ಸುಶಾಂತ್​ ಸಿಂಗ್ ಮ್ಯಾನೇಜರ್​ ದಿಶಾ ನಿಗೂಢ ಸಾವಿಗೆ ಮರುಜೀವ! ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ

By Suchethana DFirst Published Jul 26, 2024, 3:25 PM IST
Highlights

ನಟ ಸುಶಾಂತ್​ ಸಿಂಗ್ ನಿಗೂಢ ಸಾವಿನ ಕೆಲವೇ ದಿನಗಳ ಮುಂಚೆ ಅವರ ಮ್ಯಾನೇಜರ್​ ದಿಶಾ ಸಾಲಿಯಾನ ಅವರ ಸಾವಿನ ಕುರಿತು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ.  ಏನಿದು ವಿಷಯ?
 

ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಂತೆಯೇ ಅವರ ಮ್ಯಾನೇಜರ್​ ಆಗಿದ್ದ ದಿಶಾ ಸಾಲಿಯಾನ್ ನಿಗೂಢ ಸಾವಿನ ಕುರಿತು ಇದುವರೆಗೂ ಯಾವುದೇ ಸ್ಪಷ್ಟತೆ ಇಲ್ಲ. 2020ರ ಜೂನ್​ 8ರಂದು  ಮುಂಬೈನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ದಿಶಾ ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಾದರೂ ಇದುವರೆಗೂ ಈ ಸಾವು ನಿಗೂಢವಾಗಿಯೇ ಉಳಿದಿದೆ. ಈ ಸಾವಿನ ಕುರಿತು ಇನ್ನಷ್ಟು ನಿಗೂಢತೆ ಹುಟ್ಟಲು ಕಾರಣ, ದಿಶಾ ಅವರು ಈ ರೀತಿ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಅಂದರೆ  ಜೂನ್ 14 ರಂದು, ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಎರಡೂ ಸಾವುಗಳ ಬಗ್ಗೆ ಅಗೆದಷ್ಟೂ ಬಗೆದಷ್ಟೂ ಅನುಮಾನಗಳೇ ಹುಟ್ಟಿಕೊಳ್ಳುತ್ತಿವೆ. 

 ಉಡುಪಿಯಲ್ಲಿ ಜನಿಸಿದ ದಿಶಾ ಸಾಲಿಯಾನ್ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದರು. ಅವರು ವರುಣ್ ಶರ್ಮಾ, ಸುಶಾಂತ್ ಸಿಂಗ್ ರಜಪೂತ್, ಭಾರತಿ ಸಿಂಗ್ ಅವರಂತಹ ಜನಪ್ರಿಯ ನಟರೊಂದಿಗೆ ಕೆಲಸ ಮಾಡಿದರು. ಇದಲ್ಲದೆ, ಆಕೆ ಅನೇಕ ಜಾಹೀರಾತು ಏಜೆನ್ಸಿಗಳೊಂದಿಗೆ ಸಂಬಂಧ ಹೊಂದಿದ್ದರು. ಆಕೆ ಕಿರುತೆರೆ ನಟ ರೋಹನ್ ರಾಯ್ ಜೊತೆ ಡೇಟಿಂಗ್ ಮಾಡುತ್ತಿದ್ದು ಸಾವಿಗೆ ಕೆಲವು ತಿಂಗಳ ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ಏಕಾಏಕಿ ಸಾವಿನ ಹಿಂದೆ ಆಗಿನ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರ ಹೆಸರು ಕೇಳಿಬಂದಿತ್ತು.   ದಿಶಾ ಸಾಲಿಯಾನ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ವಿರುದ್ಧ ತನಿಖೆಗೆ ಹಲವು ಶಾಸಕರು ಒತ್ತಾಯಿಸಿದ್ದರು. ಎಸ್​ಐಟಿ ತನಿಖೆ  ಕೂಡ ನಡೆಸಿತ್ತು. ಆದರೆ ದಿಶಾ ಅವರ ಸಾವಿನಲ್ಲಿ ಆರೋಪಿಗಳಿಗೆ ಎಸ್​ಐಟಿ ಕ್ಲೀನ್​ ಚಿಟ್​ ನೀಡಿತ್ತು. 

