ಕೇಂದ್ರದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದಮೇಲೆ ನಮ್ಮ ರಾಜ್ಯ ಹೆದ್ದಾರಿಗಳನ್ನು, ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವ ಕೆಲಸ ನಡೆದಿದೆ. ಹೊರದೇಶದಲ್ಲಿರುವ ರೈಲು ಮಾರ್ಗಗಳು, ಬೋಗಿಗಳು ನಮ್ಮಲ್ಲೂ ಬರಬೇಕು ಎನ್ನುವಂತಹ ಕೆಲಸ ಮಾಡಲಾಗಿದೆ. ಸೇನೆಗೆ ಬೇಕಾದ ಮದ್ದುಗುಂಡು ವಿಚಾರದಲ್ಲಿ ಭಾರತ ಮೊದಲಿಗೆ ಬೇರೆಯವರ ಮೇಲೆ ಅವಲಂಬಿತವಾಗಿತ್ತು. ಆದರೆ, ಇದೀಗ ಭಾರತ ಸ್ವಾವಲಂಬಿಯಾಗಿದ್ದು, ಬೇರೆ ದೇಶಗಳಿಗೆ ಮದ್ದುಗುಂಡು ಕೊಡುವಂತಾಗಿದೆ: ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
ವಿಜಯಪುರ(ಮಾ.14): ದೇಶ ಎಲ್ಲ ಕ್ಷೇತ್ರದಲ್ಲಿ ಬೆಳವಣಿಗೆ ಆಗಬೇಕು. ಆರ್ಥಿಕವಾಗಿ ಇದೀಗ 11ನೇ ಸ್ಥಾನದಲ್ಲಿರುವ ನಾವು 3ನೇ ಸ್ಥಾನಕ್ಕೆ ಬರಬೇಕು ಎಂಬುದು ಪ್ರಧಾನಿ ಮೋದಿ ಅವರ ಕನಸು ಆಗಿದೆ. ಅಲ್ಲದೇ 2045ರ ವೇಳೆಗೆ ಪ್ರಪಂಚದ ನಂಬರ್ ಒನ್ ಆಗಬೇಕು ಎಂಬ ಸಂಕಲ್ಪವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ಹಾಗೂ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರೈತರ ವಸತಿ ನಿಲಯ ಕಟ್ಟಡದ ಉದ್ಘಾಟಿಸಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅವರು ಮಾತನಾಡಿದರು. ಸುಮಾರು ₹80 ಲಕ್ಷ ವೆಚ್ಚದಲ್ಲಿ ಎಂಟು ಕೊಠಡಿಗಳುಳ್ಳ ರೈತರ ವಸತಿ ನಿಲಯ ನಿರ್ಮಾಣವಾಗಿದ್ದು, 50 ಜನ ರೈತರು ಏಕಕಾಲಕ್ಕೆ ಬಂದು ಈ ವಸತಿಯಲ್ಲಿದ್ದು ತರಬೇತಿ ಪಡೆಯುವ ಕೆಲಸ ವಸತಿ ನಿಲಯದಲ್ಲಿ ಆಗಲಿದೆ ಎಂದರು.
ವಿಜಯಪುರದಲ್ಲಿ ದೇಶದ 2ನೇ ದೊಡ್ಡ ಪವನ ವಿದ್ಯುತ್ ಘಟಕ: ಸಚಿವ ಎಂ.ಬಿ.ಪಾಟೀಲ್
ಕೇಂದ್ರದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದಮೇಲೆ ನಮ್ಮ ರಾಜ್ಯ ಹೆದ್ದಾರಿಗಳನ್ನು, ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವ ಕೆಲಸ ನಡೆದಿದೆ. ಹೊರದೇಶದಲ್ಲಿರುವ ರೈಲು ಮಾರ್ಗಗಳು, ಬೋಗಿಗಳು ನಮ್ಮಲ್ಲೂ ಬರಬೇಕು ಎನ್ನುವಂತಹ ಕೆಲಸ ಮಾಡಲಾಗಿದೆ. ಸೇನೆಗೆ ಬೇಕಾದ ಮದ್ದುಗುಂಡು ವಿಚಾರದಲ್ಲಿ ಭಾರತ ಮೊದಲಿಗೆ ಬೇರೆಯವರ ಮೇಲೆ ಅವಲಂಬಿತವಾಗಿತ್ತು. ಆದರೆ, ಇದೀಗ ಭಾರತ ಸ್ವಾವಲಂಬಿಯಾಗಿದ್ದು, ಬೇರೆ ದೇಶಗಳಿಗೆ ಮದ್ದುಗುಂಡು ಕೊಡುವಂತಾಗಿದೆ ಎಂದು ಹೇಳಿದರು.
ಸಾವಿರಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ತರಬೇತಿ ಏಕೆ ಬೇಕು ಎಂದರೆ ಹೊಸ ಹೊಸ ತಂತ್ರಜ್ಞಾನಗಳು ಬಂದಾಗ ಅದನ್ನು ತಿಳಿದುಕೊಂಡು ಕೃಷಿಯನ್ನು ಆಧುನಿಕರಣಗೊಳಿಸಬೇಕಾಗಿದ್ದು, ಆ ಕೆಲಸ ಇಂದು ನಮ್ಮ ಸರ್ಕಾರದಿಂದ ಆಗುತ್ತಿದೆ. ವಿದೇಶದಲ್ಲಿ ಅತ್ಯಂತ ಸುಲಭವಾಗಿ ಡ್ರೋಣ ಮೂಲಕ ಔಷಧ, ಗೊಬ್ಬರ ಸಿಂಪರಣೆ ಮಾಡಬಹುದಾಗಿದೆ. ಅಂತಹ ತಾಂತ್ರಿಕತೆಯನ್ನು ನಮ್ಮಲ್ಲೂ ತರಲಾಗಿದೆ ಎಂದಿದ್ದಾರೆ. ಇಂದು ಕೃಷಿ ವಿವಿಗಳಲ್ಲಿ ಶೇ.50ರಷ್ಟು ಯುವತಿಯರು ಬಂದು ಓದುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಕ್ಕಾಗ, ಹಣ ಬಂದಾಗ ಅವರ ಕುಟುಂಬಕ್ಕೆ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿನ ಕೃಷಿ ಮಹಾವಿದ್ಯಾಲಯದಲ್ಲಿ ನೀರಿನ ಸೌಲಭ್ಯವನ್ನು ಕೊಡಲು ಯಾವ ಯಾವ ಇಲಾಖೆಯಿಂದ ಎಷ್ಟು ಖರ್ಚು ಆಗುತ್ತೆ। ಎಲ್ಲಿಂದ ನೀರು ತರಬಹುದು ಎಂದು ಪ್ಲಾನ್ ಮಾಡಿ ವಿವಿಯ ಮುಖ್ಯಸ್ಥರು ಪ್ರಪೋಸಲ್ ರೆಡಿ ಮಾಡಿ ಕಳಿಸಿ ಎಂದು ಸೂಚಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರೈತರ ವಸತಿ ನಿಲಯ ನಿರ್ಮಿಸಿದ್ದು ಬಹಳ ಒಳ್ಳೆಯ ಕೆಲಸವಾಗಿದೆ. ಈ ಭಾಗದಲ್ಲಿ ರೈತರ ಸಮಸ್ಯೆಗಳು ಬಹಳ ಇವೆ. ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಇಲ್ಲಿ ಕಬ್ಬು, ದ್ರಾಕ್ಷಿಯನ್ನು ರೈತರು ಬೆಳೆಯುತ್ತಿದ್ದಾರೆ. ಆದ್ರೆ ದ್ರಾಕ್ಷಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಒಂದು ಕೇಜಿ ಒಣ ದ್ರಾಕ್ಷಿ ಬೆಳೆಯಲು ₹100 ಖರ್ಚಾದರೆ, ₹75 ಮಾತ್ರ ಆದಾಯ ಬರ್ತಿದೆ. ಹೀಗಾಗಿ ಎಂ ಆರ್ ಪಿ ರೇಟ್ ಫಿಕ್ಸ್ ಮಾಡಬೇಕು ಎಂದು ಕೃಷಿ ಸಚಿವೆ ಕರಂದ್ಲಾಜೆಗೆ ಮನವಿ ಮಾಡಿದರು.
ಇನ್ನು ಎಲ್ಲ ಅನುದಾನವನ್ನು ಧಾರವಾಡ ಯುನಿವರ್ಸಿಟಿಗೆ ಕೊಡ್ತಿರಿ, ಅವರು ತೆಗೆದುಕೊಳ್ತಾರೆ, ಆದರೆ, ಇಲ್ಲಿನ ಮಹಾವಿದ್ಯಾಲಯದಲ್ಲಿ ಏನೂ ಅನುದಾನ ಬರ್ತಿಲ್ಲ ಎಂದರು. ಇದರ ಜೊತೆಗೆ ಕೃಷಿಯಲ್ಲಿ ಕೆಲಸ ಮಾಡಲು ಕೆಲಸಗಾರರು ಸಿಗ್ತಿಲ್ಲ, ಹೀಗಾಗಿ ವೈಜ್ಞಾನಿಕತೆಗೆ ಹೆಚ್ಚು ಒತ್ತು ಕೊಟ್ಟು, ಕಡಿಮೆ ಕಾರ್ಮಿಕರ ಮೇಲೆ ಕೆಲಸ ಆಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.ಇನ್ನು ಇಲ್ಲಿನ ಕೃಷಿ ಕಾಲೇಜಿನಲ್ಲಿ ನೀರಿನ ವ್ಯವಸ್ಥೆ ಇಲ್ಲ, ಬೇಗಂ ತಲಾಬ್ ಕೆರೆಯಿಂದ ನೀರು
ಕೊಡಬೇಕು, ವಿಜಯಪುರಕ್ಕೊಂದು ಕೃಷಿ ವಿವಿಯನ್ನು ಮಾಡಿಸಿ ಕೊಡಬೇಕು ಎಂದು ಅವರು ವಿನಂತಿಸಿದರು. ಕೃಷಿ ವಿವಿಯ ಕುಲಪತಿ ಪಿ ಎಲ್ ಪಾಟೀಲ್ ಮಾತನಾಡಿ, ರೈತರಿಗಾಗಿ ಇಲ್ಲಿ ಹಲವಾರು ತರಬೇತಿಗಳು ನಡೆಯುತ್ತಿದ್ದು, ಇದುವರೆಗೂ ಅವರಿಗೆ ಸೂಕ್ತ ವಸತಿ ನಿಲಯ ಇರಲಿಲ್ಲ. ಇದೀಗ 80ಲಕ್ಷ ಅನುದಾನದಲ್ಲಿ 8 ಕೊಠಡಿಗಳುಳ್ಳ ಕಟ್ಟಡ ನಿರ್ಮಾಣ ಆಗಿದೆ.
