ಇಂದು ಎಲ್ಲೆಡೆ ಟೀಂ ವರ್ಕ್ ಸದ್ದು ಮಾಡುತ್ತಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಯಶಸ್ಸು ಸಾಧಿಸಬೇಕೆಂದರೆ ಟೀಂನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅಗತ್ಯ. ಟೀಂನಲ್ಲಿ ಕಂಫರ್ಟೇಬಲ್ ಆಗಿ ಕಾರ್ಯನಿರ್ವಹಿಸಲು ಕೆಲವೊಂದು ಕೌಶಲ್ಯಗಳನ್ನು ಹೊಂದಿರುವುದು ಅಗತ್ಯ.
ಟೀಂ ವರ್ಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಕ್ರೀಡೆಯಲ್ಲಿ ಆಟಗಾರರು ಹೇಗೆ ಒಂದು ಟೀಂ ಆಗಿ ಆಟವಾಡಿ ವಿಜಯ ಸಾಧಿಸುತ್ತಾರೋ ಹಾಗೆಯೇ ಕಂಪನಿಗಳಲ್ಲಿ ಉದ್ಯೋಗಿಗಳ ಒಂದು ಗುಂಪು ತಮಗೆ ನೀಡಿದ ಪ್ರಾಜೆಕ್ಟ್ ಅನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುತ್ತದೆ.
ಒಬ್ಬರೇ ಮಾಡುವುದಕ್ಕಿಂತ ಇಬ್ಬರು ಜೊತೆಯಾಗಿ ಮಾಡುವುದರಿಂದ ಕೆಲಸವನ್ನು ಉತ್ತಮವಾಗಿ ನಿರ್ವಹಿಸಬಹುದು. ಅಂದರೆ ಒಬ್ಬರಿಗಿಂತ ಇಬ್ಬರ ಯೋಚನೆಗಳು ಸೇರಿದಾಗ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಹಿಡಿಯಬಹುದು. ಇದೇ ಕಾರಣಕ್ಕೆ ಇಂದು ಕಂಪನಿಗಳಲ್ಲಿ ಟೀಂ ವರ್ಕ್ ಮಹತ್ವ ಪಡೆದುಕೊಂಡಿದೆ. ಆದರೆ, ಟೀಂನಲ್ಲಿ ಕಂಫರ್ಟೇಬಲ್ ಆಗಿ ಕಾರ್ಯನಿರ್ವಹಿಸಲು ಕೆಲವೊಂದು ಕೌಶಲ್ಯಗಳು ನಮ್ಮಲ್ಲಿರುವುದು ಅಗತ್ಯ.
1.ಹೊಂದಾಣಿಕೆ: ಟೀಂನಲ್ಲಿ ಕೆಲಸ ಮಾಡುವಾಗ ಹೊಂದಾಣಿಕೆ ಎನ್ನುವುದು ಅತ್ಯಗತ್ಯ. ನಿಮ್ಮ ಟೀಂನಲ್ಲಿ ಬೇರೆ ಬೇರೆ ಮನೋಭಾವದ ಜನರು ಇರುತ್ತಾರೆ. ಕೆಲವರು ಮೌನಿಗಳಾದರೆ, ಇನ್ನೂ ಕೆಲವರು ವಾಚಾಳಿಗಳಾಗಿರಬಹುದು. ಕೆಲವರು ತುಂಬಾ ಬುದ್ಧಿವಂತರಾಗಿರಬಹುದು, ಕೆಲವರು ನಿಮಗಿಂತ ದಡ್ಡರಿರಬಹುದು. ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಕೆಲಸ ನಿರ್ವಹಿಸುವುದು ಅಗತ್ಯ. ಆಗ ಮಾತ್ರ ನೀವು ಆಫೀಸ್‍ನಲ್ಲಿ ಖುಷಿ ಖುಷಿಯಾಗಿ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ.