Latest Videos

ಸಚಿವನೊಂದಿಗೆ ಪತ್ನಿ ಅಕ್ರಮ ಸಂಬಂಧ: ಜೋಡಿ ಕೊಲೆ ಮಾಡಿದ್ದ ಸಂಜಯ್​ ದತ್​! ನಟನಿಂದಲೇ ರಿವೀಲ್

ಇವೆಲ್ಲವುಗಳ ನಡುವೆಯೇ, ಇದೀಗ ಇದೇ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್‌ಸಿಪಿ (ಎಸ್‌ಸಿಪಿ) ನಾಯಕ ಅನಿಲ್ ದೇಶಮುಖ್ ಅವರು  ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ, ಸುಳ್ಳು ಆರೋಪಗಳ ಮೂಲಕ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದಿತ್ಯ ಠಾಕ್ರೆ ಅವರು, ದಿಶಾ ಸಾಲಿಯಾನ್ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ಬಾಲ್ಕನಿಯಿಂದ ಎಸೆದಿದ್ದಾರೆ ಎಂದು ಸುಳ್ಳು ಅಫಿಡವಿಟ್ ನೀಡಲು ನನ್ನನ್ನು ಕೇಳಲಾಯಿತು ಎಂದು ಅವರು ಆರೋಪಿಸಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಮಗನ ವಿರುದ್ಧ  ಸುಳ್ಳನ್ನು ರೂಪಿಸಲು ಒತ್ತಾಯಿಸಲಾಯಿತು ಎಂದಿದ್ದಾರೆ.  ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲಕ್ಕೆ  ಕಾರಣವಾಗಿದೆ.  

“ಮೂರು ವರ್ಷಗಳ ಹಿಂದೆ ದೇವೇಂದ್ರ ಫಡ್ನವೀಸ್ ಒಬ್ಬ ವ್ಯಕ್ತಿಯನ್ನು ನನ್ನ ಬಳಿಗೆ ಕಳುಹಿಸಿ ನಾಲ್ಕು ಅಫಿಡವಿಟ್‌ಗಳನ್ನು ಬರೆಯುವಂತೆ ಹೇಳಿದ್ದರು. ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಅಜಿತ್ ಪವಾರ್ ಮತ್ತು ಅನಿಲ್ ಪರಾಬ್ ವಿರುದ್ಧ ಲಿಖಿತ ಆರೋಪಗಳನ್ನು ಮಾಡಲು ನನ್ನನ್ನು ಕೇಳಲಾಯಿತು. MVA ಮೈತ್ರಿಕೂಟದ ಪ್ರಮುಖ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಒತ್ತಡ ಹೇರಲಾಗಿದೆ ಎಂದಿದ್ದಾರೆ. ನಾನು ಇದಕ್ಕೆಲ್ಲಾ ತಲೆಬಾಗಲಿಲ್ಲ ಮತ್ತು ಅದಕ್ಕಾಗಿಯೇ ಇಡಿ ಮತ್ತು ಸಿಬಿಐ ಅನ್ನು ನನ್ನ ಬಳಿ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.  

ನಮ್​ ಜೊತೆ ರೊಮಾನ್ಸ್​ ಮಾಡಿ ನಂತ್ರ ಮಾತಾಡು... ಭಾರತದ ಯುವಕರ ವಿರುದ್ಧ ಹೇಳಿದಾಕೆಗೆ ಓಪನ್​ ಚಾಲೆಂಜ್​!

ಆದರೆ ಈ ಆರೋಪಗಳನ್ನು ಫಡ್ನವಿಸ್​ ತಳ್ಳಿಹಾಕಿದ್ದಾರೆ. ಆರೋಪಗಳಿಗೆ ಪ್ರತಿಕ್ರಿಯಿಸಿದ ಫಡ್ನವಿಸ್, ನಾನು ಎಂದಿಗೂ ಈ ರೀತಿಯ ರಾಜಕೀಯದಲ್ಲಿ ತೊಡಗುವುದಿಲ್ಲ. ನಾನು ಅಂತಹ ರಾಜಕೀಯ ಮಾಡುವುದಿಲ್ಲ. ನಾನು ಯಾರಿಗೂ ಅನಗತ್ಯ ತೊಂದರೆ ಕೊಡುವುದಿಲ್ಲ. ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ಸಚಿನ್ ವಾಝೆ ವಿರುದ್ಧ ಕೆಟ್ಟ ಮಾತುಗಳನ್ನಾಡುತ್ತಿರುವ ವಿಡಿಯೋ ಕ್ಲಿಪ್‌ಗಳನ್ನು ಅವರ ಪಕ್ಷದ ನಾಯಕರು ನನಗೆ ನೀಡಿದ್ದಾರೆ ಎಂದು ನಾನು ದೇಶಮುಖರಿಗೆ ಹೇಳಲು ಬಯಸುತ್ತೇನೆ. ಯಾರಾದರೂ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದರೆ, ನಾನು ಸುಮ್ಮನಿರುವುದಿಲ್ಲ ಮತ್ತು ಆ ತುಣುಕುಗಳನ್ನು ವೈರಲ್ ಮಾಡುತ್ತೇನೆ. ನಾನು ಎಂದಿಗೂ ಪುರಾವೆಗಳಿಲ್ಲದೆ ಮಾತನಾಡುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹೇಳಿದ್ದಾರೆ.

click me!