Job Interview Tips: ಇಂಟರ್‌ವ್ಯೂನಲ್ಲಿ 'ನಿಮ್ಮ ಬಗ್ಗೆ ಹೇಳಿ?' ಎಂದರೆ ಏನು ಹೇಳ್ತೀರಿ?

By Suvarna NewsFirst Published Feb 26, 2022, 11:51 AM IST
Highlights

ಸಾಮಾನ್ಯವಾಗಿ ಕಾರ್ಪೊರೇಟ್ ಉದ್ಯೋಗಗಳ ಸಂದರ್ಶನದಲ್ಲಿ ''ಟೆಲ್ ಮಿ ಅಬೌಟ್ ಯುವರ್‌ಸೆಲ್ಫ್' ಅಥವಾ 'ನಿಮ್ಮ ಬಗ್ಗೆ ಹೇಳಿ' ಎಂದು ಕೇಳುವುದು ಸಾಮಾನ್ಯ ಪ್ರಶ್ನೆ. ನೀವು ಅದಕ್ಕೆ ಹೇಗೆ ಉತ್ತರಿಸುತ್ತೀರಿ? ಇಲ್ಲಿದೆ ಸಂಪೂರ್ಣ ವಿವರಣೆ

"ನಿಮ್ಮ ಬಗ್ಗೆ ಹೇಳಿ" (Tell me about youself) ಎಂಬುದು ಉದ್ಯೋಗ ಸಂದರ್ಶನದ (Job Interview) ಒಂದು ಸುಲಭವಾದ ಪ್ರಶ್ನೆಯಂತೆ ತೋರಬಹುದು. ಆದರೆ ಈ ಪ್ರಶ್ನೆಯ ಮುಕ್ತ ಸ್ವರೂಪದಿಂದಾಗಿ, ಉದ್ಯೋಗಾಕಾಂಕ್ಷಿಗಳಿಗೆ ಎಲ್ಲಿಂದ ಪ್ರಾರಂಭಿಸಬೇಕು ಎಂಬ ಗೊಂದಲವನ್ನು ಉಂಟುಮಾಡುತ್ತದೆ. ಈ ಪ್ರಶ್ನೆಯ ಮೂಲಕ ಸಂದರ್ಶಕರು (Interviewer) ನಿಮ್ಮ ಬಗ್ಗೆ ಏನು ತಿಳಿಯಲು ಬಯಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅವರು ನಿಮ್ಮ ಸಂಪೂರ್ಣ ಉದ್ಯೋಗ ಇತಿಹಾಸ, ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಬಯಸುತ್ತಾರೆಯೇ? ಇಲ್ಲ. ಈ ಸಾಮಾನ್ಯ ಪ್ರಶ್ನೆಯು ವಾಸ್ತವವಾಗಿ ಅಭ್ಯರ್ಥಿಯ ಸಂವಹನ ಕೌಶಲ್ಯ- ಕಮ್ಯುನಿಕೇಶನ್ ಸ್ಕಿಲ್‌ಗಳ (Communication skills) ನಿರ್ಣಾಯಕ ಪರೀಕ್ಷೆ. ಆದ್ದರಿಂದ ನೀವು ಅದನ್ನು ಸ್ಕಿಪ್ ಮಾಡಲು ಬರೋಲ್ಲ.

"ಇದು ಸಂಪೂರ್ಣ ಸಂದರ್ಶನದ ಹೃದಯಭಾಗದಲ್ಲಿರುತ್ತದೆ" ಎಂದು ಉದ್ಯೋಗ ಎಕ್ಸ್‌ಪರ್ಟ್‌ಗಳು ಹೇಳ್ತಾರೆ. ನೀವು ನಿಜವಾಗಿಯೂ ಏನು ಮಾಡಬೇಕು ಎಂದರೆ, ನೀವು ಆ ಸ್ಥಾನಕ್ಕೆ ಆದರ್ಶ ಅಭ್ಯರ್ಥಿಯಾಗಿ ನಿಮ್ಮನ್ನು ಗುರುತಿಸಿಕೊಳ್ಳಬೇಕು. ಮೈಕ್ರೋಸಾಫ್ಟ್‌ನಲ್ಲಿ (Microsoft) 14 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಜಾಗತಿಕ ಸಿಇಒ ತರಬೇತುದಾರ ಸಬೀನಾ ನವಾಜ್ ಹೇಳುವಂತೆ, ಸಂದರ್ಶನಕ್ಕಾಗಿ ಅಭ್ಯರ್ಥಿಗಳು ತಮ್ಮ ಬಳಿಗೆ ಬಂದಾಗ ಅವರು ಕೇಳುವ ಮೊದಲ ಪ್ರಶ್ನೆ ಇದಾಗಿತ್ತಂತೆ. "ಅಭ್ಯರ್ಥಿಯು ಮಾತಿನ ನಿರೂಪಣೆಯ ಮೇಲೆ ಹಿಡಿತ ಸಾಧಿಸಲು ಮತ್ತು ತಮ್ಮ ಕಥೆಯನ್ನು ತಮ್ಮ ಪ್ರೇಕ್ಷಕರಿಗೆ ನಿಜವಾಗಿಯೂ ಮುಖ್ಯವೆನಿಸುವ ರೀತಿಯಲ್ಲಿ ಹೇಳಲು ಇದು ಅವಕಾಶ" ಎಂದು ನವಾಜ್ ಹೇಳುತ್ತಾರೆ.

