MGNREGA ನರೇಗಾ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ತಾರತಮ್ಯ

By Suvarna News  |  First Published Apr 12, 2022, 12:38 PM IST

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದ ಲೈಂಗಿಕ ಅಲ್ಪಸಂಖ್ಯಾತ ಮಹಿಳೆ ಚಾಂದಿನಿ ಎಂಬುವವರು  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಉದ್ಯೋಗ ಕೇಳಿದರೆ ಅಪಮಾನ ಮಾಡಲಾಗುತ್ತಿದೆ ಎಂದಿದ್ದಾರೆ.


ಬೆಂಗಳೂರು(ಏ.12): ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ(Mahatma Gandhi National Rural Employment Guarantee Act )- ಮನರೇಗಾ ಯೋಜನೆಯಡಿ ಉದ್ಯೋಗ ಕೋರುವ ಲೈಂಗಿಕ ಅಲ್ಪಸಂಖ್ಯಾತರು ತಾರತಮ್ಯಕೊಳ್ಳಗಾಗುತ್ತಿದ್ದಾರೆ. 

ಪಂಚಾಯಿತಿಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಗೌರವ ನೀಡಲಾಗುತ್ತದೆ. ಆದರೆ, ಲೈಂಗಿಕ ಅಲ್ಪಸಂಖ್ಯಾತರು ಉದ್ಯೋಗ ಕೇಳಿದರೆ ಅಪಮಾನ ಮಾಡಲಾಗುತ್ತಿದೆ. ಹೊರಗಡೆ ನಿಲ್ಲಿಸಲಾಗುತ್ತಿದೆ. ಕೂಲಿ ಪಡೆಯಲು ಅನೇಕ ಬಾರಿ ಅಲೆಸಲಾಗುತ್ತಿದೆ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದ ಲೈಂಗಿಕ ಅಲ್ಪಸಂಖ್ಯಾತ (sexual minorities) ಮಹಿಳೆ ಚಾಂದಿನಿ ತನ್ನ ಕಥೆಯನ್ನು ಹೇಳುತ್ತಾಳೆ.

Tap to resize

Latest Videos

ರಾಜ್ಯದ ವಿವಿಧೆಡೆ ಮನ್ರೇಗಾದಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 40 ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಿದೆ. ರಸ್ತೆ ನಿರ್ಮಾಣ, ಸರ್ಕಾರಿ ಶಾಲೆಗಳಲ್ಲಿ ಗೋಡೆ ನಿರ್ಮಾಣ, ಕೆರೆಗಳಲ್ಲಿ ಹೂಳೆತ್ತುವುದು ಮತ್ತಿತರ ಉದ್ಯೋಗಗಳಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದಾಗ್ಯೂ, ಲೈಂಗಿಕ ಅಲ್ಜಸಂಖ್ಯಾತ ಮಹಿಳೆಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Bank of Baroda Recruitment 2022 ಕೃಷಿ ಮಾರುಕಟ್ಟೆ ಅಧಿಕಾರಿ ಹುದ್ದೆಗೆ ನೇಮಕಾತಿ

ವಾರದಲ್ಲಿ ಬೆಳಗ್ಗೆ ಆರರಿಂದ ಮಧ್ಯಾಹ್ನದವರೆಗೂ ಆರು ದಿನಗಳ ಕಾಲ ಕೆಲಸ ಮಾಡುತ್ತೇವೆ. ಪ್ರತಿ ದಿನ 289 ರೂ. ಕೂಲಿಯನ್ನು ಸರ್ಕಾರ ನಿಗದಿಪಡಿಸಿದ್ದರೂ, ಇಡೀ ವಾರ ಮಾಡಿದ್ದ ಕೆಲಸಕ್ಕೆ ಕೇವಲ ರೂ. 600 ರಿಂದ 750 ನೀಡಲಾಗುತ್ತಿದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಅಥವಾ ಸದಸ್ಯರನ್ನು ಕೇಳಿದಾಗ ಅವರು ಬೈಯುತ್ತಾರೆ. ಕೆಲವೊಂದು ವೇಳೆ ನಾವು ಮಾಡಿದ್ದ ಕೆಲಸಕ್ಕಾಗಿ ಬೇಡಬೇಕಾದ ಪರಿಸ್ಥಿತಿ ಇದೆ ಎಂದು ಚಾಂದಿನಿ ಹೇಳಿದರು.