ವಿವಿ ಆಧೀನದಲ್ಲಿ 2004 ರಿಂದ ಇಲ್ಲಿಯ ವರೆಗೆ ರೈತರಿಗೆ ಕೃಷಿ ಹಾಗೂ ಕೃಷಿಯೇತರ ಉತ್ಪನ್ನಗಳ ಬಗ್ಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಉತ್ತಮ ಬೆಳೆ ಬೆಳೆಯುವುದು, ಕೀಟಬಾಧೆ ನಿಯಂತ್ರಣ, ಮೌಲ್ಯವರ್ಧನೆಗೆ ಆಧ್ಯತೆ, ಮಹಿಳೆಯರ ಸಬಲೀಕರಣ, ರೈತರಿಗೆ ತರಬೇತಿ ಹಾಗೂ ವಿವಿಧ ತಂತ್ರಜ್ಞಾನಗಳನ್ನು ಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಮಹಿಳೆಯರಿಗೆ ಪೆಟ್ರೋಲ್ ಚಾಲಿತ ಔಷಧಿ ಸಿಂಪರಣಾ ಯಂತ್ರಗಳ ವಿತರಣೆ ಹಾಗೂ ರೈತರ ಅನುಕೂಲಕ್ಕಾಗಿ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಲು ಕೃಷಿ ಇಲಾಖೆಯ ಕ್ಯೂ ಆರ್ ಕೋಡ ಬಿಡುಗಡೆ ಮಾಡಿದ ಬಳಿಕ ಅಣಬೆ ಅಹಾರೋತ್ಪನ್ನಗಳ ಬಿಡುಗಡೆಯನ್ನು ಮಾಡಲಾಯಿತು.
ಯಾರೋ ಪಾಕ್ ಪರ ಘೋಷಣೆ ಕೂಗಿದ್ರೆ ನಾಸಿರ್ ಏಕೆ ಹೊಣೆ: ಸಚಿವ ಎಂ.ಬಿ.ಪಾಟೀಲ್
ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಜಯಕುಮಾರ ಹೆಚ್, ಶ್ರೀನಿವಾಸ ಕೊಟ್ಯಾನ್, ಐ ಸಿ ಎ ಆರ್ ನಿರ್ದೇಶಕ ಡಾ. ವಿ ವೆಂಕಟಸುಬ್ರಮಣಿಯನ್, ವಿಸ್ತರಣಾ ನಿರ್ದೇಶಕ ಎಸ್ ಎಸ್ ಅಂಗಡಿ. ಸಹ ವಿಸ್ತರಣಾ ನಿರ್ದೇಶಕ ಆರ್ ಬಿ ಬೆಳ್ಳಿ ಸೇರಿದಂತೆ ಕಾಲೇಜಿನ ವಿಜ್ಞಾನಿಗಳು, ಸಿಬ್ಬಂದಿ, ರೈತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಚಿವೆ ಶೊಭಾ ಕರಂದ್ಲಾಜೆ ಅವರು ರಾಜ್ಯದ ಮೂಲೆ ಮೂಲೆಗೆ ಅಡ್ಡಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಆದ್ರೆ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚು ಕೃಷಿಪ್ರಧಾನ ಜಿಲ್ಲೆ ವಿಜಯಪುರ ಆಗಿದೆ. ಜಗತ್ತಿನಲ್ಲೇ ಅತಿಹೆಚ್ಚು ಉತ್ಕೃಷ್ಟವಾಗಿ ದ್ರಾಕ್ಷಿ, ದಾಳಿಂಬೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳನ್ನು ಬೆಳಯಲಾಗುತ್ತಿದೆ. ಆದ್ರೆ ಮಳೆಗಾಲ, ಬೇಸಿಗೆಕಾಲ, ಚಳಿಗಾಲದೊಂದಿಗೆ ಜಿಲ್ಲೆಯಲ್ಲಿ ಬರಗಾಲ ಬರ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜ್ಞೆ ತಿಳಿಸಿದ್ದಾರೆ.