Latest Videos

ಈ ಪ್ರಶ್ನೆಗೆ ಉತ್ತರಿಸಲು ವ್ಯಾಪಕವಾದ ತಯಾರಿಯೇ ಬೇಕು. ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ:

 ONGC RECRUITMENT 2022: ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿ

ಪುನರಾವರ್ತನೆ ಬೇಡ (Repitition): ನೀವು ಇಂಟರ್‌ವ್ಯೂಗೆ ಹೋದಾಗ, ಸಂದರ್ಶಕರು ನಿಮ್ಮ ರೆಸ್ಯೂಮೆ (Resume) ಯನ್ನು ಈಗಾಗಲೇ ಓದಿರುತ್ತಾರೆ. ಆದ್ದರಿಂದ ಆ ಮಾಹಿತಿಯನ್ನು ಪುನರಾವರ್ತಿಸಬೇಡಿ. "ನನಗೆ ಇದರ ಅನುಭವಗಳಿವೆ, ನಾನು ಆ ಸ್ಥಳದಲ್ಲಿ ನನ್ನ ಶಿಕ್ಷಣವನ್ನು ಪಡೆದಿದ್ದೇನೆ, ನಾನು ಈ ಪದವಿಯನ್ನು ಹೊಂದಿದ್ದೇನೆ, ನಾನು ಈ ರೀತಿಯ ವಿಶೇಷ ಯೋಜನೆ ಮಾಡಿದ್ದೇನೆ" ಎಂದು ಹೇಳಬೇಡಿ. ಹೆಚ್ಚಿನವರು ಹೀಗೆ ಮಾಡುತ್ತಾರೆ. ಇದು ಸುಲಭ. ನಮ್ಮ ರೆಸ್ಯೂಮೆಯಲ್ಲಿ ಈಗಾಗಲೇ ಇರುವ ವಿಷಯಗಳನ್ನು ಹೇಳುವುದು ನಮ್ಮ ಪ್ರವೃತ್ತಿಯಾಗಿದೆ. ಹೀಗೆ ಮಾಡುವ ಮೂಲಕ, ನೇಮಕಾತಿ ನಿರ್ವಾಹಕರಿಗೆ ನಿಮ್ಮ ಬಗ್ಗೆ ಹೊಸ ಮಾಹಿತಿಯನ್ನು ನೀಡುವ ಪ್ರಮುಖ ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ.

ಸ್ಪಷ್ಟ ಸಂದೇಶ ನೀಡಿ: ನಿಮ್ಮ ಬಗ್ಗೆ ಬಲವಾದ ಸಂದೇಶದ ಸುತ್ತ ಉತ್ತರವನ್ನು ರೂಪಿಸಿ. ಮತ್ತು ಈ ಸಂದೇಶವನ್ನು ಸಾಬೀತುಪಡಿಸಲು ಮೂರು ಅಂಶಗಳನ್ನು ಹೊಂದಿರಿ. ಉದಾಹರಣೆಗೆ ನೀವು ವಾಣಿಜ್ಯೋದ್ಯಮಿ ಎಂಬುದೇ ನಿಮ್ಮ ಮುಖ್ಯ ಸಂದೇಶವಾಗಿದ್ದರೆ, ನಿಮ್ಮ ಅಂಶಗಳು ಹೀಗಿರಬಹುದು: "ನಾನು ಉತ್ತಮ ಉದ್ಯಮಿಗಳ ಗುಣಗಳನ್ನು ಹೊಂದಿದ್ದೇನೆ ಎಂದು ನಾನು ನಂಬುತ್ತೇನೆ. ಈ ಪ್ರದೇಶದಲ್ಲಿ ನನಗೆ ಸ್ವಲ್ಪ ಅನುಭವವಿದೆ. ಮತ್ತು ಈ ಮುಂದಿನ ಸ್ಥಾನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ಅದು ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ನೀಡುತ್ತದೆ- ಎನ್ನಬಹುದು.

