ಸಹಕಾರ ಸಂಘಗಳ ವಿಧೇಯಕಗಳಿಗೆ ಅಂಗೀಕಾರ: ಆರ್.ಅಶೋಕ್ ತೀವ್ರ ವಿರೋಧ

Published : Jul 24, 2024, 01:54 PM ISTUpdated : Jul 24, 2024, 02:09 PM IST
ಸಹಕಾರ ಸಂಘಗಳ ವಿಧೇಯಕಗಳಿಗೆ ಅಂಗೀಕಾರ: ಆರ್.ಅಶೋಕ್ ತೀವ್ರ ವಿರೋಧ

ಸಾರಾಂಶ

ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ವಿರೋಧ ಹಾಗೂ ಸಭಾತ್ಯಾಗದ ನಡುವೆ ರಾಜ್ಯ ಸರ್ಕಾರದಿಂದ ಮೂರು ಮಂದಿ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುವ 'ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ' ಹಾಗೂ 'ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆತಿದೆ. 

ವಿಧಾನಸಭೆ (ಜು.24): ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ವಿರೋಧ ಹಾಗೂ ಸಭಾತ್ಯಾಗದ ನಡುವೆ ರಾಜ್ಯ ಸರ್ಕಾರದಿಂದ ಮೂರು ಮಂದಿ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುವ 'ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ' ಹಾಗೂ 'ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆತಿದೆ. ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡು ವಿಧಾನಪರಿಷತ್‌ನಿಂದ ಕೆಲ ತಿದ್ದುಪಡಿಗಳೊಂದಿಗೆ ಪುನರ್‌ ಪರ್ಯಾಲೋಚನೆಗೆ ಮತ್ತೆ ವಿಧಾನಸಭೆಯಲ್ಲಿ ಮಂಡಿಸಿದ್ದ ಈ ವಿಧೇಯಕಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. 

ಮೊದಲು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಪುನರ್‌ ಪರ್ಯಾಲೋಚನೆಗೆ ಮಂಡಿಸಿ, ವಿಧಾನ ಪರಿಷತ್‌ನಲ್ಲಿ ಕೆಲ ತಿದ್ದುಪಡಿಗಳನ್ನು ಸೂಚಿಸಿದ್ದು, ಸರ್ಕಾರ ಮೂರು ಮಂದಿ ನಾಮನಿರ್ದೇಶನದಲ್ಲಿ ಒಬ್ಬರು ಎಸ್ಸಿ, ಒಬ್ಬರು ಎಸ್ಟಿ ಹಾಗೂ ಒಬ್ಬರು ಸಾಮಾನ್ಯ ವರ್ಗದವರನ್ನು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಪರಿಷತ್ ಸಲಹೆ ಮೇರೆಗೆ ಮೂವರಲ್ಲಿ ಒಬ್ಬರು ಮಹಿಳೆ ಇರಬೇಕು ಎಂದು ಮಾಡಲಾಗಿದೆ. ಜತೆಗೆ ಮೂರು ಮಂದಿಗೂ ಪದಾಧಿಕಾರಿಗಳಾಗಿ ಸ್ಪರ್ಧಿಸಲು ಅಧಿಕಾರ ಇಲ್ಲದಂತೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. 

