ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿದೆ. ಕೇರಳ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಪಿಎಫ್‌ಐನಂತಹ ಸಂಘಟನೆಗಳು ತರಬೇತಿ ಪಡೆದು ಕೊಲ್ಲುವ ರೀತಿ ಇದು. ಅಂದೇ ಈ ವಿಚಾರವನ್ನು ಕೇಂದ್ರ ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುಳ್ಯ (ಆ.01): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿದೆ. ಕೇರಳ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಪಿಎಫ್‌ಐನಂತಹ ಸಂಘಟನೆಗಳು ತರಬೇತಿ ಪಡೆದು ಕೊಲ್ಲುವ ರೀತಿ ಇದು. ಅಂದೇ ಈ ವಿಚಾರವನ್ನು ಕೇಂದ್ರ ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಭಾನುವಾರ ಪ್ರವೀಣ್ ಮನೆಗೆ ಭೇಟಿ ನೀಡಿದ್ದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಮ್ಮ ಒಂದು ತಿಂಗಳ ಸಂಬಳದ ಚೆಕ್ ಹಸ್ತಾಂತರಿಸಿದರಲ್ಲದೆ, ಬೆಂಗಳೂರಿನ ಸಂಘ ಸಂಸ್ಥೆಗಳ ನೆರವಿನೊಂದಿಗೆ .5 ಲಕ್ಷ ನಗದು ನೀಡಿದರು.
ಈ ವೇಳೆ ಪಿಎಫ್‌ಐ ನಿಷೇಧದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಈ ಹಿಂದೆ ಸಿಮಿ ಸಂಘಟನೆ ಇತ್ತು. ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಅದನ್ನು ನಿಷೇಧ ಮಾಡಲಾಗಿದೆ. ಪಿಎಫ್‌ಐ ನಿಷೇಧ ಮಾಡಿದರೆ ಅದು ಕೋರ್ಟ್‌ನಲ್ಲಿ ನಿಲ್ಲಬೇಕು. ಅದಕ್ಕಾಗಿ ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ‘ಪ್ರವೀಣ್ ನಿಮಗೆ ರಕ್ಷೆ ಕಟ್ಟಿದ್ದ ಮೇಡಂ, ಆದರೆ ಅವರನ್ನೇ ಉಳಿಸಿಕೊಳ್ಳಲಾಗಲಿಲ್ಲ’ ಎಂದು ಸಂಬಂಧಿಕರು ಹೇಳಿದಾಗ ಸಚಿವೆ ಬೇಸರವಾದರು.
ಪ್ರವೀಣ್ ಹತ್ಯೆ ಬಳಿಕ 2 ದಿನ ನನಗೆ ಊಟ ಸೇರಲಿಲ್ಲ: ಗೃಹ ಸಚಿವ ಆರಗ
ಕೇರಳ ಮಾದರಿಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ: ಪ್ರವೀಣ್ ನೆಟ್ಟಾರು ಎಲ್ಲರಿಗೂ ಬೇಕಾಗಿದ್ದ ಯುವಕ. ಪ್ರೀತಿ ಮತ್ತು ಆತ್ಮೀಯತೆಯಿಂದ ಬದುಕುತ್ತಿದ್ದ ಅಮಾಯಕ ಜೀವವೊಂದು ಬಲಿಯಾಗಿದೆ. ಎನ್‌ಐಎ ಇದರ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಅತೀ ಶೀಘ್ರವಾಗಿ ನ್ಯಾಯ ಸಿಗುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಹತ್ಯೆಯಾದ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಅಂಗಡಿಯಲ್ಲಿ ಕೆಲಸ ಕೊಟ್ಟಿದ್ದಾರೋ, ಯಾರಿಗೆ ಅಸೌಖ್ಯವಾದಾಗ ಆಸ್ಪತ್ರೆಗೆ ಕರೆದೊಯ್ದಿದ್ದರೋ, ಅಂತಹವರೇ ಪ್ರವೀಣನ ಚಲನವಲನಗಳನ್ನು ಹಂತಕರಿಗೆ ನೀಡಿದ್ದಾರೆ ಎಂದರೆ ಏನರ್ಥ? ಪ್ರವೀಣನನ್ನು ಟಾರ್ಗೆಟ್ ಮಾಡಿ ಕೊಲ್ಲಲಾಗಿದೆ.
