ಹಿಂದೂಗಳ ಕೈಗೆ ಕಲ್ಲು ಬಂದರೆ ಮುಸ್ಲಿಂರಿಗೆ ಉಳಿಗಾಲ ಇರಲ್ಲ: ಪ್ರತಾಪ್ ಸಿಂಹ

By Sathish Kumar KHFirst Published Sep 23, 2024, 1:11 PM IST
Highlights

ಮುಸ್ಲಿಮರೇ ನೀವಿನ್ನೂ ಚಂದ್ರನನ್ನು ನೋಡಿ ಆರಾಧಿಸಿದ್ತೀರಿ, ಆದ್ರೆ ನಾವು ಚಂದ್ರನ ಮೇಲೆ ಕಾಲಿಟ್ಟಿದ್ದೇವೆ . ಒಂದು ವೇಳೆ ಹಿಂದೂಗಳ ಕೈಗೆ ಕಲ್ಲು ಬಂದರೆ ಮುಸ್ಲಿಮರಿಗೆ ಉಳಿಗಾಲ ಇರುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ. 

ಮೈಸೂರು (ಸೆ.23): ಕರ್ನಾಟಕದಲ್ಲಿ ಗಣೇಶೋತ್ಸವನ್ನು ವ್ಯವಸ್ಥಿತವಾಗಿ ಮುಗಿಸುವ ಪ್ಲಾನ್ ನಡೆದಿದೆ. ಮುಸ್ಲಿಮರೇ ಹಿಂದೂಗಳನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಹಿಂದೂಗಳಿಗೆ ಆಕ್ರಮಣ ಬರಲ್ಲ ಅಂದು ಕೊಳ್ಳಬೇಡಿ. ಮುಸ್ಲಿಮರೇ ನೀವು ಇನ್ನೂ ಚಂದ್ರನ ಆರಾಧನೆ ಮಾಡ್ತಿದ್ದಿರಿ. ನಾವು ಚಂದ್ರನ ಮೇಲೆಯೆ ಹೋಗಿ ಬಂದಿದ್ದೇವೆ ನೆನಪಿರಲಿ. ಹಿಂದೂಗಳ ಕೈಗೆ ಕಲ್ಲು ಬಂದರೆ ಮುಸ್ಲಿಮರೆ ನಿಮಗೆ ಉಳಿಗಾಲ ಇರಲ್ಲ. ನೀವು ಹದ್ದುಬಸ್ತಿನಲ್ಲಿರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಗಣೇಶೋತ್ಸವದ ವೇಳೆ ಹಿಂದೂಗಳನ್ನು ಹತ್ಯೆ ಮಾಡುವ ಸಂಚಿತ್ತು ಎಂದು ಪೊಲೀಸರೆ ಹೇಳಿದ್ದಾರೆ. ರಾಜ್ಯ ಸರಕಾರ ಕುಮ್ಮಕಿನಿಂದ ಮುಸ್ಲಿಂರು ನಡೆಸುತ್ತಿರುವ ವ್ಯವಸ್ಥಿತ ದಾಳಿ ಇದು. ಗಲಭೆ ಹೆಸರಿನಲ್ಲಿ ಗಣೇಶೋತ್ಸವ ನಿಲ್ಲಿಸಲು ವ್ಯವಸ್ಥಿತ ಪ್ಲಾನ್ ಸಿದ್ದವಾಗುತ್ತಿದೆ. ಕರ್ನಾಟಕದಲ್ಲಿ ಗಣೇಶೋತ್ಸವನ್ನು ವ್ಯವಸ್ಥಿತವಾಗಿ ಮುಗಿಸುವ ಪ್ಲಾನ್ ನಡೆದಿದೆ ಎಂದು ಕಿಡಿಕಾರಿದ್ದಾರೆ.

Latest Videos

ರಾಜ್ಯಪಾಲರ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿಲ್ಲ: ಗೃಹ ಸಚಿವ ಪರಮೇಶ್ವರ್

