ಈ ಬಾರಿ 280 ಮಂದಿ ಮೊದಲ ಸಲ ಲೋಕಸಭೆಗೆ : ಶೇ.46ರಷ್ಟು ಹೊಸ ಸಂಸದರ ಮೇಲಿದೆ ಕ್ರಿಮಿನಲ್‌ ಕೇಸ್

By Kannadaprabha News  |  First Published Jun 7, 2024, 9:16 AM IST

ಲೋಕಸಭೆಗೆ ಆಯ್ಕೆಯಾದ 543 ಸದಸ್ಯರಲ್ಲಿ 251 ಅಂದರೆ ಶೇ. 46 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ ಇಲ್ಲಿಯವರೆಗೆ 27 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. 


ನವದೆಹಲಿ: ಲೋಕಸಭೆಗೆ ಆಯ್ಕೆಯಾದ 543 ಸದಸ್ಯರಲ್ಲಿ 251 ಅಂದರೆ ಶೇ. 46 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ ಇಲ್ಲಿಯವರೆಗೆ 27 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಈ ಪ್ರಮಾಣ 2004ರಲ್ಲಿ 124, 2009ರಲ್ಲಿ 162 ಮತ್ತು 2014ರಲ್ಲಿ 185 ಇತ್ತು ಎಂದು ಎಡಿಆರ್‌ ವರದಿ ತಿಳಿಸಿದೆ. ಈ ಬಾರಿ ಆಯ್ಕೆಯಾದ 251 ಸಂಸದರಲ್ಲಿ 170 ಮಂದಿ ಗಂಭೀರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಈ ಪ್ರಮಾಣ 2009ರಲ್ಲಿ 76, 2014ರಲ್ಲಿ 112 ಮತ್ತು 2019ರಲ್ಲಿ 159 ಇತ್ತು ಎಂದು ವರದಿ ಹೇಳಿದೆ. 

ಲೋಕಸಭೆಗೆ 41 ಪಕ್ಷಗಳ ಸದಸ್ಯರು ಆಯ್ಕೆ

Tap to resize

Latest Videos

undefined

ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ 41 ಪಕ್ಷಗಳ ಸದಸ್ಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ 36 ಪಕ್ಷಗಳ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದರು. ರಾಷ್ಟ್ರೀಯ ಪಕ್ಷಗಳಿಂದ 346, ಪ್ರಾದೇಶಿಕ ಪಕ್ಷಗಳಿಂದ 179, ಮಾನ್ಯತೆ ಇಲ್ಲದ ಪಕ್ಷಗಳಿಂದ 11 ಹಾಗೂ 7 ಮಂದಿ ಪಕ್ಷೇತರರು ಸಂಸತನ್ನು ಪ್ರವೇಶಿಸಿದ್ದಾರೆ. 2009 ರಿಂದ 2024 ರವರೆಗೆ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಶೇ.104 ರಷ್ಟು ಏರಿಕೆಯಾಗಿದೆ ಎಂದು ಸಂಶೋಧನಾ ವರದಿ ತಿಳಿಸಿದೆ.

ನಿಮ್ಮ ಸಂಸದರು ಓದಿದ್ದೆಷ್ಟು? ಅಮೆರಿಕದಲ್ಲೂ ಓದಿದವ್ರು, 7ನೇ ಕ್ಲಾಸೂ ಪಾಸಾದವ್ರೂ ಇದಾರೆ!


ಈ ಬಾರಿಯ ಚುನಾವಣೆಯಲ್ಲಿ ಒಟ್ಟು 751 ಪಕ್ಷಗಳು ಭಾಗವಹಿಸಿದ್ದವು. ಅದೇ ರೀತಿ 2019 ರಲ್ಲಿ 677, 2014 ರಲ್ಲಿ 464 ಮತ್ತು 2009 ರಲ್ಲಿ 368 ಪಕ್ಷಗಳು ಚುನಾವಣಾ ಕಣದಲ್ಲಿದ್ದವು. ಚುನಾವಣೆಯಲ್ಲಿ ಸ್ಪರ್ಧಿಸಿರುವ 8,337 ಅಭ್ಯರ್ಥಿಗಳ ಪೈಕಿ ರಾಷ್ಟ್ರೀಯ ಪಕ್ಷಗಳಿಂದ 1,333, ಪ್ರಾದೇಶಿಕ ಪಕ್ಷಗಳಿಂದ 532, ಮಾನ್ಯತರ ಇಲ್ಲದ ಪಕ್ಷಗಳಿಂದ 2,580 ಮತ್ತು 3,915 ಸ್ವತಂತ್ರ ಅಭ್ಯರ್ಥಿಗಳು ಇದ್ದಾರೆ.