ಕೇರಳ ಮಾದರಿಯಲ್ಲಿ ಈ ಹತ್ಯೆ ನಡೆದಿದೆ. ಪಿಎಫ್‌ಐನಂತಹ ಸಂಘಟನೆಗಳು ತರಬೇತಿ ಪಡೆದು ಕೊಲ್ಲುವ ರೀತಿ ಇದು. ಅಂದೇ ಈ ವಿಚಾರವನ್ನು ಕೇಂದ್ರ ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರಲ್ಲದೆ, ನಿನ್ನೆಯಷ್ಟೇ ತಲಶ್ಶೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಮನೆಯವರಿಗೆ ನ್ಯಾಯ ಸಿಗಬೇಕಿದ್ದರೆ ನಿಜವಾದ ಆರೋಪಿಗಳ ಬಂಧನವಾಗಬೇಕು ಎಂದರು. ಪಿಎಫ್‌ಐ ನಿಷೇಧದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಈ ಹಿಂದೆ ಸಿಮಿ ಸಂಘಟನೆ ಇತ್ತು. ಸಾಕಷ್ಟುಮಾಹಿತಿಗಳನ್ನು ಕಲೆ ಹಾಕಿ ಅದರ ನಿಷೇಧ ಮಾಡಲಾಗಿದೆ. ಪಿಎಫ್‌ಐ ನಿಷೇಧ ಮಾಡಿದರೆ ಅದು ಕೋರ್ಚ್‌ನಲ್ಲಿ ನಿಲ್ಲಬೇಕು. ಅದಕ್ಕಾಗಿ ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಇಂತಹ ಹತ್ಯೆಗಳಾದಾಗ ಆಕ್ರೋಶ ಬರುವುದು ಸಹಜ. ಅದರ ಹಿಂದೆ ನೋವಿದೆ, ನಮ್ಮ ಹುಡುಗರು ಸತ್ತಿದ್ದಾರೆ ಎಂಬ ಸಿಟ್ಟಿದೆ. ಕಾನೂನು ರೀತಿಯಲ್ಲೇ ಇದನ್ನು ಸರಿಮಾಡಬೇಕು. ಆ ಎಚ್ಚರಿಕೆಯನ್ನು ನಮ್ಮ ಕಾರ್ಯಕರ್ತರು ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಮಸೂದ್ ಕೊಲೆ ಷಡ್ಯಂತ್ರದ ಕೊಲೆಯಲ್ಲ. ಸಹಜವಾಗಿ ಹೊಡೆದಾಟದ ಸಂದರ್ಭದಲ್ಲಿ ನಡೆದ ಕೊಲೆ. ಇದರ ಹಿಂದೆ ದೇಶದ್ರೋಹದ ಪಿತೂರಿ ಇಲ್ಲ. ಆದರೆ ಪ್ರವೀಣ್ ಹತ್ಯೆ ದೇಶದ್ರೋಹದ ಪಿತೂರಿಯಿದೆ. ಆದರೆ ಯಾವ ಸಾವು ಕೂಡ ಅವರ ತಾಯಿಗೆ ದುಃಖ ತರಿಸುವಂತದ್ದು. ಹಾಗಾಗಿ ಎರಡೂ ಕೊಲೆಗಳ ಬಗ್ಗೆ ತನಿಖೆಯಾಗಲಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಪ್ರವೀಣ್ ರಕ್ಷೆ ಕಟ್ಟಿದ್ರು: ಪ್ರವೀಣ್ ಮನೆಯಲ್ಲಿ ಆರಂಭದಲ್ಲಿ ತಾಯಿ ರತ್ನಾವತಿ, ನಂತರ ಪತ್ನಿ ನೂತನ, ಬಳಿಕ ಪ್ರವೀಣ್ ಅವರ ಐದನೇ ದಿನದ ಕಾರ್ಯದ ಸ್ಥಳದಲ್ಲಿದ್ದ ತಂದೆ ಶೇಖರ ಪೂಜಾರಿ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಯಾವಾಗ ನ್ಯಾಯ ಕೊಡಿಸ್ತೀರಿ ಮೇಡಂ? ಕರ್ಮ ಮುಗಿಯುವ ಮೊದಲು ನ್ಯಾಯ ಸಿಗಬೇಕು ಎಂದು ಮನೆಯವರು ಹೇಳಿದಾಗ, ಪೊಲೀಸ್ ಅಧಿಕಾರಿಗಳ ಸತತ ಸಂಪರ್ಕದಲ್ಲಿದ್ದೇನೆ. ಘಟನೆ ಆದ ಮರುದಿನ ಬೆಳಗ್ಗೆಯೇ ಎನ್‌ಐಎ ತನಿಖೆಗೆ ಒತ್ತಾಯಿಸಿ ಪತ್ರ ಬರೆದಿದ್ದು, ಖುದ್ದು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಎನ್‌ಐಎಯವರು ತನಿಖೆ ನಡೆಸಿದರೆ ಬೇಗ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಸಚಿವೆ ಹೇಳಿದರು.