ಅಭ್ಯರ್ಥಿಗಳ ಗುಂಪಿನಿಂದ ನಿಮ್ಮನ್ನು ಪ್ರತ್ಯೇಕಿಸಲು, ನೀವು ನೇಮಕಗೊಂಡರೆ ನೀವು ಸಂದರ್ಶನ ಮಾಡುತ್ತಿರುವ ತಂಡವು ಹೇಗೆ ಉತ್ತಮವಾಗಿರುತ್ತದೆ ಎಂಬುದರ ಕುರಿತು ನೀವು ಹೇಳಬೇಕು. ಅಂದರೆ ಅವರ ಗುರಿಗಳ ಬಗ್ಗೆ ಪೂರ್ವ ಸಂಶೋಧನೆಯನ್ನು ಮಾಡುವುದು. ಇದರಿಂದ ನೀವು ಹೇಳುವ ವಿಚಾರವನ್ನು ಅವರು ಕೇಳಬಯಸುತ್ತಾರೆ.

ಸಾಮಾಜಿಕ ಮಾಧ್ಯಮ (Social media) ವನ್ನು ಹೆಚ್ಚು ಬಳಸಲು ಪ್ರಯತ್ನಿಸುತ್ತಿರುವ ಮಾರ್ಕೆಟಿಂಗ್ (Marketing) ತಂಡವನ್ನು ಸೇರಲು ನೀವು ಅರ್ಜಿ ಸಲ್ಲಿಸುತ್ತಿರುವಿರಿ ಎಂದು ಊಹಿಸಿ. ನೀವು ಹೇಳಬಹುದು- "'ನಾನು ಸಾಮಾಜಿಕ ಮಾಧ್ಯಮದ ಬಗ್ಗೆ ನಿಜವಾಗಿಯೂ ಆಸಕ್ತನಾಗಿದ್ದೇನೆ; ನಾನು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ 10 ವರ್ಷಗಳಿಂದ ಅದನ್ನು ಬಳಸುತ್ತಿದ್ದೇನೆ. ಹೊಸ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಸ ಪ್ರೇಕ್ಷಕರನ್ನು ತಲುಪಲು ಹೊಸ ಅವಕಾಶಗಳನ್ನು ಹುಡುಕುವುದು ನನ್ನ ಮೆಚ್ಚಿನ ಅಭ್ಯಾಸಗಳಲ್ಲಿ ಒಂದಾಗಿದೆ. ನಿಮ್ಮ ತಂಡವು ಪ್ರಸ್ತುತ ಕವಲೊಡೆಯುತ್ತಿದೆ ಮತ್ತು Instagram ಅನ್ನು ಜಾಹೀರಾತು ವೇದಿಕೆಯಾಗಿ ಬಳಸುತ್ತಿದೆ ಎಂದು ನನಗೆ ತಿಳಿದಿದೆ. ಅದನ್ನು ಸುಲಭಗೊಳಿಸಲು ಸಹಾಯ ಮಾಡಲು ನಾನು ನಿಜವಾಗಿಯೂ ಆಸಕ್ತಿ ಹೊಂದಿದ್ದೇನೆ.'’ ಅಲ್ಲಿ ನೀವು ಅವರಿಗೆ ನಿಮ್ಮ ಬಗ್ಗೆ ಸಾಕಷ್ಟು ಹೇಳಿದ್ದೀರಿ; ಆದರೆ ನಿರ್ದಿಷ್ಟವಾಗಿ ಆ ತಂಡದ ಗುರಿ ಅಥವಾ ಅಗತ್ಯವನ್ನು ಗುರಿಯಾಗಿರಿಸಿಕೊಂಡಿದ್ದೀರಿ.

 INDIAN ARMY RECRUITMENT 2022: 10ನೇ ತರಗತಿಯಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗವಕಾಶ

ನಿಮ್ಮ ಸಾಮರ್ಥ್ಯಗಳು (Capability): ನೀವು ನಿಮ್ಮ ಬಗ್ಗೆ ಸತ್ಯವನ್ನು ಹೇಳಬೇಕು; ನಂಬುವಂತೆ ಹೇಳಬೇಕು, ಮತ್ತು ಇದಕ್ಕೆ ಸಾಕಷ್ಟು ತಯಾರಿಯನ್ನೂ ಮಾಡಬೇಕು. ನಿಮ್ಮ ಬಗ್ಗೆ ನೀವು ಒಳ್ಳೆಯ ಸ್ಟೋರಿ ರೆಡಿ ಮಾಡುವುದು ಎಂದರೆ ನಿಮ್ಮ ವೃತ್ತಿಜೀವನದ ಸಾಧನೆಗಳಲ್ಲಿ ನೀವು ಹೆಮ್ಮೆಪಡುವಂಥದನ್ನು ಹೈಲೈಟ್ ಮಾಡುವುದು. "ಈ ಹಿಂದಿನ ಸಾಮರ್ಥ್ಯಗಳಲ್ಲಿ ಯಾವುದನ್ನು ನೀವು ಇನ್ನೂ ನಿಮ್ಮೊಂದಿಗೆ ಮುಂದುವರಿಸಲು ಬಯಸುತ್ತೀರಿ?"