ಲೋಕಸಭಾ ಸದಸ್ಯರ ಸರಾಸರಿ ವಯಸ್ಸು 56!

ನವದೆಹಲಿ: ಈ ಬಾರಿ ಸಂಸತ್‌ಗೆ ಆಯ್ಕೆಯಾದ ಸದಸ್ಯರ ಸರಾಸರಿ ವಯಸ್ಸು 56 ವರ್ಷ. ಇದು ಕಳೆದ ಲೋಕಸಭೆಗೆ ಆಯ್ಕೆಯಾಗಿದ್ದ ಸರಾಸರಿ ವಯಸ್ಸಾದ 59ಕ್ಕಿಂತ ಕಡಿಮೆ ಇದೆ ಎಂದು ವರದಿಯೊಂದು ಹೇಳಿದೆ.ಒಟ್ಟು 543 ಸದಸ್ಯರ ಪೈಕಿ ಶೇ.11ರಷ್ಟು ಸದಸ್ಯರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಶೇ.38 ರಷ್ಟು ಸದಸ್ಯರು 41 ರಿಂದ 55 ವರ್ಷದ ಅಸುಪಾಸಿನವರು. ಶೇ.52 ರಷ್ಟು ಜನರು 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಈ ಬಾರಿ ಆಯ್ಕೆಯಾದವರ ಪೈಕಿ ಸಮಾಜವಾದಿ ಪಕ್ಷದ ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಹಾಗೂ ಎಲ್‌ಜಿಪಿಯ ಚೌಧರಿ 25 ವರ್ಷದವರಾಗಿದ್ದು ಅತಿ ಕಿರಿಯ ಸಂಸದರಾಗಿದ್ದಾರೆ. 82 ವರ್ಷದ ಡಿಎಂಕೆ ಸಂಸದ ಟಿ.ಆರ್ ಬಾಲು ಅತಿ ಹಿರಿಯ ಸಂಸದರಾಗಿದ್ದಾರೆ.

ಬಿಜೆಪಿ-ಜೆಡಿಎಸ್ ಪಕ್ಷದವರು ಒಟ್ಟಾಗಿ ಕೆಲಸ ಮಾಡಿರೋದ್ರಿಂದ ಗೆಲುವು ಸಿಕ್ಕಿದೆ: ನೂತನ ಸಂಸದ ಮಲ್ಲೇಶ್​ ಬಾಬು

280 ಮಂದಿ ಮೊದಲ ಸಲ ಲೋಕಸಭೆಗೆ ಆಯ್ಕೆ

ನವದೆಹಲಿ: 18ನೇ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಆಯ್ಕೆಯಾದ 543 ಮಂದಿ ಸಂಸದರಲ್ಲಿ 280 ಮಂದಿ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ಕಳೆದ ಬಾರಿಯ ಈ ಪ್ರಮಾಣ 267 ಇತ್ತು.

ಉಳಿದ 263 ಮಂದಿ ಈ ಹಿಂದೆ ಸದಸ್ಯರಾಗಿ ಸೇವೆ ಸಲ್ಲಿಸಿದವರೇ ಆಯ್ಕೆಯಾಗಿದ್ದಾರೆ. ಇನ್ನು 16 ಸಂಸದರು ರಾಜ್ಯಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದು, ಒಬ್ಬರು ಲೋಕಸಭೆಯಲ್ಲಿ ಏಳು ಬಾರಿ ಸೇವೆ ಸಲ್ಲಿಸಿದ್ದಾರೆ. ಪುನರಾಯ್ಕೆಯಾದ ಸಂಸದರಲ್ಲಿ ಎಂಟು ಮಂದಿ ತಮ್ಮ ಕ್ಷೇತ್ರವನ್ನು ಬದಲಾಯಿಸಿದ್ದಾರೆ. ಒಬ್ಬರು ಎರಡು ಕ್ಷೇತ್ರಗಳಿಂದ ಮರು ಆಯ್ಕೆಯಾಗಿದ್ದಾರೆ. 53 ಸಚಿವರ ಪೈಕಿ 35 ಮಂದಿ ಮಾತ್ರ ಮರು ಆಯ್ಕೆಯಾಗಿದ್ದಾರೆ.
 

click me!