ಮುಸ್ಲಿಮರೇ ಹಿಂದೂಗಳನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಹಿಂದೂಗಳಿಗೆ ಆಕ್ರಮಣ ಬರಲ್ಲ ಅಂದು ಕೊಳ್ಳಬೇಡಿ. ಮುಸ್ಲಿಮರೇ ನೀವಿನ್ನೂ ಚಂದ್ರನ ಆರಾಧನೆಯನ್ನು ಮಾಡುತ್ತಿದ್ದೀರಿ. ಆದರೆ, ನಾವು ಚಂದ್ರನ ಮೇಲೆಯೆ ಹೋಗಿ ಬಂದಿದ್ದೇವೆ ನೆನಪಿರಲಿ. ಹಿಂದೂಗಳ ಕೈ ಗೆ ಕಲ್ಲು ಬಂದರೆ ಮುಸ್ಲಿಮರಿಗೆ ಉಳಿಗಾಲ ಇರಲ್ಲ. ಇದನ್ನು ಅರಿತುಕೊಂಡು ಎಚ್ಚರಿಕೆಯಿಂದ ಹದ್ದುಬಸ್ತಿನಲ್ಲಿ ಇರಿ ಎಂದರು. ತಿರುಪತಿ ಲಡ್ಡು ವಿಚಾರದ ಬಗ್ಗೆ ಮಾತನಾಡಿ, ಜಮ್ಮು ಕಾಶ್ಮೀರ ಮುಸ್ಲಿಂರ ಕೈಗೆ ಹೋಗ್ತಿದ್ದಂತೆ ಹಿಂದೂಗಳನ್ನು ಅಲ್ಲಿಂದ ಓಡಿಸಲಾಯಿತು. ಆಂಧ್ರದಲ್ಲಿ ರೆಡ್ಡಿ ಎಂಬ ಕ್ರೈಸ್ತನ ಕೈಗೆ ಸರಕಾರ ಸಿಕ್ಕ ಕೂಡಲೇ ತಿರುಪತಿ ಲಡ್ಡು ಹಂದಿ‌ ಕೊಬ್ಬು ಹಾಕಲಾಗಿದೆ. ಮುಸ್ಲಿಮರು, ಕ್ರಿಶ್ಚಿಯನ್ನರ ಕೈಗೆ ಹೀಗೆ ಒಂದೊಂದೆ ರಾಜ್ಯ ಹೋಗಿ ಬಿಟ್ಟರೆ ಹಿಂದುಗಳು ದೇಶ ಬಿಡಬೇಕಾಗುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಎಂದಿನಂತೆಯೇ ಈ ವರ್ಷವೂ ಮಹಿಷಾ ದಸರಾ ನಡೆಯಲು ಬಿಡಲ್ಲ. ಮಹಿಷನ ಮೇಲೆ ನಂಬಿಕೆ ಇದ್ದರೆ ಮನೆಯಲ್ಲೆ ಪೂಜೆ ಮಾಡಿಕೊಳ್ಳಿ. ಹಿಂದೂ ಸಮಾಜವಾಗಿ ನಾವೆಲ್ಲಾ ಒಟ್ಟಾಗಿ ಇರೋಣ. ಮಹಿಷಾ ದಸರಾ ಹೆಸರಿನಲ್ಲಿ ಒಡಕು ಮೂಡಿಸಿಕೊಳ್ಳುವುದು ಬೇಡ. ಮುಸ್ಲಿಮರು ಮಹಿಷನನ್ನು ನಂಬಲ್ಲ. ಮುಂದೆ ಒಂದು ದಿನ ಮಹಿಷನ ಮೆರವಣಿಗೆ ಮೇಲೂ ಮುಸ್ಲಿಮರು ಕಲ್ಲು ಎಸೆಯುತ್ತಾರೆ. ಮಹಿಷಾ ದಸರಾ ಮಾಡಲು ಚಾಮುಂಡಿ ಬೆಟ್ಟ ಸರಿಯಾದ ಜಾಗವಲ್ಲ. ಮನೆಗಳಲ್ಲಿ ಬೇಕಾದರೆ ಮಹಿಷಾ ಫೋಟೋ ಇಟ್ಟುಕೊಳ್ಳಿ ಎಂದರು.

ಕುಮಾರಣ್ಣನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ಜನರಿಗಾಗಿ: ಡಿ.ಕೆ.ಶಿವಕುಮಾರ್ ವಾಗ್ದಾಳಿ

ಮಹಿಷನನ್ನು ಪೂಜೆ ಮಾಡುವವರಿಗೆ ಅವನ ಥರಹದ ಮಗುವೆ ಹುಟ್ಟಲಿ ಎಂದು ಪೂಜೆ ಮಾಡಿಕೊಳ್ಳಿ. ಹಿಂದೂ ಸಮಾಜ ಒಡೆಯುವುದನ್ನು ಬಿಟ್ಟುಬಿಡಿ. ದಸರಾ ಬಂದಾಗ ಅಪಸ್ವರ ಬೇಡ. ಕರ್ಕಶ ಧ್ವನಿ ಮಾಡುವುದನ್ನು ಬಿಡಿ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಮಾಡ್ತಿವಿ ಅಂದರೆ ಚಾಮುಂಡಿ ಭಕ್ತರು ಕೂಡ ಅಂದೇ ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತಾ ಚಾಮುಂಡಿ ಭಕ್ತರ ಕೈ ಮೇಲಾಗುತ್ತಾ ನೋಡೇ ಬಿಡೋಣ. ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧನೆ  ಆದರೆ ಚಾಮುಂಡಿ ಬೆಟ್ಟದಲ್ಲಿ ಅಲ್ಲ. ಇದಕ್ಕೆ ಚಾಮುಂಡಿ ಭಕ್ತರು ಅವಕಾಶ ಮಾಡಿಕೊಡಲ್ಲ ಎಂದು ಹೇಳಿದರು.

click me!