ಪ್ರವೀಣ್ ಹತ್ಯೆ ಪ್ರಕರಣ: ಕೇರಳ ಮೂಲದ ಶಂಕಿತ ವ್ಯಕ್ತಿ ಪೊಲೀಸ್ ವಶಕ್ಕೆ
ಮೊನ್ನೆ ಪ್ರತಿಭಟನೆ ನಡೆಸಿದವರ ಮೇಲೆ ಕೇಸು ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆ ಆದರೆ ಜಿಲ್ಲೆಯಲ್ಲಿ ಬಂದ್ ಮಾಡುತ್ತೇವೆ ಎಂದು ಸಂಬಂಧಿಕರು ಹೇಳಿದರು. ಅವರೆಲ್ಲ ನ್ಯಾಯಕ್ಕಾಗಿ ಆಗ್ರಹಿಸಿದವರು. ಅವರ ಮೇಲೆ ಕೇಸು ದಾಖಲಿಸಬಾರದು ಎಂದು ಪತ್ನಿ ನೂತನ ಹೇಳಿದರು. ‘ಇಲ್ಲ ಮಾತನಾಡುತ್ತೇನೆ’ ಎಂದು ಕರಂದ್ಲಾಜೆ ಭರವಸೆ ನೀಡಿದರು. ಪ್ರವೀಣ್ ನನ್ನ ಮನೆಯವನ ಹಾಗೆ. ಅದಕ್ಕೆಂದೇ ಸೆಕ್ಯುರಿಟಿ ಬೇಡ, ನನ್ನ ಮನೆಗೆ ಹೋದ ಹಾಗೆ ಎಂದು ಹೇಳಿ ನಾನು ಬಂದಿದ್ದೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದಾಗ, ಪ್ರವೀಣ್ ನಿಮಗೆ ರಕ್ಷೆ ಕಟ್ಟಿದ್ದ ಮೇಡಂ, ಆದರೆ ಅವರನ್ನೇ ಉಳಿಸಿಕೊಳ್ಳಲಾಗಲಿಲ್ಲ ಎಂದು ಸಂಬಂಧಿಕರು ಹೇಳಿದಾಗ ಸಚಿವೆ ಬೇಸರವಾದರು.
ತಿಂಗಳ ವೇತನ ನೀಡಿದ ಶೋಭಾ: ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ, ಮನೆಯವರಿಗೆ ಸಾಂತ್ವಾನ ಹೇಳಿದರಲ್ಲದೆ ತನ್ನ ಒಂದು ತಿಂಗಳ ಸಂಬಳದ ಚೆಕ್ ಹಸ್ತಾಂತರಿಸಿದರು. ಜತೆಗೆ ಬೆಂಗಳೂರಿನ ಸಂಘ ಸಂಸ್ಥೆಗಳ ನೆರವಿನೊಂದಿಗೆ 5 ಲಕ್ಷ ರು. ನಗದು ಹಸ್ತಾಂತರಿಸಿದರು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ಪ್ರಕಾಶ್ ಸಚಿವರ ಜತೆಗಿದ್ದರು.