ವಿವರಿಸಲು ಸಾಮಾನ್ಯ ಸಾಮರ್ಥ್ಯವನ್ನು ಆಯ್ಕೆ ಮಾಡಬೇಡಿ. ನಾನು ಬುದ್ಧಿವಂತ, ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ನಿಜವಾಗಿಯೂ ನಿಮ್ಮನ್ನು ಇತರರಿಂದ ಪ್ರತ್ಯೇಕಿಸುವ ವಿಚಾರ ಏನು ಮತ್ತು ಏಕೆ ಎಂಬುದಕ್ಕೆ ಉತ್ತರಿಸಿ. ಈ ನಿರ್ದಿಷ್ಟ ಕೆಲಸಕ್ಕೆ ಇದು ಏಕೆ ಮುಖ್ಯವಾಗಿದೆ ಎಂದು ವಿವರಿಸಿ. ಉದಾಹರಣೆಗಳು ತುಂಬಾ ಮುಖ್ಯವಾಗುತ್ತವೆ.

ಅವರು ಏನು ಕೇಳುತ್ತಿದ್ದಾರೆ?: ಸಂದರ್ಶಕರಿಗೆ ಆಸಕ್ತಿ ಇರೋದು ನಿಮ್ಮ ಸಂಸಾರದ ಬಗ್ಗೆ, ಬಿಡುವಿನ ಸಮಯದಲ್ಲಿ ನೀವು ಗಾಲ್ಪ್ ಆಡುತ್ತೀರಾ ಅಥವಾ ಚೆಸ್ ಆಡುತ್ತೀರಾ ಎಂಬುದರ ಬಗೆಗಲ್ಲ. 'ನೀವು ನಮಗೆ ಏಕೆ, ಹೇಗೆ ಸಹಾಯ ಮಾಡುವಿರಿ?' ಎಂದೇ ಅದರರ್ಥ. ಅದನ್ನು ಅವರಿಗೆ ನೀವು ಮನದಟ್ಟು ಮಾಡಿಸಬೇಕು.

ಕಂಪನಿ ಬಗ್ಗೆ ತಿಳಿದುಕೊಂಡಿರಿ: ನೀವು ಸಂದರ್ಶನಕ್ಕೆ ತಯಾರಿ ನಡೆಸುವಾಗ ಇಂಟರ್‌ವ್ಯೂ ಮಾಡುತ್ತಿರುವ ಕಂಪನಿಯ ಉದ್ಯೋಗ ವಿವರಣೆಯನ್ನು ಓದಿ, ಕಂಪನಿಯ ಬಗ್ಗೆ ಗೂಗ್ಲಿಂಗ್ ಮಾಡಿ. ಅದರ ಬಗೆಗೆ ಸುದ್ದಿಗಳು ಅಥವಾ ಬ್ಲಾಗ್ ಪೋಸ್ಟ್‌ಗಳಿದ್ದರೆ ಅವನ್ನೂ ಓದಿ. ನೀವು ಹುಡುಕುತ್ತಿರುವುದು ಏನು, ಅವರು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ, ಆ ವಿಷಯಗಳನ್ನು ಸಾಧಿಸುವುದನ್ನು ತಡೆಯುವ ವಿಷಯಗಳು ಯಾವುವು, ಇವನ್ನೆಲ್ ಮೊದಲೇ ತರ್ಕಿಸಿ ಇಟ್ಟುಕೊಂಡಿರಿ.

ಉತ್ತರಿಸಲು ಎಷ್ಟು ಸಮಯ ತೆಗೆದುಕೊಳ್ಳಬೇಕು?: ಗರಿಷ್ಠ ಎಂದರೆ ಒಂದು ನಿಮಿಷ. ಎರಡು ನಿಮಿಷ ಉತ್ತರಿಸಿದರೆ ಅದು ಪ್ರಶ್ನೆಗೆ ಉತ್ತರಕ್ಕಿಂತ ಸ್ವಗತದಂತೆ ಅನಿಸಬಹುದು. ಇದರಲ್ಲಿ ಅಂಥ ಕ್ಲಿಷ್ಟತೆ ಏನೂ ಇಲ್ಲ. ಸಂದರ್ಶಕರು ತುಂಬಾ ಆಸಕ್ತಿ ತೋರಿಸಿದ್ದರೆ ಮೂರು ನಿಮಿಷಕ್ಕೂ ಮುಂದುವರಿಸಬಹುದು.

click me!