ಅದಕ್ಕೆ ನನ್ನ ಬಳಿ ಸಂಬಂಧ ಕಡಿದುಕೊಂಡಿರಬಹುದಾ ಅನ್ನುವ ಅನುಮಾನ ಶುರುವಾಗಿದೆ. ಏನು ಮಾಡಲಿ?
No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?
ಉತ್ತರ: ಈ ಅಪನಂಬಿಕೆಯನ್ನು (Doubt) ಇಟ್ಟುಕೊಂಡು ದಿನದೂಡುವುದಕ್ಕಿಂತ ಪತ್ನಿಯ ಬಳಿ ಮುಕ್ತವಾಗಿ ಮಾತನಾಡಿ. ಆಕೆಯ ಸಮಸ್ಯೆಗಳೇನು ಅನ್ನುವುದನ್ನು ಅರಿಯುವ ಪ್ರಯತ್ನ ಮಾಡಿ. ನಿಮ್ಮ ಮಾತು ನೋಡಿದರೆ ಇನ್ನೊಂದು ಚಿಕ್ಕ ಮಗು ಅನಿಸುತ್ತೆ. ಹೀಗಾಗಿ ಮಗುವಿನ ದೇಖಾರೇಖಿ ಮನೆ ಕೆಲಸಗಳಲ್ಲಿ ಕಳೆದುಹೋದ ಅವರಿಗೆ ಸೆಕ್ಸ್ ಬಗ್ಗೆ ನಿರಾಸಕ್ತಿ ಬಂದಿರಬಹುದು. ಇಲ್ಲವೇ ಮುಂದೆ ಮಕ್ಕಳಾದರೆ ಅನ್ನುವ ಭಯ ಇರಬಹುದು. ಈ ಬಗ್ಗೆ ಪರಸ್ಪರ ಮಾತನಾಡಿ. ಸಮಸ್ಯೆ ಇನ್ನೂ ಮುಂದುವರಿದಲ್ಲಿ ಅವರನ್ನು ಒಪ್ಪಿಸಿ ಲೈಂಗಿಕ ತಜ್ಞರಲ್ಲಿಗೆ (Sexual experts) ಕರೆದುಕೊಂಡು ಹೋಗಿ. ಇದರ ವಿನಃ ಅವರ ಬಗ್ಗೆ ಸುಮ್ಮನೆ ಅನುಮಾನ ಪಡುವುದು ಒಳ್ಳೆಯದಲ್ಲ.