ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶ/ ಕರ್ನಾಟಕದ ಮೇಲೆ ಯಾವ ರಾಜಕೀಯ ಪರಿಣಾಮ/ ಬಿಎಸ್ ವೆಐ ಸರ್ಕಾರದ ಆಯಸ್ಸು ಹೆಚ್ಚಿಸಿತೆ ರಿಸಲ್ಟ್?
ಬೆಂಗಳೂರು(ಅ. 24) ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ದೋಸ್ತಿಗಳು ಅಧಿಕಾರ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಆದರೆ ಇನ್ನೊಂದು ಕಡೆ ಹರಿಯಾಣದಲ್ಲಿ ಹಾವು -ಏಣಿ ಆಟ ಮುಂದುವರಿದಿದೆ. ಲೋಕಸಭಾ ಚುನಾವಣೆ ನಂತರ ನಡೆದ ಅತಿ ದೊಡ್ಡ ಚುನಾವಣೆಯ ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರಲಿದೆ?
ಫಲಿತಾಂಶ ರಾಷ್ಟ್ರೀಯ ಬಿಜೆಪಿ ನಾಐಕರನ್ನು ತಲೆ ಕಡೆಸಿಕೊಳ್ಳುವಂತೆ ಮಾಡಿದೆ. ನಾವು ಎಲ್ಲಿ ಎಡವಿದೆವು? ಯಾವ ಅಂಶಗಳು ಕೆಲಸ ಮಾಡಲಿಲ್ಲ ಎಂಬ ಚಿಂತನೆ ಅವರನ್ನು ಕಾಡಬಹುದುದು. ಆದರೆ ಇತ್ತ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಇದು ಒಂದರ್ಥದಲ್ಲಿ ಸಂತಸ ತರುವ ಸುದ್ದಿಯೇ ಆಗಿದೆ. ಹಾಗಾದರೆ ನಿಜಕ್ಕೂ ಬಿಎಸ್ ವೈ ಅವರ ಸಂತಸಕ್ಕೆ ಕಾರಣ ಏನು? ಬಿಎಸ್ ವೈ ಹುದ್ದೆ ಉಳಿಸಿದ ಹರಿಯಾಣ ಸೋಲು ಎಂದು ವಿಶ್ಲೇಷಣೆ ಮಾಡಬಹುದುದೆ?
ನೆರೆ ಪರಿಹಾರ ವಿಳಂಬ: ಬಿಎಸ್ ವೈ ಅಧಿಕಾರ ಸ್ವೀಕರಿಸಿದ ನಂತರ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಬಂದರೂ ಕೇಂದ್ರ ಮಾತ್ರ ಯಾವ ಸಂದರ್ಭದಲ್ಲಿಯೂ ಬಿಎಸ್ ವೈ ಬೆಂಬಲಕ್ಕೆ ನಿಲ್ಲಲೇ ಇಲ್ಲ ಎಂದು ಹೇಳಬಹುದು. ನೆರೆ ಪರಿಹಾರ ವಿಳಂಬವಾಗಲೂ ಇಲ್ಲಿ ಬಿಎಸ್ ವೈ ಇರುವುದೇ ಕಾರಣ ಎಂದು ಹೇಳಲಾಯಿತು. ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದೆ ಇದ್ದಿದ್ದರೆ ಕರ್ನಾಟಕಕ್ಕೆ ನೆರೆ ಪರಿಹಾರ ಸಿಗುವುದು ಇನ್ನಷ್ಟು ದಿನ ವಿಳಂಬ ಆಗುತ್ತಿತ್ತೋ ಏನೋ?
ಬಿಎಸ್ ವೈ ಮತ್ತು ಸಿದ್ದರಾಮಯ್ಯ ಜಂಗೀಕುಸ್ತಿಯಲ್ಲಿ ಗೆದ್ದು ಬೀಗಿದವರು ಯಾರು?
ಚುನಾವಣೆಗೆ ಹೋಗೋಣ: ಚುನಾವಣೋತ್ತರ ಸಮೀಕ್ಷೆಗಳು ಹೇಳಿದಂತೆ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದಿದ್ದರೆ ಕರ್ನಾಟಕ ವಿಧಾನಸಭೆಗೂ ಸದ್ಯದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇತ್ತು. ಬಿಜೆಪಿಯ ಅಗ್ರ ನಾಯಕರು ಕರ್ನಾಟಕ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗಿ ಮತ್ತೆ ಪೂರ್ಣ ಬಹುಮತ ಪಡೆದುಕೊಂಡು ಅಧಿಕಾರ ಹಿಡಿಯುವ ಆಲೋಚನೆಯಲ್ಲಿದ್ದರು. ಆದರೆ ಸದ್ಯದ ಸ್ಥಿತಿಯಲ್ಲಿ ಬಿಜೆಪಿ ವಿಧಾನಸಭೆ ವಿಸರ್ಜಿಸುವ ಸಾಹಸಕ್ಕೆ ಕೈ ಹಾಕುವುದು ಅನುಮಾನ.
ಅನರ್ಹ ಶಾಸಕರ ವಿಚಾರ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದ್ದರೂ ರಾಜೀನಾಮೆ ಕೊಟ್ಟು ದೋಸ್ತಿ ಸರ್ಕಾರ ಬಿಳಲು ಕಾರಣರಾದ ಅನರ್ಹ ಶಾಸಕರಿಗೆಂದು ಅರ್ಧ ಸಂಪುಟ ಖಾಲಿ ಇರಿಸಿಕೊಳ್ಳಲಾಗಿದೆ. ಇದು ಸಹಜವಾಗಿಯೇ ಮೂಲ ಬಿಜೆಪಿಗರಲ್ಲಿ ಒಂದು ಹಂತದ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತೆ ಇಲ್ಲ.
ಆಯಕಟ್ಟಿನ ಜಾಗದಲ್ಲಿ ಯಾರು? ಇನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳೀನ್ ಕುಮಾರ್ ಕಟೀಲ್ ಮತ್ತು ವಿಧಾನಸಭೆಯ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಆಯ್ಕೆ ಮಾಡಿದ್ದು ಒಂದರ್ಥದಲ್ಲಿ ಕೇಂದ್ರದ ಕೈಚಳಕ ಎಂದೇ ಭಾವಿಸಲಾಗಿದೆ.