ವಾಲ್ಮೀಕಿ ನಿಗಮದ ಹಣ ಅಕ್ರಮ: ಇ.ಡಿ. ಅಧಿಕಾರಿಗಳ ವಿರುದ್ಧ ಎಫ್​ಐಆರ್​ಗೆ ಹೈಕೋರ್ಟ್‌ ತಡೆ

ಇದಕ್ಕೆ ಪ್ರತಿಪಕ್ಷನಾಯಕ ಆರ್.ಅಶೋಕ್, ಬಿಜೆಪಿ ಸದಸ್ಯರಾದ ಬಸನಗೌಡಪಾಟೀಲ್ ಯತ್ನಾಳ್, ಆರಗ ಜ್ಞಾನೇಂದ್ರ, ಜೆಡಿಎಸ್‌ನ ಹರೀಶ್ ವಿರೋಧ ವ್ಯಕ್ತಪಡಿಸಿದರು. ಸಹಕಾರ ಸಂಘ, ಸೌಹಾರ್ದ ಸಂಘಗಳಲ್ಲಿ ಮೂರು ಮಂದಿಯನ್ನು ಸರ್ಕಾರ ದಿಂದಲೇ ನಾಮ ನಿರ್ದೇಶನ ಮಾಡಿದರೆ ಅಲ್ಲಿನ ಮತದಾರರ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲದಂತಾ ಗಲಿದೆ. ಎಲ್ಲಾ ಸಂಘಗಳ ಆಡಳಿತ ಕಾಂಗ್ರೆಸ್ ಬೆಂಬಲಿಗರ ಪಾಲಾಗಲಿದೆ. ಸಹಕಾರ ಸೊಸೈಟಿಗಳನ್ನು ಕಾಂಗ್ರೆಸ್ ಪಾಲು ಮಾಡುವ ವಿಧೇಯಕವಿದು. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿ ಸಭಾ ತ್ಯಾಗ ಮಾಡಿದರು. ಇದರ ನಡುವೆಯೇ ಎರಡೂ ವಿಧೇಯಕಗಳಿಗೆ ರಾಜಣ್ಣ ಅಂಗೀಕಾರ ಪಡೆದರು.

ನೀರಾವರಿ ಯೋಜನೆ ಅನುಷ್ಠಾನದಲ್ಲಿ ಉ.ಕಕ್ಕೆ ಅನ್ಯಾಯ: ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ತ್ವರಿತಗತಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ಕುರಿತಂತೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 1,581 ಮೂಲಕ ಸರ್ಕಾರದ ಗಮನ ಸೆಳೆದರು.

ವಿಜಯಪುರ ಜಿಲ್ಲೆಯಲ್ಲಿ 1963 ರಲ್ಲಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ಪ್ರಾರಂಭವಾದ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗೆ, ಕಳೆದ ಆರು ದಶಕಗಳಿಂದ ಅನ್ಯಾಯ ಆಗುತ್ತಲೇ ಬಂದಿದೆ. ಇದರಿಂದ ಉತ್ತರ ಕರ್ನಾಟಕ ಭಾಗ ನೀರಾವರಿಯಿಂದ ವಂಚಿತವಾಗಿದೆ. ಇದು ನಮ್ಮ ಭಾಗದ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಶಾಸಕ ಯತ್ನಾಳ ಅಧಿವೇಶನದಲ್ಲಿ ಅಸಮಧಾನ ವ್ಯಕ್ತಪಡಿಸಿದರು.

ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ: ಪ್ರಿಯತಮನಿಂದಲೇ ಕೃತ್ಯ

ಆಣೆ ಮಾಡಿದ್ರು ಸಾಧ್ಯವಾಗಲಿಲ್ಲ: ರಾಜ್ಯದಲ್ಲಿ ಕೃಷ್ಣಾ ನದಿಯಿಂದ ಶೇ.68 ರಷ್ಟು ನೀರಾವರಿ ವ್ಯವಸ್ಥೆ ಕಲ್ಪಿಸುವ ದೊಡ್ಡ ಯೋಜನೆಯಾದರೆ, ಕಾವೇರಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಕೇವಲ ಶೇ. 12 ರಷ್ಟು ಮಾತ್ರ ನೀರಾವರಿ ವ್ಯವಸ್ಥೆಯಿದೆ. ಆದರೆ, ಅಧಿಕಾರಕ್ಕೆ ಬಂದ ಪ್ರತಿ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೃಷ್ಣೆಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಆಣೆ, ಪ್ರಮಾಣ ಮಾಡಿದರೂ ಏನು ಮಾಡಲು ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!