ರೇಪ್ ಸಂತ್ರಸ್ತೆ ಅಷ್ಟೊತ್ತಿಗೆ ಆ ನಿರ್ಜನ ಪ್ರದೇಶಕ್ಕೆ ಹೋಗ್ಬಾರದಿತ್ತು: ಗೃಹ ಸಚಿವ ವಿವಾದಾತ್ಮಕ ಹೇಳಿಕೆ

By Suvarna News  |  First Published Aug 26, 2021, 3:42 PM IST

* ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣ
* ವಿವಾದಾತ್ಮಕ ಹೇಳಿಕೆ ನೀಡಿದ  ಗೃಹ ಸಚಿವ ಆರಗ ಜ್ಞಾನೇಂದ್ರ
* ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡ್ತಿದ್ದಾರೆ ಗೃಹ ಸಚಿವ
 


ಬೆಂಗಳೂರು, (ಆ.26): ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"

Tap to resize

Latest Videos

undefined

ಮೈಸೂರು ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಆ.26) ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ,. ಆ ಯುವಕ, ಯುವತಿ ಸಂಜೆ 7.30ರ ವೇಳೆಗೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ ಎಂದು ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆ.

ಬೆಚ್ಚಿ ಬೀಳಿಸಿದ ಮೈಸೂರು ಗ್ಯಾಂಗ್ ರೇಪ್ : 'ಶೀಘ್ರ ಆರೋಪಿಗಳ ಪತ್ತೆ '

ಕಾಂಗ್ರೆಸ್‌ನವರು ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ. ಅತ್ಯಾಚಾರ ಆಗಿದ್ದು ಅಲ್ಲಿ, ಆದರೆ ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡ್ತಿದ್ದಾರೆ.  ಅಲ್ಲಿ ಆಗಿರುವುದು ಅಮಾನುಷವಾದ ಕೆಲಸ. ಅದನ್ನು ಮಾನವೀಯ ದೃಷ್ಟಿಯಿಂದ ನೋಡಿ, ಡಿಟೆಕ್ಟ್ ಮಾಡಿ ಅನ್ನಬೇಕು. ಕಾಂಗ್ರೆಸ್​ನವರು ಹಾಗೆ ಮಾಡದೇ ನನ್ನ ಮೇಲೆ ಹರಿಹಾಯುತ್ತಿದ್ದಾರೆ. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದರು.

ಸದ್ಯಕ್ಕೆ ಯುವಕ,ಯುವತಿ ಶಾಕ್​ನಲ್ಲಿ ಇದ್ದಾರೆ. ಅವರ ಸಂಪೂರ್ಣ ಸ್ಟೇಟ್ ಮೆಂಟ್ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಎಂದು ಸಹ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಈ ಮಾತು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನವರು ಗೃಹ ಸಚಿವರ ಮೇಲೆ ರೇಪ್ ಮಾಡ್ತಿದ್ದಾರೆ ಎಂದು ಅವರ ಮನಸ್ಸಿಗೆ ನೋವು ಮಾಡುವುದಕ್ಕೆ ಈ ಮಾತು ಹೇಳಿಲ್ಲ. ತಮಾಷೆ ರೀತಿಯಲ್ಲಿ ಮಾತಾಡಿದ್ದೇನೆ ಎಂದು ಸಮಜಾಯಿಷಿ ನೀಡಿದರು. 

ಇದು ಮೈಸೂರಿನಂತರ ಶಾಂತಿಯುವ ಸುಸಂಸ್ಕೃತರು ವಾಸಿಸುವ ನಾಡು. ಘಟನೆಗೆ ಯಾರು ಕಾರಣ ಅವರನ್ನ ಹಿಡಿಯುತ್ತೇವೆ. 12 ಗಂಟೆಯಲ್ಲಿ FIR ಆಗಿದೆ. ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಹೇಳಿದರು .

ನಾನು ಮೈಸೂರಿಗೆ ಹೋಗುತ್ತಿದ್ದೇನೆ. ಸಭೆ ನಡೆಸಿ ಮಾತಾಡುತ್ತೇನೆ. ಕಾಂಗ್ರೆಸ್ ಅವರು ವಿರೋಧ ಪಕ್ಷದವರಗಿ ಸತ್ಯ ಶೋಧನಾ ಸಮಿತಿ ಮಾಡಲಿ. ಆ ಮೇಲೆ ರಿಯಾಕ್ಟ್ ಮಾಡುತ್ತೇನೆ ಎಂದು ತಿಳಿಸಿದರು.

click me!