ಬ್ಯಾಡ್ಮಿಂಟನ್ ಗುರು ಗೋಪಿಚಂದ್‌ರಿಂದ ಕೊರೋನಾ ಸಂಕಷ್ಟಕ್ಕೆ 26 ಲಕ್ಷ ರುಪಾಯಿ ದೇಣಿಗೆ

By Suvarna NewsFirst Published Apr 7, 2020, 11:25 AM IST
Highlights

ಕೊರೋನಾ ಸಂಕಷ್ಟಕ್ಕೆ ಹೋರಾಡುತ್ತಿರುವ ಭಾರತಕ್ಕೆ ಹಲವು ಕ್ರೀಡಾತಾರೆಯರು ನೆರವಿನ ಹಸ್ತ ನೀಡಿದ್ದಾರೆ. ಇದೀಗ ಪಿಎಂ ಕೇರ್ಸ್‌ಗೆ ಬ್ಯಾಡ್ಮಿಂಟನ್ ಗುರು ಪುಲ್ಲೇಲಾ ಗೋಪಿಚಂದ್, ಹಾಕಿ ಮಾಜಿ ನಾಯಕ ಧನರಾಜ್ ಫಿಳ್ಳೈ ದೇಣಿಗೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.07): ಕೊರೋನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಭಾರತದ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್‌, ಬಿಲಿಯರ್ಡ್ಸ್ ಪಟು ಪಂಕಜ್‌ ಅಡ್ವಾಣಿ, ಭಾರತ ಹಾಕಿ ಮಾಜಿ ನಾಯಕ ಧನರಾಜ್‌ ಪಿಳ್ಳೈ ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರರಿಗೆ ಪುಲ್ಲೇಲಾ ಗೋಪಿಚಂದ್‌ ವಾಟ್ಸ್‌ಆ್ಯಪ್‌ನಲ್ಲಿ ಪಾಠ

ಗೋಪಿಚಂದ್‌ 26 ಲಕ್ಷ ರುಪಾಯಿ ನೀಡಿದ್ದಾರೆ. ಇದರಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ 11 ಲಕ್ಷ, ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರುಪಾಯಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರುಪಾಯಿ ನೀಡಿರುವುದಾಗಿ ಗೋಪಿಚಂದ್‌ ಹೇಳಿದ್ದಾರೆ. 

ಕೊರೋನಾ ಸಂಕಷ್ಟ: PM CARES Fund ಗೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ ಯುವರಾಜ್ ಸಿಂಗ್..!

ಇನ್ನು ಬಿಲಿಯರ್ಡ್ಸ್ ಪಟು ಪಂಕಜ್ ಅಡ್ವಾಣಿ ಪಿಎಂ ಕೇರ್ಸ್‌ಗೆ 5 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್‌ ಪಿಳ್ಳೈ ಕೂಡಾ ಪಿಎಂ ಕೇರ್ಸ್‌ಗೆ 5 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಇನ್ನುಳಿದಂತೆ ಐ-ಲೀಗ್‌ನ ಮಿನರ್ವ ಫುಟ್ಬಾಲ್‌ ಕ್ಲಬ್‌, ಪಂಜಾಬ್‌, ಹರಾರ‍ಯಣ ಹಾಗೂ ಚಂಢೀಗಢ ರಾಜ್ಯ ಸರ್ಕಾರದ ಪರಿಹಾರ ನಿಧಿಗೆ ಕ್ರಮವಾಗಿ 5, 2 ಮತ್ತು 1 ಲಕ್ಷ ರುಪಾಯಿ ದೇಣಿಗೆ ನೀಡಿದೆ.
 

click me!
Last Updated Apr 7, 2020, 11:25 AM IST
click me!