undefined
2.ಉತ್ತಮ ಸಂವಹನ ಕೌಶಲ್ಯ: ಮಾತು ಸಂಬಂಧಗಳನ್ನು ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಸಂವಹನ ಕೌಶಲ್ಯ ಹೊಂದಿರುವ ವ್ಯಕ್ತಿ ಟೀಂನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ. ಟೀಂನಲ್ಲಿ ಕೆಲಸ ಮಾಡುವಾಗ ನಮ್ಮ ಯೋಚನೆಗಳು, ಅಭಿಪ್ರಾಯಗಳನ್ನು ಉಳಿದ ಸದಸ್ಯರಿಗೆ ಮನವರಿಕೆ ಮಾಡಿಸುವುದು ಅಗತ್ಯ. ಇದಕ್ಕೆ ಉತ್ತಮ ಸಂವಹನ ಕೌಶಲ್ಯ ಹೊಂದಿರುವುದು ಅಗತ್ಯ.
3.ಇನ್ನೊಬ್ಬರಿಗೆ ಗೌರವ ನೀಡಿ: ಟೀಂನಲ್ಲ್ಲಿ ಕಾರ್ಯನಿರ್ವಹಿಸುವಾಗ ಉಳಿದವರನ್ನು ಗೌರವಿಸುವ ಗುಣ ಹೊಂದಿರುವುದು ಅತ್ಯಗತ್ಯ. ಉಳಿದ ಸದಸ್ಯರ ಭಾವನೆಗಳು, ಅಭಿಪ್ರಾಯಗಳನ್ನು ಗೌರವಿಸುವ, ಒಪ್ಪುವ ಗುಣ ಬೆಳೆಸಿಕೊಳ್ಳಬೇಕು. ಕೆಲವರಿಗೆ ನನ್ನ ಯೋಚನೆಗಳೇ ಉನ್ನತವಾದವು, ಬೇರೆಯವರ ಅಭಿಪ್ರಾಯಗಳು ಸರಿಯಿಲ್ಲ ಎಂಬ ಭಾವನೆಯಿರುತ್ತದೆ. ಇದು ತಪ್ಪು. ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳು ಇನ್ನೊಬ್ಬರಿಗೆ ತಿಳಿದಿರುತ್ತದೆ. ಟೀಂನಲ್ಲಿರುವ ಇತರ ಸದಸ್ಯರನ್ನು ನೀವು ಗೌರವಿಸಿದರೆ ಮಾತ್ರ ಅವರು ನಿಮ್ಮನ್ನು ಗೌರವಿಸುತ್ತಾರೆ ಎಂಬುದು ಸದಾ ನೆನಪಿನಲ್ಲಿರಲಿ.
4.ನಿಮ್ಮದೇ ಸರಿ ಎಂಬ ಹಠ ಬೇಡ: ಕೆಲವರಿಗೆ ನಾನು ಹೇಳಿದ್ದೇ ಸರಿ, ಅದೇ ನಡೆಯಬೇಕು ಎಂಬ ಹಠವಿರುತ್ತದೆ. ಇಂಥ ಭಾವನೆ ನಿಮ್ಮ ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡಬಲ್ಲದು. ಆದಕಾರಣ ನಿಮ್ಮ ಯೋಚನೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಆದರೆ ಅದನ್ನು ಉಳಿದವರ ಮೇಲೆ ಬಲವಂತವಾಗಿ ಹೇರಲು ಹೋಗಬೇಡಿ.