ತನ್ನ ಹೆಸರು ಮನರೇಗಾ ಯೋಜನೆಯಡಿ ಸೇರಿ, ಜಾಬ್ ಕಾರ್ಡ್ ನೀಡಿದ್ದರೂ ಇಲ್ಲಿಯವರೆಗೂ ಯಾವುದೇ ಉದ್ಯೋಗ ನೀಡಿಲ್ಲ ಎಂದು  ಹೂವಿನಹಡಗಲಿ ಮತ್ತೋರ್ವ ಮಹಳೆ ರುದ್ರಮ್ಮ (48) ಹೇಳಿದ್ದಾರೆ. ಉದ್ಯೋಗ ಬಯಸಿ ಪಂಚಾಯತ್ ಅಧಿಕಾರಿಗಳನ್ನು ಕೇಳಿದಾಗ ಅಮಾನವೀಯವಾಗಿ ವರ್ತಿಸುತ್ತಾರೆ ಎಂದು ಅವರು ಪಂಚಾಯತ್ ಗಳಲ್ಲಿರುವ ಪರಿಸ್ಥಿತಿ ಕುರಿತು ವಿವರಿಸಿದರು. 

ಮನ್ರೇಗಾದಡಿ ಮನೆ ನಿರ್ಮಾಣಕ್ಕಾಗಿ ಜಾಬ್ ಕಾರ್ಡ್ ಕೇಳಿದ ಮಂಡ್ಯ ಜಿಲ್ಲೆ ಕೀಲಾರ ಗ್ರಾಮದ ಪ್ರಫುಲ್ಲಾ ದೇವಿ, ಪಂಜಾಯತ್ ಕಚೇರಿಗೆ ಹೋದಾಗ ಅಧಿಕಾರಿಗಳು ಬೈಯ್ದು ಕಳುಹಿಸಿದ್ದಾರೆ. ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಕೆಲಸ ಕೇಳಿದರೆ ಹೀಗೆ ಮಾಡ್ತಾರೆ, ಹಳ್ಳಿಗಳಲ್ಲಿ ಹೇಗೆ ಜೀವನ ಸಾಗಿಸುವುದು ಎಂದು ಪ್ರಫುಲ್ಲಾ ದೇವಿ ಕೇಳುತ್ತಾರೆ.

ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸುತ್ತೇನೆ. ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ವ್ಯವಹರಿಸುವಾಗ ಹೆಚ್ಚಿನ ನಿಗಾ ವಹಿಸುವಂತೆ ಅವರಿಗೆ ಸೂಚನೆ ನೀಡುವುದಾಗಿ ಆರ್ ಡಿಪಿಆರ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಹೇಳಿದ್ದಾರೆ. 

Udupi Anganwadi Recruitment 2022: ಅಂಗನವಾಡಿ ಕೇಂದ್ರದ ಖಾಲಿ ಇರುವ ಹುದ್ದೆಗಳಿಗೆ

ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಬೆಸ್ಟ್‌: ಕರ್ನಾಟಕ ರಾಜ್ಯವು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ(Job) ಸೃಷ್ಟಿಸುವಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧ ಕುಡಿಯುವ(Pure Drinking Water) ನೀರಿನ ಸೌಲಭ್ಯ ಕಲ್ಪಿಸಿದ್ದು, ಮನೆ-ಮನೆಗೆ ನಲ್ಲಿಗಳ ಮೂಲಕ ನೀರನ್ನು ಪೂರೈಸಲು ಕ್ರಮ ವಹಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ(Central Government) ಜಲಜೀವನ್‌ ಮಿಷನ್‌ ಉತ್ತೇಜನ ನೀಡಿದೆ. ರಾಜ್ಯವು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಘನ ಮತ್ತು ದ್ರವತ್ಯಾಜ್ಯ ಘಟಕಗಳನ್ನು ಪಂಚಾಯಿತಿಗಳ ಹಂತದಲ್ಲಿ ಸ್ಥಾಪಿಸಲು ಹೆಚ್ಚಿನ ಕ್ರಮವಹಿಸಿರುವುದಾಗಿ ತಿಳಿಸಿದರು.

ಸಂವಿಧಾನದ 73ನೇ ತಿದ್ದುಪಡಿ ಮುಖಾಂತರ 29 ವಲಯಗಳನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದು, ಇವುಗಳಲ್ಲಿ ಅನೇಕ ಚಟುವಟಿಕೆಗಳು ನೇರವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕವು ಆರೋಗ್ಯ ಗ್ರಾಮ, ಮಕ್ಕಳ ಸ್ನೇಹಿ ಪಂಚಾಯಿತಿಗಳಿಗೆ ಒತ್ತು ನೀಡಿದ್ದು, ಇದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಇನ್ನು ನೈಸರ್ಗಿಕ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ 48 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 608 ಕಲ್ಯಾಣಿ ಮತ್ತು ಪುಷ್ಕರಣಿಗಳಿಗೆ ಪುನರ್ಜೀವ ನೀಡಲಾಗಿದೆ. ಸುಮಾರು 300 ಹೊಸ ಕೆರೆಗಳ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗುವುದಾಗಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.
 

click me!