MLC ಎಲೆಕ್ಷನ್: ಬಿಜೆಪಿ 7 ಮತಗಳು ಅಸಿಂಧು , ಆದರೂ ಗೆದ್ದ ಲಕ್ಷ್ಮಣ ಸವದಿ ಹುದ್ದೆ ಗಟ್ಟಿ

By Suvarna NewsFirst Published Feb 17, 2020, 7:34 PM IST
Highlights

ಸಚಿವ ಸ್ಥಾನದ ಅಸಮಾಧಾನ ನಡುವೆ ವಿಧಾನಪರಿಷತ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಡಿಸಿಎಂ ಹುದ್ದೆಯನ್ನು ಗಟ್ಟಿಮಾಡಿಕೊಂಡರು.ಆದ್ರೆ, ಕೆಲ ಬಿಜೆಪಿ ಶಾಸಕರುಗಳಿಗೆ ವೋಟ್ ಮಾಡುವ ಪದ್ಧತಿಯೇ ಗೊತ್ತಿಲ್ಲದೇ 7 ಮತಗಳು ಅಸಿಂಧು ಆಗಿವೆ.
 

ಬೆಂಗಳೂರು (ಫೆ.17): ಒಂದು ವಿಧಾನ ಪರಿಷತ್ ಉಪ ಚುನಾವಣೆ ಇಂದು [ಸೋಮವಾರ] ಮುಕ್ತಾಯವಾಗಿದ್ದು, ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವಿನ ನಗೆ ಬೀರಿದರು.

ಆದರೆ, ಈ ಚುನಾವಣೆಯಲ್ಲಿ ಮತ ಚಲಾಯಿಸಿದ 7 ಶಾಸಕರ ಮತಗಳು ಅಸಿಂಧು ಆಗಿರುವ ಘಟನೆಯೂ ನಡೆದಿದೆ. ಶಾಸಕರುಗಳಿಗೆಯೇ ಸರಿಯಾಗಿ ಮತ ಚಲಾವಣೆ ಮಾಡಲು ಬಂದಿಲ್ಲ ಅಂದ್ರೆ ಇವರು ಯಾವ ರೀತಿ ಕ್ಷೇತ್ರದ ಅಭಿವೃದ್ಧಿ ಮಾಡ್ತಾರೋ ಆ ದೇವರೇ ಕಾಪಾಡ್ಬೇಕು. 

MLC ಎಲೆಕ್ಷನ್: JDS ಪ್ಲಾನ್‌ಗೆ ಕೊಳ್ಳಿ ಇಟ್ಟ 'ಕೈ', ಸವದಿ ಹಾದಿ ಸುಗಮ

ಬಿಜೆಪಿ ಶಾಸಕರ ಪೈಕಿ ಅನಾರೋಗ್ಯ ಕಾರಣದಿಂದ ರಾಮದಾಸ್​ ಹೊರತುಪಡಿಸಿ ಉಳಿದ ಎಲ್ಲರು ವಿಧಾನಸೌಭೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ನಂತರ ಸಂಜೆ ವಿಷಾಲಾಕ್ಷಿ ನೇತೃತ್ವದಲ್ಲಿ ನಡೆದ ಮತ ಎಣಿಕೆಯಲ್ಲಿ ಒಟ್ಟು 120 ಮತಗಳ ಪೈಕಿ 113 ಮತಗಳು ಸವದಿ ಪರವಾಗಿ ಚಲಾವಣೆಯಾಗಿದ್ದು, 7 ಮತಗಳು ಅಸಿಂಧು ಎಂದು ಘೋಷಿಸಲಾಗಿದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ಸ್ಥಾನದಲ್ಲಿ ಮುಂದುವರೆಯಲು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಇಂದಿನ ವಿಧಾನ ಪರಿಷತ್ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಮೈತ್ರಿ ಅಭ್ಯರ್ಥಿ ಅನಿಲ್ ಕುಮಾರ್​ ನಿನ್ನೆಯೇ ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಕಾಂಗ್ರೆಸ್​ ಹಾಗೂ ಬಿಜೆಪಿ ಶಾಸಕರು ಮತ ಚಲಾಯಿಸಲು ಇಂದು ವಿಧಾನ ಪರಿಷತ್​ ಸಭೆಗೆ ಹಾಜರಾಗಿರಲಿಲ್ಲ.

ಮತ್ತೊಂದೆಜ್ಜೆ ಮುಂದಿಟ್ಟ ದೇವೇಗೌಡ: ಅಚ್ಚರಿ ಮೂಡಿಸಿದ ಜಿಟಿಡಿ ನಡೆ

ಉಪಚುನಾವಣೆಯಲ್ಲಿ  ರಿಷ್ವಾನ್ ಅರ್ಹದ್ ಅವರು ಶಿವಾಜಿ ನಗರದಿಂದ ಶಾಸಕರಾಗಿ ಆಯ್ಕೆಯಾದ ಕಾರಣ ಅವರು ಪರಿಷತ್ ಸದಸ್ಯ ಸ್ಥಾನ ಖಾಲಿಯಾಗಿತ್ತು. ಅದಕ್ಕೆ ಇಂದು ಎಲೆಕ್ಷನ್ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಗೆಲುವಿನ ನಗೆ ಬೀರಿದ್ದಾರೆ.

ಧನ್ಯವಾದಗಳು ತಿಳಿಸಿದ ಸವದಿ
ತಮ್ಮ ಗೆಲುವಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸವದಿ,  ತನ್ನನ್ನು ಆಯ್ಕೆ ಮಾಡಿದ ಎಲ್ಲಾ ಶಾಸಕರಿಗೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ಎಂದರು. ಅವಿರೋಧ ಆಯ್ಕೆ ನಡೆಯಬೇಕಿತ್ತು. ಆದರೆ ಅನಿವಾರ್ಯವಾಗಿ ಅನಿಲ್ ಕುಮಾರ್ ಸ್ಪರ್ಧೆಯಿಂದ  ಚುನಾವಣೆ ಮತದಾನ  ನಡೆಯಬೇಕಾಯಿತು. ಆದರೆ ಅನಿಲ್ ಕುಮಾರ್ ಬೆಂಬಲವಿಲ್ಲದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದರು. ಅವರಿಗೂ ಧನ್ಯವಾದ  ಎಂದು ಹೇಳಿದರು.

ಒಟ್ಟಿನಲ್ಲಿ ಪಕ್ಷಾಂತರಿಗಳಿಗೆ ಸ್ಥಾನಮಾನ ಕೊಡಬೇಕಾದ ಸ್ಥಿತಿ ಹಾಗೂ ಸಚಿವ ಸ್ಥಾನಕ್ಕಾಗಿ ಏರ್ಪಟ್ಟಿರುವ ಅಸಾಧಾನದ ಮಧ್ಯೆಯೂ ಲಕ್ಷ್ಮಣ ಸವದಿ ವಿಧಾನಪರಿಷತ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ತಮ್ಮ ಡಿಸಿಎಂ ಹುದ್ದೆಯನ್ನು ಗಟ್ಟಿಪಡಿಸಿಕೊಂಡರು.

click me!