5.ತಿಳಿದಿಲ್ಲ ಎನ್ನಲು ಸಂಕೋಚ ಬೇಡ: ಈ ಜಗತ್ತಿನಲ್ಲಿ ಎಲ್ಲ ವಿಷಯವನ್ನು ಅರಿತಿರುವವರು ಯಾರೂ ಇಲ್ಲ. ಎಷ್ಟೇ ಓದಿದ್ದರೂ, ಅಧ್ಯಯನ ಮಾಡಿದ್ದರೂ ಅನೇಕ ವಿಷಯಗಳ ಬಗ್ಗೆ ನಮಗೆ ಜ್ಞಾನವಿರುವುದಿಲ್ಲ. ನಮಗೆ ಮಾಹಿತಿಯಿಲ್ಲದ ಅಥವಾ ತಿಳಿಯದ ವಿಷಯಗಳನ್ನು ತಿಳಿದಿಲ್ಲ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ ತಿಳಿದಿದೆ ಎಂಬ ಅಹಂಗಿಂತ ತಿಳಿಯದ ವಿಷಯವನ್ನು ತಿಳಿದಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ದೊಡ್ಡತನ. ಇಂಥ ಗುಣ ನಿಮ್ಮ ವ್ಯಕ್ತಿತ್ವಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಬದಲಿಗೆ ನಿಮ್ಮ ಬಗ್ಗೆ ಉಳಿದವರಿಗೆ ಗೌರವ ಮೂಡುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ನಿಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಳ್ಳಲು ಕೂಡ ನೆರವು ನೀಡುತ್ತದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ನಾವು ‘ತಿಳಿದಿಲ್ಲ’ ಎಂದು ಹೇಳಲು ಸಂಕೋಚಪಟ್ಟುಕೊಳ್ಳುತ್ತೇವೆ.
ತಿಳಿದಿಲ್ಲ ಎಂದರೆ ಬೇರೆಯವರ ಕಣ್ಣಲ್ಲಿ ನಾವು ಚಿಕ್ಕವರಾಗುತ್ತೇವೆ ಅಥವಾ ಉಳಿದವರು ನಮ್ಮನ್ನು ಅಪಹಾಸ್ಯ ಮಾಡಬಹುದೆಂಬ ಭಯದಿಂದ ಎಲ್ಲ ತಿಳಿದಿದೆ ಎಂಬಂತೆ ವರ್ತಿಸುತ್ತೇವೆ. ಆದರೆ, ಇಂಥ ವರ್ತನೆಯಿಂದ ನಾವು ಗಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಅದೂ ಟೀಂನಲ್ಲಿ ಕಾರ್ಯನಿರ್ವಹಿಸುವಾಗ ಈ ವಿಚಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಮಾಹಿತಿ ಕೊರತೆಯಿದ್ದರೆ ನೀವು ಎಲ್ಲರೊಂದಿಗೆ ಬೆರೆತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅಲ್ಲದೆ, ಕೆಲಸ ಪ್ರಾರಂಭವಾದ ಬಳಿಕ ನಿಮಗೆ ಆ ವಿಷಯದ ಬಗ್ಗೆ ಜ್ಞಾನವಿಲ್ಲ ಎಂಬುದು ಉಳಿದವರಿಗೆ ತಿಳಿದರೆ ಆಗ ನೀವು ಅವಮಾನಕ್ಕೀಡಾಗಬೇಕಾಗುತ್ತದೆ. ಅಲ್ಲದೆ, ಉಳಿದವರ ಪರಿಶ್ರಮವೆಲ್ಲ ನಿಮ್ಮ ತಪ್ಪಿನಿಂದ ಹಾಳಾಗಿ ಹೋಗಬಹುದು. ಇದು ಟೀಂನಲ್ಲಿ ನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಿಸಬಲ್ಲದು.
ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು!
6.ಬೇರೆಯವರ ಕಾರ್ಯವನ್ನು ಶ್ಲಾಘಿಸಿ: ಟೀಂನಲ್ಲ್ಲಿ ಉಳಿದ ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಅವರನ್ನು ಶ್ಲಾಘಿಸುವ ಗುಣ ಬೆಳೆಸಿಕೊಳ್ಳಿ. ಇದು ನಿಮ್ಮ ಬಗ್ಗೆ ಅವರಲ್ಲಿ ಉತ್ತಮ ಅಭಿಪ್ರಾಯ ಮೂಡಿಸುತ್ತದೆ. ಅಲ್ಲದೆ, ಉತ್ತಮ ಕೆಲಸವನ್ನು ಶ್ಲಾಘಿಸುವುದರಿಂದ ಆ ವ್ಯಕ್ತಿ ಇನ್ನೂ ಸಮರ್ಥವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇನೆ. ಇದರಿಂದ ನಿಮ್ಮ ಟೀಂಗೆ ಹೆಚ್ಚಿನ ಪ್ರಯೋಜನವಾಗುತ್ತದೆ.
7.ಅಸೂಯೆ ಬೇಡ: ಉಳಿದ ಸದಸ್ಯರ ಏಳ್ಗೆಯನ್ನು ಕಂಡು ಯಾವುದೇ ಕಾರಣಕ್ಕೂ ಅಸೂಯೆ ಪಟ್ಟುಕೊಳ್ಳಬೇಡಿ. ಏಕೆಂದರೆ ಅದು ನಿಮ್ಮ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಬಲ್ಲದು. ಅಸೂಯೆ ನಮ್ಮನ್ನೇ ಸುಡುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಡಿ. ಇನ್ನೊಬ್ಬರಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ, ನೀವೂ ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಅವರ ಯಶಸ್ಸಿನ ಸೂತ್ರಗಳನ್ನು ನೀವು ಕೂಡ ಅನುಸರಿಸಲು ಪ್ರಯತ್ನಿಸಿ. ಸ್ಪರ್ಧೆ ನಿಮ್ಮ ಸಾಮಥ್ರ್ಯದೊಂದಿಗಿರಲಿ, ಅನ್ಯರ ಜೊತೆಗೆ ಬೇಡ.
8.ತಪ್ಪನ್ನು ಒಪ್ಪಿಕೊಳ್ಳಿ: ನಿಮ್ಮಿಂದ ತಪ್ಪಾದಾಗ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ಯಾವುದೇ ಕಾರಣಕ್ಕೂ ನೀವು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸಬೇಡಿ. ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ, ತಪ್ಪನ್ನು ಒಪ್ಪಿಕೊಳ್ಳುವವರು ಮಾತ್ರ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬಲ್ಲರು. ತಪ್ಪನ್ನು ಒಪ್ಪಿಕೊಂಡು, ಮುಂದೆ ಆ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿ. ಏಕೆಂದರೆ ಒಂದೇ ತಪ್ಪನ್ನು ಪದೇಪದೆ ಮಾಡುವುದು ಕೂಡ ದೊಡ್ಡ ತಪ್ಪೇ. ಅಲ್ಲದೆ, ನಿಮ್ಮ ತಪ್ಪನ್ನು ಪದೇಪದೆ ಮನ್ನಿಸುವ ಸಹನೆ ಉಳಿದ ಸದಸ್ಯರಿಗೆ ಇರುವುದಿಲ್ಲ. ತಪ್ಪು ನಡೆದಾಗ ನಾನು ಮಾಡಿದ್ದೇ ಸರಿ ಎಂದು ವಾದಿಸುವ ಗುಣ ಕೂಡ ಒಳ್ಳೆಯದಲ್ಲ.
ಲೇಆಫ್ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?
9.ಲೀಡರ್ ಮಾತಿಗೆ ಬೆಲೆ ನೀಡಿ: ಟೀಂ ಎಂದ ಮೇಲೆ ಅದಕ್ಕೊಬ್ಬರು ಲೀಡರ್ ಇದ್ದೇಇರುತ್ತಾರೆ. ಲೀಡರ್À ನೇತೃತ್ವದಲ್ಲೇ ಗುಂಪು ಮುನ್ನಡೆಯುತ್ತದೆ. ಲೀಡರ್ ಮಾತನ್ನು ಉಳಿದ ಸದಸ್ಯರು ಒಪ್ಪಿಕೊಳ್ಳುವುದು ನಿಯಮ. ನೀವು ಟೀಂಗೆ ಸೇರಿದ್ದೀರಿ ಎಂದ ಮೇಲೆ ಲೀಡರ್ ಅನ್ನು ಗೌರವಿಸುವುದು ಹಾಗೂ ಆತನ ಮಾತು ಕೇಳುವುದು ನಿಮ್ಮ ಕರ್ತವ್ಯ.